(www.vknews.com) : ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ತಮ್ಮ ಸ್ವಂತ ಕಾರಿನ ಮೂಲಕ ಕೋವಿಡ್ ಸೊಂಕಿತರ ಉಚಿತ ಸೇವೆ ಮಾಡುತ್ತಿರುವ ಇಮ್ರಾನ್ ಅವರಿಗೆ ಸೋಮವಾರಪೇಟೆ ಹಿರಿಯ ನಾಗರಿಕರ ಸೇವಾ ಟ್ರಸ್ಟ್ ವತಿಯಿಂದ ಟ್ರಸ್ಟ್ ನ ಅಧ್ಯಕ್ಷರಾದ ಎಂ ಟಿ ದಾಮೋದರ್ ಅವರು ವೈಯಕ್ತಿಕವಾಗಿ 4000 ರೂ ನೀಡಿ ಪ್ರೋತ್ಸಾಹಿಸಿದರು.
ಇದು ವರೆಗು ಸುಮಾರು 59 ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿರುವ ಇಮ್ರಾನ್ ದಿನದ 24 ಗಂಟೆಯೂ ರೋಗಿಗಳ ಕರೆಗೆ ಸ್ಪಂದಿಸುತ್ತಿದ್ದಾರೆ.ಈ ಆರ್ಥಿಕ ಇನ್ನಷ್ಟು ರೋಗಿಗಳ ಸೇವೆಗೆ ಬಳಕೆಯಾಗಿಲಿ ಎಂದು ಆಶಿಸುತ್ತೆವೆ.
ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಎ.ಪಿ. ಪ್ರಸನ್ನ, ಕಾರ್ಯದರ್ಶಿ ಸಿ.ಕೆ. ಮಲ್ಲಪ್ಪ, ನಿರ್ದೇಶಕರಾದ ಜೋಕಿಮ್ ವಾಸು, ಥಾಮಸ್ ವಾಸು, ಈರಪ್ಪ ಉಪಸ್ಥಿತರಿದ್ದರು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.