ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): HMC ಜನಜಾಗೃತ್ ದಳ಼್ ಎಂಬ ಸಂಘಟನೆಯು ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನಲ್ಲಿ ಲೋಕಾರ್ಪಣೆ ಗೊಂಡು, ಜಾತಿ,ಮತ, ಧರ್ಮ, ಹಾಗೂ ರಾಜಕೀಯ ರಹಿತವಾಗಿ ನಿರ್ಗತಿಕರ ಹಾಗೂ ಬಡವರ ಆಶಾಕಿರಣವಾಗಿ ಮುಂದೆ ಬಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ತಾಲೂಕಿನಾದ್ಯಂತ ಬಡವರ, ನಿರ್ಗತಿಕರಿಗೆ ಸಹಾಯ ಮಾಡಲು ಈ ತಂಡವು ಊರು, ಕೇರಿ ಹುಡುಕಿ ಅವರಿಗೆ ಬೇಕಾಗುವ ದಿನಸಿ ಸಾಮಾಗ್ರಿಗಳು, ತರಕಾರಿ, ಔಷಧೋಪಚಾರಕ್ಕಾಗಿ ಧನಸಹಾಯ ಮಾಡುತ್ತಾ ಬಂದಿದೆ.
ಉದ್ಯಮಿಗಳಾದ ಮನ್ಮಿತ್ ರೈ ಓಲೆಮುಂಡೋವು ಅವರು ಸಂಘಟನೆಗೆ ಸರ್ವ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಸಂಘಟನೆಯ ಬೆನ್ನೆಲುಬಾಗಿ , ರಾತ್ರಿ ಹಗಲೆನ್ನದೆ HMC ಜನಜಾಗೃತ್ ದಳದ ಅಬ್ದುಲ್ ರಝಾಕ್ ಬಿ.ಎಚ್, ಭಾನು ಪ್ರಕಾಶ್, ಸಲೀಂ ಬರೆಪ್ಪಾಡಿ, ಸಾಜಿದ್ ಬರೆಪ್ಪಾಡಿ ಜೊತೆಯಾಗಿ ಸೇವೆಯಲ್ಲಿ ತೊಡಗಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.