ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಭಾರತ ದೇಶವು ದಾರ್ಶನಿಕರ ಪುಣ್ಯಭೂಮಿ ಸಹಸ್ರಾರು ವರ್ಷಗಳಿಂದ ಇಲ್ಲಿ ಅನೇಕ ಆಚಾರ್ಯರುˌ ಮುನಿ ವರೇಣ್ಯರು ಧರ್ಮಭೋದೆ ಮಾಡಿ ಸ್ವಾತ್ಮ ಕಲ್ಯಾಣದ ಜೊತೆಗೆ ಪರ ಕಲ್ಯಾಣವಾಗಲು ಕಾರಣವಾದ ಪವಿತ್ರ ಭೂಮಿಯಿದುˌ ಪ್ರಸ್ತುತ ಕಾಲದಲ್ಲಿ ಆಚಾರ್ಯ ೧೦೮ ಪುಷ್ಪದಂತ ಸಾಗರಮುನಿಮಹಾರಾಜರ ಪರಮ ಶಿಷ್ಯರಾದ ಮುನಿಶ್ರೀ ೧೦೮ ತರುಣ ಸಾಗರ ಮಹಾರಾಜರು ಇಡೀ ಭಾರತದಾದ್ಯಂತ ಧರ್ಮ ಜ್ಞಾನ ಜ್ಯೋತಿಯನ್ನು ಬೆಳಗಿಸಿದವರು ಅವರ ಪ್ರವಚನಗಳು ಕಟೋರ ಕಹಿಯಾಗಿರುತ್ತಿತ್ತು ಅಷ್ಟೇ ಸತ್ಯವಾಗಿತ್ತು ಅದು ಜೈನ- ಜೈನೇತರರು ಕೂಡ ಒಪ್ಪುವ ಕಟು ಸತ್ಯದ ಮಾತು ಆಗಿರುತ್ತಿತ್ತು ಸರ್ವಧರ್ಮಿಯರು ಒಪ್ಪಿ ಮಾನ್ಯತೆ ಮಾಡುತಿದ್ದರು ಅವರ ಪ್ರವಚನದ ನೂರಾರು ಹೊತ್ತಿಗೆಗಳುˌ ಬಿಡುಗಡೆಗೊಂಡು ಲಕ್ಷಾಂತರ ಪ್ರತಿಗಳು ಮುದ್ರಣಗೊಂಡಿವೆ… ಅವರ ಮಾತುಗಳು ದೇಶ-ವಿದೇಶದ ನಾನಾ ದಿನಪತ್ರಿಕೆಗಳಲ್ಲಿ ನಿತ್ಯವೂ ಬೆಳಗಿನ ಕಹಿ ಮಾತ್ರೆಯ ರೂಪದಲ್ಲಿ ಜನಮನ ಮುಟ್ಟಿದ್ದು ಅಷ್ಟೇ ಸತ್ಯˌ ಅವರ ಮಾತು ಕಟು ಆಗಿರುತಿತ್ತು ಆದರೆ ಅದೆಷ್ಟೋ ಸಂಸಾರವನ್ನು ಮನೆ- ಮನವನ್ನು ಸುಸಂಸ್ಕೃತಗೊಳಿಸಿದ ಕೀರ್ತಿ ಪೂಜ್ಯ ಸಂತರಿಗೆ ಸಲ್ಲುವಂತಹದು… ಇಂತಹ ಅನರ್ಘ್ಯರತ್ನದ ಅಕಸ್ಮಾತ್ ಸಮಾಧಿಯು ಇಡೀ ಜೈನ ಸಮಾಜಕ್ಕೆ ದೇಶಕ್ಕೆ ಮಾತ್ರವಲ್ಲಾ ವಿಶ್ವಕ್ಕೆ ಆದಂತಹ ತುಂಬಲಾರದ ದೊಡ್ಡ ನಷ್ಟ ಅವರ ಕಾಯ ಅಳಿದರು ಅವರ ಪ್ರತಿ ಮಾತುಗಳು ಜೀವನದ ಹಾಸುಹೊಕ್ಕಾಗಿ ಪ್ರತಿ ಕ್ಷಣ ಕ್ಷಣ ಆದರಣೀಯ ಅನುಕರಣೀಯವಾಗಿದೆ..
ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಜೈನ ಸಮಾಜಿಕ-ಧಾರ್ಮಿಕ ಆನ್ಲೈನ್ ಕಾರ್ಯಕ್ರಮಗಳ ಮೂಲಕ ಜನ ಮನ ಮುಟ್ಟಿರುವ ನಮ್ಮ ಕರ್ನಾಟಕದಲ್ಲಿ ಜೈನಧರ್ಮ ಬಳಗವು ಹೊಸ ಹೆಜ್ಜೆಯೊಂದನ್ನು ಇಡುತ್ತಿದೆ ರಾಜ್ಯ- ರಾಷ್ಟ್ರಪ್ರಶಸ್ತಿ ವಿಜೇತೆ ಕುಮಾರಿ ಯುವ ಪ್ರತಿಭೆ ಕು.ಪಂಚಮಿ ಮಾರೂರು ಅವರ ದ್ವನಿ ಯಲ್ಲಿ ವಾರಕ್ಕೊಂದು ವಿಡಿಯೋ ಕಹಿ ಮಾತ್ರೆಯನ್ನು ನೀಡುವ ಯೋಚನೆ ನಮ್ಮದು ಇದನ್ನು ಸರ್ವರು ಸ್ವೀಕರಿಸಿ ತಮ್ಮ ಜೀವನದ ಸುಖ ಶಾಂತಿ ನೆಮ್ಮದಿಯನ್ನು ಪಡೆದು ಸಮಾಜದ ಉನ್ನತಿಗೆ ಕಾರಣ ಆಗಲಿ ಎಂಬುದು ನಮ್ಮ ಬಳಗದ ಸದುದ್ದೇಶ
ಈ ವಿಡಿಯೋ ರೂಪದ ಕಹಿ ಮಾತ್ರೆಯ ಪ್ರಥಮ ವಿಡಿಯೋ ಇದೇ ಬರುವ ಜೂನ್ 6 ಭಾನುವಾರ ಸಾಯಂಕಾಲ 4:30 ಗಂಟೆಗೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆˌ
ಈ ಕಾರ್ಯಕ್ರಮದಲ್ಲಿ ಆಚಾರ್ಯ ಪುಷ್ಪದಂತ ಸಾಗರ ಮಹಾರಾಜರ ಶಿಷ್ಯ ತರುಣ ಸಾಗರ ಮಹಾರಾಜರ ಒಡನಾಡಿಯಾಗಿದ್ದ ಮುನಿಶ್ರೀ ೧೦೮ ಪ್ರಸಂಗ ಸಾಗರ ಮುನಿ ಮಹಾರಾಜರು ಪಾವನ ಸಾನಿಧ್ಯ ವಹಿಸಲಿದ್ದಾರೆˌ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀಡಾ| ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ದಿವ್ಯಉಪಸ್ಥಿತಿ ನೀಡಲಿದ್ದಾರೆ ಈ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ತ್ಯಾಗಿ ಸೇವಾ ಸಂಘದಲ್ಲಿ ಸದಾ ಸೇವಾ ನಿರತರಾಗಿ ಸಕ್ರಿಯರಾಗಿರುವ ಶ್ರೀಮತಿ ಅನಿತಾಸುರೇಂದ್ರ ಕುಮಾರ್ ಧರ್ಮಸ್ಥಳ ಅವರು ಮತ್ತು ನಾಡಿನ ಹೆಸರಾಂತ ಪತ್ರಕರ್ತ ವಿಶ್ವವಾಣಿ ಪತ್ರಿಕೆಯ ಸಂಪಾದಕ ತರುಣ್ ಸಾಗರ ಮಹಾರಾಜರ ಪರಮ ಭಕ್ತ ಶ್ರೀಯುತ ವಿಶ್ವೇಶ್ವರ ಭಟ್ ರವರು ಮತ್ತು ರಾಜ್ಯ – ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯುವ ಪ್ರತಿಭೆ ಕು.ಪಂಚಮಿ ಮಾರೂರು ಭಾಗವಹಿಸಲಿದ್ದಾರೆ
ಈ ಕಾರ್ಯಕ್ರಮವು ಕರ್ನಾಟಕದಲ್ಲಿ ಜೈನಧರ್ಮ ಫೇಸ್ಬುಕ್ ಪುಟದಲ್ಲಿ ನೇರ ಪ್ರಸಾರವಾಗಲಿದೆ ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ
ಕರ್ನಾಟಕದಲ್ಲಿ ಜೈನಧರ್ಮ ಬಳಗ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.