ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್ ):ಜಿಲ್ಲೆಯಲ್ಲಿ 50 ಕ್ಕಿಂತ ಹೆಚ್ಚು ಕೋರೋನ ಪಾಸಿಟಿವ್ ಸೊಂಕೀತರು ಇರುವ ಗ್ರಾಮಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿರುವ ಹಿನ್ನೆಲೆಯಲ್ಲಿ,ಕುಂದಾಪುರ ತಾಲೂಕಿನ ಕೈಗಾರಿಕಾ ಪ್ರದೇಶ ಹಾಗೂ ಉತ್ತಮ ವ್ಯಾವಹಾರಿಕ ತಾಣ ಎಸಿಕೊಂಡಿರುವ ದಿನನಿತ್ಯ ಅತೀ ಹೆಚ್ಚು ಜನ ಹಾಗೂ ವಾಹನ ಸಂಚಾರ ಹೊಂದಿರುವ ಕೋಟೇಶ್ವರ ಪೇಟೆ ಸಂಪೂರ್ಣವಾಗಿ ಸ್ತಬ್ದವಾಗಿತ್ತು.ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟಂತೆ ಆಸ್ಪತ್ರೆಗೆ ತೆರಳಲು ಹಾಗೂ ಅಗತ್ಯ ಔಷಧಿಗಳನ್ನು ಮೆಡಿಕಲ್ ಗೆ ಹೋಗಿ ಕೊಂಡುಕೊಳ್ಳಲು ಬೆರಳೆಣಿಕೆಯ ಜನರು ತಿರುಗಾಡುವುದನ್ನು ಹೊರತುಪಡಿಸಿ ಕೋಟೇಶ್ವರ ಬಹುತೇಕ ಲಾಕ್ ಆಗಿತ್ತು.ಜಿಲ್ಲೆಯಲ್ಲಿ ಸುಮಾರು 35 ಗ್ರಾಮಗಳು 50 ಕ್ಕಿಂತ ಹೆಚ್ಚು ಸೋಂಕಿತರನ್ನು ಹೊಂದಿದ್ದರಿಂದ ಜಿಲ್ಲಾಧಿಕಾರಿ ಆದೇಶ ಅನ್ವಯ ಇದೀಗ ಆ ಗ್ರಾಮಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.