ಜೆದ್ದಾ(www.Vknews.in): ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ ತಮ್ಮ ಕರೋನವೈರಸ್ ಸ್ಟೇಟಸ್ ಒಳಗೊಂಡಿರುವ ‘ತವಕ್ಕಲ್ನಾ’ ಆ್ಯಪ್ ಕಡ್ಡಾಯಗೊಳಿಸಿ ಸೌದಿ ವಿಮಾನಯಾನ ಪ್ರಾಧಿಕಾರವು ಆದೇಶ ಹೊರಡಿಸಿದೆ.
ಈ ಕುರಿತು ಎಲ್ಲಾ ವಿಮಾನ ಕಂಪೆನಿಗಳಿಗೆ ಆದೇಶ ಹೊರಡಿಸಿರುವ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ಲಝೀಝ್ ಅಲ್ ದುವೈಜ್ ‘ ಶೀಘ್ರವಾಗಿ ಪ್ರತಿಯೊಬ್ಬ ಪ್ರಯಾಣಿಕನ ವಿವರಗಳನ್ನು ಆತನ ತವಕ್ಕಲ್ನಾ ದೊಂದಿಗೆ ಲಿಂಕ್ ಮಾಡುವುದು ಹಾಗೂ ತವಕ್ಕಲ್ನಾದಲ್ಲಿ ಯಾವ ಪ್ರಯಾಣಿಕನ ಆರೋಗ್ಯ ಸ್ಥಿತಿಯು ಹಸಿರು ನಿಶಾನೆಯನ್ನು ಹೊಂದಿಲ್ಲವೋ ಅಂತಹ ಪ್ರಯಾಣಿಕರಿಗೆ ವಿಮಾನ ಪ್ರಯಾಣದ ಬೋರ್ಡಿಂಗ್ ಪಾಸ್ ನೀಡದಂತೆಯೂ ನಿರ್ದೇಶಿಸಲಾಗಿದೆ. ಮಾತ್ರವಲ್ಲ ಸೌದಿಯಲ್ಲಿರುವ ಪ್ರತಿಯೊಬ್ಬರೂ ಕೊವಿಡ್ ವ್ಯಾಕ್ಸಿನ್ ಪಡೆಯುವುದು ಕಡ್ಡಾಯವಾಗಿದ್ದು, ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣಕ್ಕೆ ಇದು ಮಾನದಂಡವಾಗಲಿದೆ ಎಂದವರು ಎಚ್ಚರಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.