ಜೆದ್ದಾ(www.vknews.in): ಕರೋನಾ ವೈರಸ್ ಸಾಂಕ್ರಾಮಿಕ ಮಾರ್ಗಸೂಚಿಯೊಂದಿಗೆ ನಡೆಯುವ ಈ ಬಾರುಯ ಹಜ್ ಸೇವೆಗೆ ಮನುಷ್ಯರ ಬದಲಿಗೆ ರೊಬೋಟ್ ಗಳನ್ನು ಉಪಯೋಗಿಸಲು ಸೌದಿ ಹಜ್ ಮಂತ್ರಾಲಯ ತೀರ್ಮಾನಿಸಿದೆ. ಹಜ್ ವೇಳೆಯಲ್ಲಿ ಜನ ಸಂದಣಿಯನ್ನು ನಿಯಂತ್ರಿಸಲು, ಹಜ್ಜಾಜ್ ಗಳ ಹಜ್ ಕರ್ಮದ ರೂಪುರೇಷೆಗಳನ್ನು ಹಾಗೂ ಠಿಕಾಣಿ ಸ್ಥಳಗಳ ನಕ್ಷೆಗಳನ್ನು ತಿಳಿಸಿಕೊಡಲು, ಹಜ್ಜಾಜ್ ಗಳ ನಡುವೆ ಸಾಮಾಜಿಕ ಅಂತರ ಪಾಲಿಸಲು, ಪವಿತ್ರ ಹಜ್ ಕರ್ಮಗಳ ಭಾಗವಾದ ಮಿನಾ, ಅರಫಾಗಳಲ್ಲಿ ಪಾಲಿಸಬೇಕಾದ ಕರ್ಮಗಳ ವಿವರಗಳ ಪರಿಚಯ ಮಾಡಿಕೊಡಲು ಈ ರೊಬೋಟ್ ಗಳನ್ನು ಬಳಸಲಾಗುತ್ತಿದೆ. ಈ ಮೂಲಕ ಈ ಬಾರಿಯ ಹಜ್ ಗೆ ಸೇವಕರ ಬದಲಾಗಿ ರೊಬೋಟ್ ಗಳನ್ನು ಬಳಸಲು ನಿರ್ಧರಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.