ಬಳ್ಳಾರಿ ಜೂ 8 (http://www.vknews.com): ಫ್ಯಾಸಿಸ್ಟ್ ಅಜೆಂಡಾದ ಭಾಗವಾಗಿ ಕರ್ನಾಟಕದಲ್ಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ
ಖಂಡಿಸಿ ರಾಜ್ಯಾದ್ಯಂತ 100 ಕಡೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ , ಸಿರುಗುಪ್ಪ ಮತ್ತು ಬಳ್ಳಾರಿ ಯೂನಿಟ್ ವ್ಯಾಪ್ತಿಯಲ್ಲಿ ಪ್ರತಿಭಟಿಸಲಾಯಿತು. ಕೆಲವು ದಿನಗಳ ಹಿಂದೆ ಉಪಮುಖ್ಯಮಂತ್ರಿಗಳು ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದೆಂದು ಹೇಳಿಕೆ ನೀಡಿದ್ದು, ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಫ್ಯಾಸಿಸ್ಟ್ ಅಜೆಂಡಾದ ಒಂದು ಭಾಗವಾದ ಶಿಕ್ಷಣದ ಕೇಸರೀಕರಣದ ಭಾಗವಾಗಿದೆ ಇದನ್ನು ರಾಜ್ಯದಲ್ಲಿ ಅನುಷ್ಟಾನ ಗೊಳಿಸಲು ವಿದ್ಯಾರ್ಥಿ ಸಮುದಾಯ ಬಿಡುವುದಿಲ್ಲವೆಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಸುಹೈಲ್, ಕಾರ್ಯದರ್ಶಿ ಫೈಜ್, ಜಂಟಿ ಕಾರ್ಯದರ್ಶಿ ಹಬೀಬ್ ಹಾಗೂ ನಾಜಾರ್, ಖಜಾಂಚಿ ಯುಸೂಫ್ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಫಯಾಝ್, ಜಮೀರ್, ಶಾನವಾಜ್ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.