ಮಂಜೇಶ್ವರ(ವಿಶ್ವಕನ್ನಡಿಗ ನ್ಯೂಸ್): ಸತತ ಮೂರನೇ ದಿನ ಎಸ್.ಡಿ.ಪಿ.ಐ ಕಾರ್ಯಕರ್ತರು ಮಂಜೇಶ್ವರ ಪಂಚಾಯತ್ ಸಾರ್ವಜನಿಕ ಆರೋಗ್ಯ ಕೇಂದ್ರ (ಮಂಜೇಶ್ವರ ಸಿ.ಎಚ್.ಸಿ) ಸರ್ಕಾರಿ ಆಸ್ಪತ್ರೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.
ಪಂಚಾಯಿತ್ನ ಪ್ರಮುಖ ಸಾರ್ವಜನಿಕ ಆರೋಗ್ಯ ಕೇಂದ್ರವಾದ ಸರ್ಕಾರಿ ಆಸ್ಪತ್ರೆಯು ಕೋವಿಡ್ ರೋಗಿಗಳು ಸೇರಿದಂತೆ ಪ್ರತಿದಿನ ಹೆಚ್ಚಿನ ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆಯುವ ಕೇಂದ್ರವಾಗಿದೆ.
ಮಳೆ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದಾದ ಸಾಧ್ಯತೆಗಳು ಹೆಚ್ಚಿರುವ ಕಾರಣ ಆಸ್ಪತ್ರೆ ಪರಿಸರದಲ್ಲಿ ಕಟ್ಟಿ ನಿಂತ ಮಲಿನ ನೀರು, ದಪ್ಪನೆ ಬೆಳೆದು ನಿಂತ ಕಾಡು ಸಸ್ಯಗಳು , ಪ್ಲಾಸ್ಟಿಕ್ ಕಸಗಳು , ಮಲಿನತೆಯಿಂದ ತುಂಬಿಕೊಂಡಿರುವ ಗೆರಟೆ ಇತ್ಯಾದಿಗಳು , ಇತರ ಪರಿಸರ ಪ್ರದೇಶಗಳು ಕಳೆದ ಮೂರು ದಿವಸಗಳಿಂದ ನಿರಂತರವಾಗಿ SDPI ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಅಶ್ರಫ್ ಬಡಾಜೆ, SDPI ಮಂಡಲ ಕಾರ್ಯದರ್ಶಿ ಮುಬಾರಕ್ ಕಡಂಬಾರ್, ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಚೇರ್ಮಾನ್ ಹಮೀದ್ ಹೊಸಂಗಡಿ, ಯಾಕೂಬ್ ಹೊಸಂಗಡಿ ಮುಂತಾದವರ ಮುಂದಾಳುತ್ವದಲ್ಲಿ ಶುಚೀಕರಣ ಕೆಲಸಗಳನ್ನು ಮಾಡಲಾಯಿತು. ಶುಚೀಕರಣ ಕೆಲಸದಲ್ಲಿ ಹಾರಿಸ್ ಸುಬೈರ್ , ಅಲ್ತಾಫ್ ಉದ್ಯಾವರ , ಯಾಸೀನ್ ಪೊಸೋಟ್, ಸಿದ್ದೀಕ್ ಹೊಸಂಗಡಿ, ಸಿಷಾದ್ , ಅಸ್ಕರ್ ಮೊದಲಾದವರು ಸೇರಿದ್ದರು.
ಶುಚೀಕರಣದ ಪರಿಸರವನ್ನು ಸಂದರ್ಶನ ಮಾಡಿದ ಮಂಜೇಶ್ವರ ಬ್ಲಾಕ್ ಪಂಚಾಯತ್ ಅದ್ಯಕ್ಷೆ ಶಮೀನಾ ಟೀಚರ್, ಉಪಾದ್ಯಕ್ಷ ಮುಹಮ್ಮದ್ ಹನೀಫ್ ಹಾಗೂ ಬ್ಲಾಕ್ ಪಂಚಾಯತ್ ಮೆಂಬರ್ ಅಶೋಕ್ ಕುಮಾರ್ ಬಂದಿಯೋಡ್ ಮುಂತಾದವರು SDPI ನಡೆಸಿದ ಶುಚೀಕರಣ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ಎಲ್ಲಾ SDPI ಕಾರ್ಯಕರ್ತರಿಗೂ ಧನ್ಯವಾದಗಳನ್ನು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.