ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಮಡಿಕೇರಿ- ಮಂಗಳೂರು ಹೆದ್ದಾರಿಯ ಪಯಶ್ವಿನಿ ನದಿ ಕಿನಾರೆಯಲ್ಲಿ ನೆಲೆನಿಂತಿರುವ, ಮನೋಹರವಾದ ವಾತಾವರಣದಿಂದ ಕೂಡಿದ ಕ್ಯಾಂಪಸ್.
ಹೌದು, ವಿಧ್ಯೆ ಎಂಬುದು ಪವಿತ್ರ ಇಸ್ಲಾಂ ಧರ್ಮದ ಜೀವನಾಡಿಯಾಗಿದೆ. ಮಾನವನು ಮತ್ತು ಇತರ ಜೀವಿಗಳಿಗಿರುವ ವ್ಯತ್ಯಾಸ ವಿಧ್ಯೆ ಯಾಗಿದೆ. ವಿದ್ಯೆಯನ್ನು ಎಲ್ಲಿ ಕಂಡರೂ ಹೆಕ್ಕಿ ತೆಗೆಯಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲ್ಪಿಸಿದ್ದಾರೆ. ಇದೀಗ ವಿಧ್ಯಾದಾಹಿಗಳಿಗೆ ಫಾತಿಮತುಝಹ್ರಾಅ ಸ್ಪೂರ್ತಿ ನೀಡುವ ಕೇಂದ್ರವಾಗಿದೆ, ಪ್ರತಿಯೊಂದು ಕಕ್ಷಕರ ಮನದಲ್ಲಿ ಮೂಡಿ ಬರುವ ಅತಿಯಾದ ಆಸೆ ತಮ್ಮ ಮಕ್ಕಳು ಉನ್ನತ ವಿದ್ಯಾವಂತರಾಗಿ ಇಹ-ಪರ ವಿಜಯ ಹೂಂದಬೇಕು ಎಂಬದು,,.
ನಮ್ಮ ಸಂಸ್ಥೆಯೂ 19/12/2020 ರಂದು ದಕ್ಷಿಣ ಕನ್ನಡ ಸಂಯುಕ್ತ ಜಮಾಅತ್ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ರವರ ಪುಣ್ಯ ಹಸ್ತದಿಂದ ಉದ್ಘಾಟಿಸಲಾಯಿತು. ಅಲ್ ಹಮ್ದು ಲಿಲ್ಲಾಹ್ ,ಇದೀಗ ಇ.ಕೆ ಮುಹಮ್ಮದ್ ಸ್ವಾಲಿಹ್ ಹನೀಫಿ ಉಸ್ತಾದ್ ಸುಣ್ಣಮೂಲೆ ರವರ ಸಾರಥ್ಯದಲ್ಲಿ ಶರೀಅತುಲ್ ಇಸ್ಲಾಮಿನ ಎಲ್ಲಾ ವಿಧ್ಯೆಗಳು ಹಾಗೂ ಇನ್ನಿತರ ಹಲವಾರು ಭೌತಿಕ ವಿದ್ಯೆಗಳನ್ನು ನೀಡುತ್ತಾ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ ಕಲಿಯುವಂತಹ ವಿದ್ಯಾರ್ಥಿಗಳನ್ನು ನುರಿತ ಶಿಕ್ಷಕಿಯರನ್ನಾಗಿಸಿಸುವುದು ಹಾಗೂ ಇಸ್ಲಾಮಿನ ಚೌಕಟ್ಟಿನೊಳಗೆ ಜೀವಿಸುವವರನ್ನಾಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.