ಜೆದ್ದಾ(www.Vknews.in):ಇದೇ ತಿಂಗಳ 20 ರಿಂದ ಸೌದಿ ಪ್ರವೇಶಿಸುವ ಪ್ರತಿಯೊಬ್ಬ ವಿದೇಶಿಗೂ 7 ದಿನಗಳ ‘ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್’ ಕಡ್ಡಾಯಗೊಳಿಸಿ ಸೌದಿ ಆರೋಗ್ಯ ಸಚಿವಾಲಯವು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ನಾಗರೀಕರು ಸೌದಿ ಅರೇಬಿಯಾದ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಸೌದಿ ಪ್ರವಾಸೋದ್ಯಮ ಸಚಿವಾಲಯವು ದೃಡೀಕರಿಸಿದ ಹೋಟೆಲ್ ಅಥವಾ ಫರ್ನಿಶ್ಡ್ ಅಪಾರ್ಟ್ಮೆಂಟ್ ಒಂದರಲ್ಲಿ ಏಳು ದಿನಗಳ ಕ್ವಾರೆಂಟೈನ್ ಗೆ ತೆರಳ ಬೇಕಾಗುತ್ತದೆ. ಹಾಗೂ ಈ ಕ್ವಾರೆಂಟೈನ್ ಗೆ ತಗಲುವ ವೆಚ್ಚವನ್ನು ವಿಮಾನ ಟಿಕೆಟ್ ನೊಂದಿಗೆ ಸೇರಿಸಿ ಪ್ರಯಾಣಿಕರಿಂದ ವಸೂಲಿ ಮಾಡಲು ಆಂತರಿಕ ಸಚಿವಾಲಯವು ಎಲ್ಲಾ ವಿಮಾನ ಕಂಪೆನಿಗಳಿಗೆ ಆದೇಶಿಸಿದೆ.
ಸೌದಿ ಆಂತರಿಕ ಸಚಿವಾಲಯವು ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್ ದರಗಳ ಕುರಿತು ಇದುವರೆಗೂ ವಿಮಾನ ಕಂಪೆನಿಗಳಿಗೆ ಮಾಹಿತಿ ಹಾಗೂ ಸ್ಪಷ್ಟತೆ ನೀಡಿರಲಿಲ್ಲ. ಆದರೆ ಇದೀಗ ಸೌದಿ ಏರ್ ಲೈನ್ಸ್ ಈ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದು, ಇನ್ನುಳಿದ ವಿಮನ ಕಂಪೆನಿಗಳು ತಮ್ಮ ಪ್ಯಾಕೇಜ್ ದರಗಳನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
ಸೌದಿ ಏರ್ ಲೈನ್ಸ್ ಪ್ರಕಟಿಸಿರುವ ಏಳು ದಿನಗಳ ‘ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್ ನ ಪ್ಯಾಕೇಜ್ ಹೀಗಿದೆ: ರಿಯಾದ್ ಜೆದ್ದಾ, ದಮ್ಮಾಮ್ ಮುಂತಾದ ನಗರಗಳಲ್ಲಿ ದಿನಂಪ್ರತೀ ಮೂರು ಹೊತ್ತಿನ ಆಹಾರದ ಜೊತೆಗೆ ಟೂ ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ ಹಾಗೂ ಎರಡು ಬಾರಿ ಪಿಸಿಆರ್ ಟೆಸ್ಟ್ ಒಳಗೊಂಡ ಪ್ಯಾಕೇಜ್ ಸರಿಸುಮಾರು 40,000 ರೂಪಾಯಿಗಳು, ಅದೇ ಪ್ಯಾಕೇಜ್ ತ್ರೀ ಸ್ಟಾರ್ ಹೋಟೆಲ್ ವಾಸ್ತವ್ಯವಾಗಿದ್ದಲ್ಲಿ ಸರಿಸುವಾರು 55,000 ರೂಪಾಯಿಗಳು ಹಾಗೂ ಫೈವ್ ಸ್ಟಾರ್ ಹೊಟೇಲ್ ಆಗಿದ್ದಲ್ಲಿ ಸರಿಸುಮಾರು 70,000 ರೂಪಾಯಿಗಳು. ತುಲಿಪ್ ಇನ್, ಲಾ ಮೆರಿಡಿಯನ್ ಹಾಗೂ ಇಂಟರ್ ಕಾಂಟಿನೆಂಟಲ್ ಹೋಟೆಲ್ ಗಳಲ್ಲಿ ಈ ದರಗಳಲ್ಲಿ ವ್ಯತ್ಯಾಸವಾಗುತ್ತದೆ.
ಫರ್ನಿಷ್ಢ್ ಅಪಾರ್ಟ್ ಮೆಂಟ್ ಆಗಿದ್ದಲ್ಸಿ ಸರಿಮುಮಾರು 50,000 ರೂಪಾಯಿಗಳಷ್ಟು ವೆಚ್ಚ ತಗಲುತ್ತದೆ. ಕ್ವಾರೆಂಟೈನ್ ಸಮಯದಲ್ಲಿ ಒಂದು ರೂಮಿನಲ್ಲಿ ಓರ್ವ ವ್ಯಕ್ತಿ ವಾಸ್ತವ್ಯಕ್ಕೆ ಮಾತ್ರ ಅನುಮತಿಯಿದ್ದು. ಕುಟುಂಬ ಜೊತೆಗಿರುವವರಿಗೆ ಒಂದು ರೂಮಿನಲ್ಲಿ ಒಂದಕ್ಕಿಂತ ಅಧಿಕ ಮಂದಿಗೆ ವಾಸ್ತವ್ಯ ಹೂಡಬಹುದಾಗಿದೆ. ಕ್ವಾರೆಂಟೈನ್ ಪ್ಯಾಕೇಜ್ ದರಗಳು ನಗರಗಳ ಮೇಲೆ ಆದಾರಿತವಾಗಿರುತ್ತದೆೆ. ದೊಡ್ಡ ನಗರಗಳಲ್ಲಿ ಈ ದರವು ಅಧಿಕವಾಗಿದ್ದರೆ. ಸಣ್ಣ ನಗರಗಳಲ್ಲಿ ಪ್ಯಾಕೇಜ್ ದರವು ಕಡಿಮೆಯಾಗಿರುತ್ತದೆ. ಸಣ್ಣ ನಗರಗಳ ಕ್ವಾರೆಂಟೈನ್ ದರಗಳ ಕುರಿತು ಹಾಗೂ ಭೂ ಮಾರ್ಗವಾಗಿ ಸೌದಿ ಪ್ರವೇಶಿಸುವ ವಿದೇಶಿಗಳ ಕ್ವಾರೆಂಟೈನ್ ಕುರಿತು ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.