ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಎಸ್ ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಬೆಳ್ಳಾರೆ ಶಾಖೆಯು ಕಳೆದ ಹಲವಾರು ವರ್ಷಗಳಿಂದ ಬೆಳ್ಳಾರೆ ಪರಿಸರದಲ್ಲಿ, ಸಾಂಘಿಕ ರಂಗದಲ್ಲಿ ತನ್ನ ಚಾಪನ್ನು ಮೂಡಿಸಿ, ಬಡ,ನಿರ್ಗತಿಕ,ಅನಾಥ ಕುಟುಂಬಗಳಿಗೆ ಆಸರೆಯಾಗಿ ಬಹಳಷ್ಟು ಕಾರುಣ್ಯ ಸೇವೆಯೊಂದಿಗೆ ಮುನ್ನುಗ್ಗುತ್ತಿದ್ದು,
ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಬೆಳ್ಳಾರೆ ವ್ಯಾಪ್ತಿಯ ಸುಮಾರು 80 ಆಯ್ದ ಬಡ ಕುಟುಂಬ ಗಳಿಗೆ ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ಬೆಳ್ಳಾರೆ ಶಾಖೆ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದಾರುಲ್ ಹಿಕ್ಮ ಅಧ್ಯಕ್ಷರು ಹಸನ್ ಸಖಾಫಿ,ದಾವೂದ್ ಸಅದಿ ಎಸ್.ವೈ.ಎಸ್ ಬೆಳ್ಳಾರೆ ಬ್ರಾಂಚ್ ಅಧ್ಯಕ್ಷರು ಮಹ್ಮೂದ್ ಬೆಳ್ಳಾರೆ,ಸೆಂಟರ್ ಅಧ್ಯಕ್ಷರು ಸತ್ತಾರ್ ಸಖಾಫಿ,ಬ್ರಾಂಚ್ ಕಾರ್ಯದರ್ಶಿ ಹನೀಫ್ ಸಖಾಫಿ, ದ.ಕ ಈಸ್ಟ್ ಸದಸ್ಯ ಶಂಸುದ್ದೀನ್, ಎಸ್ಸೆಸ್ಸೆಫ್ ದ.ಕ ಈಸ್ಟ್ ಸದಸ್ಯ ಕಲಾಂ ಝುಹ್ರಿ, ಬೆಳ್ಳಾರೆ ಗ್ರಾ.ಪಂ.ಸದಸ್ಯ ಇಕ್ಬಾಲ್ ಬೆಳ್ಳಾರೆ, ಮತ್ತು ಎಸ್.ಎಸ್.ಎಫ್ ಬೆಳ್ಳಾರೆ ಶಾಖೆ ಅಧ್ಯಕ್ಷರು ನೌಷಾದ್ ಅಹ್ಸನಿ ಕಾರ್ಯದರ್ಶಿ ನವಾಝ್ ಹಾಗೂ ಮುಸ್ತಫಾ ಮಾಸ್ತಿಕಟ್ಟೆ,ಹಮೀದ್ ಆಲ್ಫಾ,ಹನೀಫ್ ಮುಸ್ಲಿಯಾರ್,ಝಕರಿಯಾ ಆಲ್ಫಾ,ಯೂಸುಫ್ ಬಿಸ್ಮಿಲ್ಲಾ,ಮಹಮ್ಮದ್ ಕರಾವಳಿ,ರವೂಫ್ ಪಾಲ್ತಾಡ್,ಶಮ್ಮಾಸ್ ಸಅದಿ,ಇರ್ಷಾದ್ ಸಅದಿ,ಇರ್ಫಾನ್,ಸಾಬಿತ್,ಅಲ್ತಾಫ್,ರಾಫಿ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.