ಕೋಲಾರ(www.vknews.com) :- ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದ ಮಹಿಳೆಯರ ಸಂಕಷ್ಟಕ್ಕೆ ಮುಖ್ಯಮಂತ್ರಿ ಸ್ಪಂದಿಸಿ ಸಾಲದ ಕಂತು ಮರುಪಾವತಿ ಅವಧಿಯನ್ನು 3 ತಿಂಗಳು ವಿಸ್ತರಿಸಿದ್ದರೂ , ಸಹಕಾರ ಇಲಾಖೆ ಅದಕ್ಕೆ ಸಿಎಂ ಆದೇಶವನ್ನೇ ಧಿಕ್ಕರಿಸಿ ಜೂನ್ ಕೊನೆಗೆ ಪೂರ್ಣ 3 ಕಂತು ಒಂದೇ ಬಾರಿ ಪಾವತಿಗೆ ಆದೇಶ ಹೊರಡಿಸಿರುವುದು ತಾಯಂದಿರ ತೀವ್ರ ಟೀಕೆಗೆ ಗುರಿಯಾಗಿದೆ . ಸಾಲ ಮರುಪಾವತಿ ಸಂಬಂಧ ಸಹಕಾರ ಇಲಾಖೆಯ ಆದೇಶದಿಂದ ಆಕ್ರೋಶ ಗೊಂಡ ವಿವಿಧ ಮಹಿಳಾ ಸಂಘಗಳ ಪ್ರತಿನಿಧಿಗಳು ನಗರದ ಕೇಂದ್ರ ಸಹಕಾರಿ ಬ್ಯಾಂಕಿಗೆ ಧಾವಿಸಿ , ಮಾಧ್ಯಮದೊಂದಿಗೆ ಮಾತನಾಡಿದರು .
ಕೋವಿಡ ಲಾಕ್ಡೌನ್ ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲದ ಕಂತು ಪಾವತಿಯನ್ನು 3 ತಿಂಗಳು ವಿಸ್ತರಿಸಿ ಘೋಷಿಸುವ ಮೂಲಕ ರೈತರು , ಸ್ತ್ರೀಶಕ್ತಿ ಸಂಘಗಳ ಲಕ್ಷಾಂತರ ಮಹಿಳೆಯರ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ ಮೇ 21 ರಂದು ಸಹಕಾರ ಸಂಘಗಳ ನಿಬಂಧಕರು ಹೊರಡಿಸಿರುವ ಅವೈಜ್ಞಾನಿಕ ಆದೇಶದಲ್ಲಿ ಸಾಲ ಪಾವತಿಗೆ ಮಾತ್ರ 3 ತಿಂಗಳು ಅವಕಾಶ ನೀಡಿ , ಒಂದೇ ಬಾರಿ ಮೂರು ಕಂತನ್ನು ಪಾವತಿಸುವಂತೆ ತಿಳಿಸಿರುವ ಮೂಲಕ ಮುಖ್ಯಮಂತ್ರಿಗಳ ಘೋಷಣೆಯನ್ನೇ ಕಿರುಚಿ ಸುತ್ತೋಲೆ ಕಳುಹಿಸಿ ಸರ್ಕಾರದ ವಿರುದ್ಧ ರೈತರು ಮಹಿಳೆಯರು ತಿರುಗಿ ಬೀಳುವಂತೆ ಮಾಡಿದ್ದಾರೆ ಎಂದರು. ಕಳೆದ ವರ್ಷದ ಲಾಕ್ಡನ್ ಸಂದರ್ಭದಲ್ಲಿಯೂ ಕುಂತು ಪಾವತಿಯನ್ನು 3 ತಿಂಗಳು ಮುಂದೂಡಲಾಗಿತ್ತು .
ಅದೇ ಮಾದರಿಯಲ್ಲಿ ರೈತರು , ಮಹಿಳಾ ಸಂಘಗಳ ಲಕ್ಷಾಂತರ ತಾಯಂದಿರ ನೋವಿಗೆ ಸ್ಪಂದಿಸಿದ ಯಡಿಯೂರಪ್ಪ ಈ ಬಾರಿಯ ಕಂತು ಪಾವತಿಯನ್ನು 3 ತಿಂಗಳು ವಿಸ್ತರಿಸಿ ಘೋಷಣೆ ಮಾಡಿದ್ದಾರೆ . ಹಳ್ಳಿಗೂ ಹಬ್ಬಿದ ಮಹಾವು ಮಹಿಳಾ ಸ್ವಸಹಾಯ್ದೆ ಸಂಘಗಳಿಗೆ ಸಹಕಾರ ಬ್ಯಾಂಕುಗಳ ಮೂಲಕ ಬಡ್ಡಿ ರಹಿತ ಸಾಲ ಒದಗಿಸುವ ಮೂಲಕ ಸರ್ಕಾರ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ನೆರವಾಗಿರುವುದು ಶ್ಲಾಘನೀಯ ಎಂದರು. ಸಹಕಾರ ಬ್ಯಾಂಕುಗಳು ಒದಗಿಸಿರುವ ಬಡ್ಡಿ ರಹಿತ ಸಾಲ ಸೌಲಭ್ಯದಿಂದ ಅನೇಕ ಕುಟುಂಬಗಳು ಇಂದು ಬದುಕು ಕಟ್ಟಿಕೊಂಡಿವೆ , ಸಂತ ಉದ್ಯೋಗ ನಡೆಸುವ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಸದೃಢಗೊಳ್ಳುವತ್ತ ಸಾಗಿದ್ದು , ಮೀಟರ್ ಬಡ್ಡಿ ದಂಧೆಯಿಂದ ರಕ್ಷಣೆಯೂ ಸಿಕ್ಕಿದೆ ಎಂದು ತಿಳಿಸಿದರು.
