(www.vknews.com) : ರಾಜ್ಯವನ್ನು ಅಡಿಮೇಲು ಮಾಡುತ್ತಿರುವ ಕೋವಿಡ್ ಕಾಟದಿಂದ ರಾಜ್ಯ ತತ್ತರಿಸುತ್ತಿದ್ದರೆ.. ಸದ್ಯ ಉಳ್ಳಾಲದ ಜನರಿಗೆ ವ್ಯಾಪಾರ – ಕೆಲಸ ಮಾಡಲು ಅಡಚಣೆ ಮತ್ತು ಲಾಕ್ ಡೌನ ನ್ನು ಬಿಟ್ಟರೆ.ದೇವರ ದಯೆ ಯಿಂದ ಕೋವಿಡ್ ಸೋಂಕುನಿಂದ ಚಿಂತಾಜನಕ ಪರಿಸ್ಥಿತಿ ಈ ತನಕ ಬರಲಿಲ್ಲ.
ಇಲ್ಲಿ ಶಾಸಕ ಖಾದರ್ ಊರು ಕೋಲುವಿನ ಆಶ್ರಯ ದಿಂದ ನಡೆಯತ್ತಿದ್ದರೂ. ತನ್ನ ಕ್ಷೇತ್ರದ ಸ್ಥಳಿಯ ಆಡಳಿತ-ಮಂತ್ರಿಗಳು- ವೈದ್ಯಾಧಿಕಾರಿಗಳು ಮತ್ತು ಅಧಿಕಾರಿ ದೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದ ಕಾರಣ ಕೋವಿಡ್ ಸದ್ಯ ಹತೋಟಿಲ್ಲಿದೆ…
ನಿನ್ನೆ ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ – ಜಿಲ್ಲಾಧಿಕಾರಿ ಯವರು ಶಾಸಕ ಖಾದರ್ ರೊಂದಿಗೆ ನಗರ ಸಭಾ ಕಚೇರಿ ಮತ್ತು ಉಳ್ಳಾಲ ಪ್ರಾಥಮಿಕ ಆರೋಗ್ಯ ಕ್ಕೆ ಕೇಂದ್ರಕ್ಕೆ ಭೇಟಿ *ಕೊಟ್ಟಿದ್ದಾರೆ..
ಊರು ಕೋಲು ಹಿಡಿದು ಕೊಂಡು ಕ್ಷೇತ್ರದ ಬಗ್ಗೆ ಅತೀವ ಕಾಳಜಿ ತೋರಿಸುತ್ತಿರುವ ಶಾಸಕ ಖಾದರನ್ನು ಉಸ್ತುವಾರಿ ಸಚಿವ ಕೋಟರು ಬಹಿರಂಗವಾಗಿ ಪ್ರಶಂಸೆ ಮಾಡಿದ್ದಾರೆ.
ಇಲ್ಲಿ ಅತೀ ಅಗತ್ಯವಾಗಿ ಆಗಬೇಕಾದ ಕೋವಿಡ್ ಸಂಬಂಧ ಕೆಲವು ಕೆಲಸ ಕಾರ್ಯಗಳ ಬಗ್ಗೆ ಶಾಸಕ ಖಾದರ್ ರವರು ಉಸ್ತುವಾರಿ ಮಂತ್ರಿಗಳಿಗೆ ವಿಸ್ತಾರವಾಗಿ ವಿವರಿಸಿದಾಗ… ಸರ್ಕಾರ ದಿಂದ ಸಹಾಯ ಮತ್ತು ಸಹಕಾರ ಕೊಡಲು ಸದಾ ಸಿದ್ಧ ಎಂದು ಉಸ್ತುವಾರಿ ಸಚಿವರು ಶಾಸಕರಿಗೆ ಭರವಸೆ ಕೊಟ್ಟರು.
ಊರು ಕೋಲನ್ನು ಹಿಡಿದು ಕೊಂಡು ಶಾಸಕ ಖಾದರ್ ಸಾಬರು ಉಸ್ತುವಾರಿ ಸಚಿವರು -ಜಿಲ್ಲಾಧಿಕಾರಿ ಗಳು -, ಇತರ ಅಧಿಕಾರಿ ಗಳು. ಮತ್ತು ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಹೆಜ್ಜೆ ಹಾಕುತ್ತಿರುವಾಗ ಶಾಸಕರ ಮೇಲೆ ಎಲ್ಲರೂ ಅಭಿಮಾನ ವ್ಯಕ್ತ ಪವಡಿಸುತ್ತಿದ್ದದ್ದು ಎದ್ದು ಕಾಣುತ್ತಿತ್ತು .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.