ಜೆದ್ದಾ(www.vknews.in): ಮೇ 17ರಂದು ಸೌದಿ ಅರೇಬಿಯಾವು ತನ್ನೆಲ್ಲಾ ಭೂ, ಜಲ ಹಾಗೂ ವಾಯು ಮಾರ್ಗಗಳ ಸಂಚಾರಗಳನ್ನು ಪುನರಾರಂಭಿಸಲಿದ್ದು, ಮೇ 17 ರಂದೇ ವಿವಿದೆಡೆಗಳಿಂದು ಸುಮಾರು 385 ಅಂತರರಾಷ್ಚ್ರೀಯ ವಿಮಾನಗಳು ಸೌದಿ ಅರೇಬಿಯಾದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬಂದು ಇಳಿಯಲಿದೆ ಎಂದು ಸೌದಿ ಆಂತರಿಕ ಸಚಿವಾಲಯವು ಹೇಳಿದೆ. ಆದರೆ ಯಾವ ರಾಷ್ಟ್ರಗಳ ನಾಗರೀಕರು ನೇರವಾಗಿ ಸೌದಿ ಅರೇಬಿಯಾ ಪ್ರವೇಶಿಸಲು ಅರ್ಹರು ಎಂಬುವುದನ್ನು ಸಚಿವಾಲಯವು ಇನ್ನೂ ಕೂಡ ಸ್ಪಷ್ಟಪಡಿಸಿಲ್ಲ.
ಕೊವಿಡ್ ಸಾಂಕ್ರಾಮಿಕದ ನಡುವೆ ಅಂತರರಾಷ್ಟ್ರೀಯ ವಿಮಾನಯಾನವು ಕಟ್ಟುವಿಟ್ಟಿನ ಕೊವಿಡ್ ಮಾರ್ಗಸೂಚಿಯೊಂದಿಗೆ ಪ್ರಾರಂಭವಾಗಲಿದ್ದು, ವಿದೇಶದಿಂದ ಬಂದಿಳಿಯುವ ಎಲ್ಲಾ ವಿದೇಶಿಗಳಿಗೂ ಸೌದಿಯಲ್ಲಿ ಏಳು ದಿನಗಳ ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್ ಕಡ್ಡಾಯವಾಗಿದ್ದು, ಕ್ವಾರೆಂಟೈನ್ ನಿಯಮಗಳನ್ನು ಪಾಲಿಸದ ವಿದೇಶಿಗಳ ವಿರುದ್ಧ ಕಠಿನ ಕಾನೂನು ಕ್ರಮ ಜರುಗಿಸಲಾಗುವುದೆಂದು ಸಚಿವಾಲಯವು ಎಚ್ಚರಿಕೆ ನೀಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.