ಜೆದ್ದಾ(www.Vknews.in): ಅನೇಕ ದಿನಗಳಿಂದ ಅನಿವಾಸಿ ಭಾರತೀಯರಿಗೆ ಕಗ್ಗಂಟಾಗಿದ್ದ ಸಮಸ್ಯೆಯೊಂದು ಪರಿಹಾರವಾಗಿದೆ. ಭಾರತದ ಕೋವಿಶೀಲ್ಡ್ ಲಸಿಕೆ ಸರ್ಟಿಫಿಕೆಟ್ ಅಂಗೀಕರಿಸಲು ಸೌದಿ ಅರೇಬಿಯಾ ಒಪ್ಪಿದೆ ಎಂದು ಭಾರತದ ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ. ಸೌದಿ ಅರೇಬಿಯಾದಲ್ಲಿ ನೀಡುವ ಆಕ್ಸ್’ಫರ್ಡ್ ಅಸ್ಟ್ರಾ ಝೆನೆಕಾ ಹಾಗೂ ಭಾರತದಲ್ಲಿ ನೀಡುವ ಕೋವಿಶೀಲ್ಡ್ ಒಂದೇ ಆಗಿದ್ದರು ಭಾರತದಲ್ಲಿ ನೀಡುವ ವ್ಯಾಕ್ಸಿನ್ ಸರ್ಟಿಫಿಕೆಟಿನ್ನು ಸೌದಿ ಅರೇಬಿಯಾವು ಸ್ವೀಕರಿಸುತ್ತಿರಲಿಲ್ಲ. ಭಾರತದ ರಾಯಭಾರ ಕಚೇರಿಯ ಸತತ ಮಾತುಕತೆಯ ಫಲವಾಗಿ ಇದೀಗ ಸೌದಿ ಸರಕಾರವು ಭಾರತದ ಸರ್ಟಿಫಿಕೆಟಿಗೆ ಅಂಗೀಕಾರ ನೀಡಿದೆ. ಸೌದಿ ಅರೇಬಿಯಾದ ಈ ನಿರ್ಧಾರವು ಅನಿವಾಸಿ ಭಾರತೀಯರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.