ಮಸ್ಕತ್(www.vknews.in): ಓಮಾನ್ ನಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಉದ್ಯೋಗಕ್ಕಾಗಿ ಓಮಾನ್ ಜನತೆ ಸತತ ನಾಲ್ಕನೇ ದಿನವು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದೆ. ಪ್ರತಿಭಟನೆಯ ವೇಳೆ ಜನತೆ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಯತ್ನಿಸಿರುವ ಘಟನೆಯೂ ವರದಿಯಾಗಿದೆ. ಬಂದರು ನಗರವಾದ ಸೋಹರ್ ನಲ್ಲಿ ಪ್ರತಿಭಟನೆ ತೀವೃವಾಗಿದ್ದು, ಉದ್ಯೋಗ ನೀಡದೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ. ಪ್ರತಿಭಟನೆಯಿಂದಾಗಿ ಮುಖ್ಯ ರಸ್ತೆಗಳಲ್ಲಿನ ವಾಹನ ಸಂಚಾರವು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಗುಂಡು ಹಾರಿಸಿದ ಕುರಿತು ರಾಯ್ಟರ್ಸ್ ವರದಿ ಮಾಡಿದೆ.
ಓಮಾನ್ ಹೊಸ ಆಡಳಿತಗಾರ ಸುಲ್ತಾನ್ ಹೈಥಮ್ ಗೆ ಈ ಹೊಸ ನಿರುದ್ಯೋಗ ಸಮಸ್ಯೆಯು ದೊಡ್ಡ ಸವಾಲನ್ನೇ ಒಡ್ಡಿದ್ದು, ಸ್ಥಳೀಯರಿಗೆ ತಕ್ಷಣ 32,000 ಉದ್ಯೋಗಗಳನ್ನು ಸೃಷ್ಟಿಸುವಂತೆ ಸುಲ್ತಾನ್ ಆದೇಶಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.