ಕೋಲಾರ(www.vknews.com) ರಾಜ್ಯ ಸರ್ಕಾರವೂ ಇತ್ತೀಚಿಗೆ ಘೋಷಣೆ ಮಾಡಿರುವ ಅಲ್ಪ ಪ್ರಮಾಣದ ಕೋವಿಡ್ ಪರಿಹಾರಕ್ಕೆ ಅಸಮಾ ಧಾನಗೊಂಡಿರುವ ಆಡಳಿತ ಪಕ್ಷದ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾವು ಬೆಳೆಗಾ ರರಿಗೆ ಹೆಕ್ಟೇರ್ಗೆ 50 ಸಾವಿರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ತೋಟಗಾರಿಕೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಮಾವು ಬೆಳೆಗಾರರ ನೆರವಿಗೆ ಬನ್ನಿ ಪ್ರತಿ ಹೆಕ್ಟೇರ್ ಮಾವಿಗೆ 50 ಸಾವಿರ ರೂ ಪರಿಹಾರ ಘೋಷಿಸಬೇಕು . ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ತೋಟಗಾರಿಕಾ ಸಚಿವ ಆರ್.ಶಂಕರ್ ಅವರಿಗೆ ಮನವಿ ಸಲ್ಲಿಸಿರುವ ವೈ.ಎ. ನಾರಾಯಣಸ್ವಾಮಿ ಕೋಲಾರ , ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ , ರಾಮನಗರ ಜಿಲ್ಲೆಗಳು ಮಾವಿಗೆ ಪ್ರಸಿದ್ದಿಯಾದ ಜಿಲ್ಲೆಗಳಾಗಿವೆ ಎಂದು ತಿಳಿಸಿದ್ದಾರೆ.
ಒಂದು ಹೆಕ್ಟೇರ್ ಮಾವು ಬೆಳೆಯಲು ಉಳುಮೆ ಗೊಬ್ಬರ ಕಳೆ ತೆಗೆಯುವಿಕೆ ಔಷಧಿ ಸಿಂಪಡಣೆ ಕಟಾವು ಸೇರಿ ಕನಿಷ್ಟ 30 ರಿಂದ 40 ಸಾವಿರ ಖರ್ಚು ಬರುತ್ತದೆ ನಾನು ಸ್ವತಃ ಮಾವು ಬೆಳೆಗಾರ ನಾಗಿದ್ದು , ಈ ಅನುಭವ ಹೊಂದಿದೇನೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಕಳೆದ 10-15 ವರ್ಷಗಳಲ್ಲಿ ಒಂದೆರಡು ವರ್ಷಗಳನ್ನು ಬಿಟ್ಟರೆ ಉಳಿದಂತೆ ರೈತರು ಆಲಿಕಲ್ಲು ಬಿಸಿಲಿನ ತಾಪ ಅಕಾಲಿಕ ಮಳೆ ಮತ್ತಿತರ ಕಾರಣಗಳಿಂದ ಬೆಳೆದ ಬೆಳೆಗೆ ಬೆಲೆ ಸಿಗದೇ ಸಂಕಷ್ಟ ಅನುಭವಿಸಿಕೊಂಡೇ ಬಂದಿದ್ದಾರೆ ಎಂದು ತಿಳಿಸಿದರು. ಪ್ರತಿ ವರ್ಷವೂ ಆಗುತ್ತಿರುವ ನಷ್ಟದಿಂದ ಕಳೆದ ವರ್ಷಗಳಲ್ಲಿ ಮಾವಿನ ಮರಕ್ಕೆ ಕೊಡಲಿ ಹಾಕುವಷ್ಟರ ಮಟ್ಟಿಗೆ ರೈತ ನೋವನ್ನು ಅನುಭವಿಸಿದ್ದಾನೆ. ಇದರ ಜತೆಗೆ ಈ ಬಾರಿಯೂ ಕೊವಿಡ್ನಿಂದಾಗಿ ಮಾವಿಗೆ ಮಾರುಕಟ್ಟೆ , ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಇಷ್ಟೊಂದು ಸಂಕಷ್ಟದಲ್ಲೂ ಧೃತಿಗೆಡದೇ , ಆತ್ಮಹತ್ಯೆ ಮಾಡಿ ಕೊಳ್ಳದೇ ಆತ್ಮಸ್ಥೆರ್ಯದಿಂದಿರುವ ಈ ಜಿಲ್ಲೆಗಳ ರೈತರ ನೆರವಿಗೆ ಸರ್ಕಾರ ನಿಲ್ಲಬೇಕಾಗಿದೆ . ಬರಡು ಜಿಲ್ಲೆಯಲ್ಲೂ ಬೆವರು ಸುರಿಸಿ ಬೆಳೆ ಬೆಳೆಯುವ ರೈತರ ಪ್ರತಿ ಹೆಕ್ಟೇರ್ ಮಾವಿಗೆ 50 ಸಾವಿರ ರೂ ಪರಿಹಾರ ಘೋಷಿಸುವ ಮೂಲಕ ಬೆಳೆಗಾರರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಸರ್ಕಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.