ಕೋಲಾರ(www.vknews.com):- ಕೋವಿಡ್ ಲಸಿಕೆಯ ಬಗ್ಗೆ ಯಾವುದೇ ಆತಂಕಕ್ಕೊಳಗಾಗದೆ ಸಾರ್ವಜನಿಕರು ತಪ್ಪದೇ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಕೋಲಾರ ನಗರಸಭಾ ಸದಸ್ಯ ಬಿ.ಎಂ ಮುಬಾರಕ್ ಹೇಳಿದರು.
ನಗರದ ಹೊರವಲಯದ ಕೋಗಿಲಹಳ್ಳಿ ಉರ್ದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೊರೋನಾದ ಬಗ್ಗೆ ಯಾರಿಗೂ ಭಯ ಬೇಡ ಧೈರ್ಯದಿಂದ ಲಸಿಕೆ ಪಡೆಯುವ ಮೂಲಕ ಕರೋನಾದಿಂದ ಮುಕ್ತರಾಗೋಣ ಎಂದರು.
ನಗರಸಭಾ ಅಧ್ಯಕ್ಷೆ ಶ್ವೇತಾ ಶಬರೀಶ್ ಮಾತನಾಡಿ ಪ್ರತಿಯೊಬ್ಬರು ಸರ್ಕಾರದ ಮಾರ್ಗಸೂಚಿಗಳಾದ ಮಾಸ್ಕ್ , ಸ್ಯಾನಿಟೈಜರ್ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ತಮ್ಮ ಕುಟುಂಬ ಹಾಗೂ ಸಮುದಾಯವನ್ನು ಕೊರೋನಾದಿಂದ ರಕ್ಷಿಸಿಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ,ಶಬರೀಶ್ ಹಬೀದ್, ಮಲ್ಲಿಕಾರ್ಜುನ ,ಲೋಕೇಶ್ ,ಡಾ .ರ್ಪಿಸ್ ಸೇರಿದಂತೆ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.