ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸುಳ್ಯ ಸರ್ಕಲ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಂದೂಕು ತಯಾರಿಕ ಘಟಕಕ್ಕೆ ದಾಳಿ ನಡೆಸಿ 4 ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ಪೋಲಿಸರ ಈ ಕಾರ್ಯವೈಖರಿಯನ್ನು ಎಸ್ಡಿಪಿಐ ಸ್ವಾಗತಿಸುತ್ತದೆ.
ಅದೇ ರೀತಿಯಲ್ಲಿ ಈ ಒಂದು ಅಕ್ರಮ ಬಂದೂಕು ತಯಾರಿಕೆಯ ಹಿಂದಿನ ಷಡ್ಯಂತರವನ್ನು ಪೋಲಿಸ್ ಇಲಾಖೆ ಬಯಲಿಗೆಳೆಯಬೇಕಿದೆ,ಆರೋಪಿಗಳು ಬಂದೂಕು ತಯಾರಿಸಿ ಯಾರಿಗೆ ಪೊರೈಕೆ ಮಾಡಲು ಬಯಸಿದ್ದರು, ಈ ಹಿಂದೆ ಯಾರಿಗೆಲ್ಲಾ ಪೊರೈಕೆ ಮಾಡಿದ್ದಾರೆ, ಎಂಬುದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಬಯಲಿಗೆಳೆಯಬೇಕು. ಈ ಹಿಂದೆಯೂ ಜಿಲ್ಲೆಯಲ್ಲಿ ಇಂತಹ ಹಲವಾರು ದುಷ್ಕ್ರತ್ಯಗಳು ನಡೆದಿದೆ,ಪುತ್ತೂರು ತಾಲೂಕಿನ ಈಶ್ವರಮಂಗಳದಲ್ಲಿ ಬಾಂಬ್ ತಯಾರಿಸುವ ಸಂದರ್ಭ ಸೆರೆ ಸಿಕ್ಕಿರುವುದು,
ಪತ್ರಕರ್ತೆ ಗೌರಿಶಂಕರ್ ಹತ್ಯೆಯ ಆರೋಪಿಗಳಿಗೆ ದುಷ್ಕ್ರತ್ಯ ಎಸಗಲು ತರಬೇತಿ ನೀಡಿರುವಂತಹ ಕೆಲವು ಘಟನೆಗಳು ನಡೆದಿರುವುದರಿಂದ ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿ ತನಿಖೆ ನಡೆಸಿ ಈ ಪ್ರಕರಣದ ನೈಜತೆಯನ್ನು ಬಯಲಿಗೆಳೆಯಬೇಕೆಂದು ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ರಾದ ಅಬ್ದುಲ್ ಕಲಾಂ ಸುಳ್ಯ ಪ್ರಕಟಣೆಯಲ್ಲಿ ಆಗ್ರಹಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.