ಆದರೆ ಕೋವಿಡ್ ಮಹಾಮಾರಿ ಇಂದು ಹಳ್ಳಿಹಳ್ಳಿಗೂ ಹರಡುವ ಮೂಲಕ ರೈತರು , ಮಹಿಳೆಯರು ಆತಂಕದಿಂದ ಹುದುಕುವ ಪರಿಸ್ಥಿತಿ ನಿರ್ಮಿಸಿದೆ . ಇಂತಹ ಸಂದರ್ಭದಲ್ಲಿ ನಮಗೆ ಸಾಲ ಮತ್ತು ಬೇಡ ಆದರೆ ನಮ್ಮ ಸಾಲದ ಕಂತು ಪಾವತಿ ಅವಧಿಯನ್ನು ಮುಂದೂಡಿ ಎಂಬ ಮಹಿಳೆಯರ ಕೂಗು ಮುಖ್ಯಮಂತ್ರಿಗಳಿಗೆ ತಲುಪಿದ್ದರಿಂದಲೇ ಅವರು ಪ್ರಾರ್ಕಡ್ ಘೋಚಿಸಿ ಕಂತು ಪಾವತಿ ವಿಸ್ತರಿಸಿದ್ದರು . ಕನಿಕ್ ಸಂಕಷ್ಟದಲ್ಲಿ ಬದುಕು ನಡೆಸುವುದೇ ದುಸ್ತರವಾಗಿದೆ , ಸಾವು ಬದುಕಿನ ನಡುವೆ ಹೋರಾಟ ನಡೆಸುವ ಸಂದರ್ಭದಲ್ಲಿ ಮಹಿಳಾ ಸಂಘಗಳ ಪ್ರತಿನಿಧಿಗಳು ವಾರದ ಸಭೆ ನಡೆಸಿ ಒಂದೆಡೆ ಸೇರಿ ಸಿಂಗಳ ಕಂತು ಸಂಗ್ರಹಿಸುವುದು ಸಾಧ್ಯವಿಲ್ಲ ಎಂದ ಮಹಿಳೆಯರು , ಒಂದೇ ಬಾರಿ ಮೂರು ತಿಂಗಳ ಕಂತುಗಳು ಪಾವತಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳೇ ಸಾಲದ ಕಂತು 3 ತಿಂಗಳು ವಿಸ್ತರಿಸಿರುವಾಗ ಸಹಕಾರ ಇಲಾಖೆಯ ಈ ಧೋರಣೆ ಏಕೆ ? ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಆದೇಶ ಪಾಲಿಸಬೇಕೆಂಬ ಹೊಣೆಗಾರಿಕೆ ಇಲ್ಲವೇ ? ಅಥವಾ ಮುಖ್ಯಮಂತ್ರಿಗಳು ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಅಡಗಿದೆಯೇ ಎಂದು ಕಿಡಿಕಾರಿದರು . ಸಹಕಾರ ಇಲಾಖೆಯ ಬೇಜವಬ್ದಾರಿ ಧೋರಣೆಯಿಂದಾಗಿ ಸಹಕಾರಿ ಬ್ಯಾಂಕುಗಳ ಸಾಲದಿಂದ ಬದುಕು ಕಟ್ಟಿಕೊಂಡಿರುವ ಮಹಿಳೆಯರು ಮತ್ತೆ ಮೀಟರ್ ಬಡ್ಡಿ ದಂಧೆಗೆ ಬಲಿಯಾಗುವ ಸಾಧ್ಯತೆ ಇದ್ದು , ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಿ ಅಗತ್ಯ ನಿರ್ದೇಶನ ನೀಡಬೇಕಾಗಿದೆ . ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದಿರುವ ಲಕ್ಷಾಂತರ ಮಹಿಳೆಯರು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸಹಕಾರ ಇಲಾಖೆ ನಿಬಂಧಕರಿಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಡೆದಿರುವ ಪ್ರಯತ್ನಕ್ಕೆ ಕೊನೆ ಕೊನಯಾಡಬೇಕಾಗಿದೆ . ಇಲ್ಲವಾದಲ್ಲಿ ರಾಜ್ಯದ ಲಕ್ಷಾಂತರ ಮಹಿಳೆಯರು , ರೈತರು ಸರ್ಕಾರದ ವಿರುದ್ಧ ಸಿಡಿದೇಳುವ ಸಾಧ್ಯತೆ ಇದ್ದು , ಮುಖ್ಯಮಂತ್ರಿಗಳು ಕೂಡಲೇ ಸಹಕಾರ ಇಲಾಖೆಗೆ ಚುರುಕು ಮುಟಿಸಬೇಕು , ಒಮ್ಮೆಲೆ 3 ಕಂತು ಪಾವತಿಯ ಸುಕೂಲ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.