ಶ್ರೀನಿವಾಸಪುರ(www.vknews.com) : ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳು ಹಾಗೂ ತಾಲ್ಲೂಕಿನ ಚಲ್ಲಿಗಾನಹಳ್ಳಿ ಗ್ರಾಮದ ಸಮೀಪದ ಕೋವಿಡ್ ಕೇಂದ್ರದ ಸೋಂಕಿತರಿಗೆ ಬುಧವಾರ ಹಣ್ಣು ಹಂಪಲು ವಿತರಿಸಲಾಯಿತು.
ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾಗಿದ್ದ ಕೆ.ಎಸ್.ರೆಡ್ಡಪ್ಪ ಅವರು ಸಮಾಜ ಮುಖಿ ನಿಲುವನ್ನು ಹೊಂದಿದ್ದು , ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು .
ಅವರ ಸ್ಮರಣಾರ್ಥ ಕೊರೊನಾ ಸೋಂಕಿತರು ಹಾಗೂ ಇತರ ರೋಗಿಗಳು ಸೇರಿದಂತೆ ಒಟ್ಟು ೩೦೦ ಜನರಿಗೆ ಹಣ್ಣು,ಬ್ರೆಡ್ ಹಣ್ಣಿನರಸ ಮತ್ತಿತರ ತಿನಿಸುಗಳನ್ನು ನೀಡಲಾಗುತ್ತಿದೆ ಎಂದು ಅಮರನಾಥರೆಡ್ಡಿ ಹೇಳಿದರು. ಮುಖಂಡರಾದ ಮಧುಸೂಧನರೆಡ್ಡಿ,ಇಮ್ರಾನ್,ವೇಣು,ಶಿವರಾಜ್,ಹರೀಶ್ ಯಾದವ್,ನರಸಿಂಹ,ಮಂಜುನಾಥ್ ಇದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.