ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಹಾಗೂ ಅಧೀನದ ಐದು ಸೆಕ್ಟರ್ ಗಳು ಹಾಗೂ 27 ಯುನಿಟ್ ಗಳ ವತಿಯಿಂದ ಜೂನ್ 5ರ ವಿಶ್ವ ಪರಿಸರ ದಿನ ಸರಕಾರದ ನಿಯಮಗಳನ್ನು ಪಾಲಿಸುತ್ತಾ ತಾಲೂಕಿನಾದ್ಯಂತ ಆಚರಿಸಲಾಯಿತು.
ಸೆಕ್ಟರ್ ಸಮಿತಿಗಳ ಅಧೀನದಲ್ಲಿ ಸಾವಿರಕ್ಕೂ ಮಿಕ್ಕ ಸಸಿಗಳನ್ನು ಯುನಿಟ್ ಸಮಿತಿಗಳಿಗೆ ಹಸ್ತಾಂತರಿಸಿ ಕಾರ್ಯಕರ್ತರು ಮನೆಯ ಅಂಗಳಗಳಲ್ಲಿ ಸಸಿಗಳನ್ನು ನೆಟ್ಟರು. ಕ್ಯಾಂಪಸ್, ದಅವಾ, ರೈಂಬೋ ವಿದ್ಯಾರ್ಥಿಗಳು ಪ್ರತ್ಯೇಕವಾಗಿಯೂ ಎಲ್ಲಯೂ ಒಟ್ಟಾಗಿಯೂ ಈ ವರ್ಷದ ಪರಿಸರ ದಿನವನ್ನು ಆಚರಿಸಲಾಯಿತು.
ವಿವಿಧ ಯುನಿಟ್ ಕೇಂದ್ರಗಳಲ್ಲಿ ಎಸ್ಸೆಸ್ಸೆಫ್ ದ.ಕ (ಈಸ್ಟ್) ಜಿಲ್ಲಾಧ್ಯಕ್ಷ ಜಿ.ಕೆ ಇಬ್ರಾಹೀಂ ಅಂಜದಿ, ಎಸ್.ವೈ.ಎಸ್ ದ.ಕ (ಈಸ್ಟ್) ಜಿಲ್ಲಾ ಸದಸ್ಯ ಸಿದ್ದೀಖ್ ಕಟ್ಟೆಕಾರ್, ಎಸ್ಸೆಸ್ಸೆಫ್ ದ.ಕ (ಈಸ್ಟ್) ಜಿಲ್ಲಾ ಸದಸ್ಯರಾದ ಜುನೈದ್ ಸಖಾಫಿ ಜೀರ್ಮುಖಿ, ಕಲಾಂ ಝುಹ್ರಿ ಬೆಳ್ಳಾರೆ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕೋಶಾಧಿಕಾರಿ ಟಿ.ಎಂ ಅಬ್ದುರ್ರಹ್ಮಾನ್ ಸಖಾಫಿ ಮುಂತಾದ ನಾಯಕರು ಚಾಲನೆ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.