(www.vknews.com) : ಮೊಡವೆ ಗುಳ್ಳೆಗಳನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಮೊಡವೆ ಮತ್ತು ಅದರ ವಿಕಾರ ಕಲೆಗಳು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಅದು ಎಷ್ಟು ತೀವ್ರವಾಗಿರುತ್ತದೆ ಮತ್ತು ಒಬ್ಬ ವ್ಯಕ್ತಿಯು ಅದನ್ನು ಹೇಗೆ ಪರಿಗಣಿಸುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ರಾತ್ರೋರಾತ್ರಿ ಯಾರೂ ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ. ಇದನ್ನು ಕೊನೆಗಾಣಿಸಲು ಸೂಕ್ತವಾದ ಚಿಕಿತ್ಸೆ ಮತ್ತು ಸರಿಯಾದ ತಡೆಗಟ್ಟುವ ಕ್ರಮಗಳು ಅನುಸರಿಸ ಬೇಕಾಗುತ್ತವೆ ಮತ್ತು ಇವು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ ನಂತರ ಸಂಪೂರ್ಣವಾಗಿ ಗುಣವಾಗುತ್ತವೆ. ಮೊಡವೆ/ಮೊಡವೆಗಳು/ಬಿರುಕುಗಳು/ಗುಳ್ಳೆಗಳು ಎಂದು ಸಹ ಕರೆಯಲ್ಪಡುವ ಹಲವಾರು ರೀತಿಯ ಮೊಡವೆಗಳಿವೆ ಮತ್ತು ಅವುಗಳ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಕೆಲವೊಮ್ಮೆ ಕಠಿಣವಾಗಿರುತ್ತದೆ. ಆದರೆ ಮುಖ್ಯವಾಗಿ ಆರು ಬಗೆಯ ಮೊಡವೆಗಳು ನಿಮ್ಮ ಮೈಬಣ್ಣವನ್ನು ನಿಜವಾಗಿಯೂ ಕೆಡಿಸುತ್ತದೆ.
2) ಬ್ಲ್ಯಾಕ್ಹೆಡ್ಗಳು – ವೈಟ್ಹೆಡ್ಗಳಿಗಿಂತ ಭಿನ್ನವಾಗಿ, ಬ್ಲ್ಯಾಕ್ಹೆಡ್ಗಳನ್ನು ಓಪನ್ ಕಾಮೆಡೋನ್ ಎಂದು ಕರೆಯಲಾಗುತ್ತದೆ ಏಕೆಂದರೆ ಗುಳ್ಳೆಗಳ/ರಂಧ್ರದ ತಲೆ ಗಾಳಿಗೆ ತೆರೆದಿರುತ್ತದೆ. ಮುಚ್ಚಿದಾಗ/ ಕ್ಲಾಗ್ಗಳು ಆಮ್ಲಜನಕದೊಂದಿಗೆ ಸಂಪರ್ಕಕ್ಕೆ ಬಂದಾಗ ಬಣ್ಣವನ್ನು ಬದಲಾಯಿಸುತ್ತವೆ, ಆಗ ಹೊರನೋಟ ಗಾಢವಾಗಿ ಕಾಣಿಸುತ್ತದೆ. ಬ್ಲ್ಯಾಕ್ಹೆಡ್ಗಳನ್ನು ಹೊರತೆಗೆಯಲು ಪೋರ್ ಸ್ತ್ರಿಫ್ಸ್/ ರಂಧ್ರದ ಪಟ್ಟಿಗಳನ್ನು ಬಳಸುವುದನ್ನು ತಪ್ಪಿಸಲು ಪ್ರಯತ್ನಿಸಿ. ರಂಧ್ರದ ಪಟ್ಟಿಗಳು ಅಪಘರ್ಷಕ, ತಾತ್ಕಾಲಿಕ ಪರಿಹಾರ ಆಗಿದ್ದು, ಅದು ನಿಮ್ಮ ಚರ್ಮದ ಮೇಲಿನ ಪದರವನ್ನು ಹಾನಿಗೊಳಿಸುತ್ತದೆ ಮತ್ತು ಇದು ಮೊಡವೆಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.
4) ಪಸ್ಟಲ್ಗಳು ಗಂಟು ಗುಳ್ಳೆ – ಇವು ಬಿಳಿ ಕೇಂದ್ರ ಮತ್ತು ಕೆಂಪು ಬಣ್ಣದ ಗುಳ್ಳೆಗಳು, ಸುತ್ತಲೂ ಉರಿಯೂತದ ಚರ್ಮ ಆಗುತ್ತದೆ. ಇವು ಸಾಮಾನ್ಯವಾಗಿ ಎದೆ, ಮುಖ ಅಥವಾ ಬೆನ್ನಿನ ಮೇಲೆ ಕಂಡುಬರುತ್ತವೆ. ಪಸ್ಟೂಲ್ಗಳನ್ನು ಒಡೆಯುವುದರಿಂದ ಇತರ ಚರ್ಮಭಾಗಗಳಿಗೆ ಬ್ಯಾಕ್ಟೀರಿಯಾ ಹರಡಲು ಕಾರಣವಾಗಬಹುದು, ಆದ್ದರಿಂದ ಅವುಗಳನ್ನು ಪಾಪ್ ಮಾಡಲು ಅಥವಾ ಹಿಂಡಲು ಪ್ರಯತ್ನಿಸಬೇಡಿ. ಬ್ಯಾಕ್ಟೀರಿಯಾ ತುಂಬಿದ ಕೀವು ತೊಡೆದುಹಾಕಲು ಪ್ರತಿಜೀವಕಗಳನ್ನು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ.
5) ಚೀಲಗಳು- ಇದು ಕೀವು ಅಥವಾ ಇತರ ದ್ರವಗಳಿಂದ ತುಂಬಿದ ತೀವ್ರವಾದ ಮೊಡವೆ ಸಮಸ್ಯೆ ಮತ್ತು ಸ್ಪರ್ಶಕ್ಕೆ ಮೃದುವಾಗಿರುತ್ತದೆ. ಸಿಸ್ಟಿಕ್ ಮೊಡವೆಗಳು ಮುಖ ಮತ್ತು ದವಡೆಯ ಉದ್ದಕ್ಕೂ ಸಾಮಾನ್ಯವಾಗಿ ಹರಡುತ್ತದೆ, ಅಥವಾ ಬ್ಯಾಕ್ನೆ ಆಗಿರುತ್ತವೆ. ಸಾಮಾನ್ಯವಾಗಿ ಹೆಚ್ಚುವರಿ ಎಣ್ಣೆ, ಸತ್ತ ಚರ್ಮ ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಿಸ್ಟ್ ಗಳು ವಿಶೇಷವಾಗಿ ಒಂದು ಮೊಂಡುವಾದ ರೂಪವಾಗಿದ್ದು, ವಾರಗಳು ಅಥವಾ ತಿಂಗಳುಗಳವರೆಗೆ ಸಹ ಇರುತ್ತವೆ.
ಹೇಗೆ ನಿರ್ವಹಿಸುವುದು
ಮಾಡಬೇಕಾಗಿರುವುದು:
ಮಾಡಬೇಕಾಗದೇ ಇರುವುದು
ಡಾ. ದೀಪಾ ಕೆ, ಡಿಡಿವಿಎಲ್, ಡಿಎನ್ಬಿ, ಪ್ರಸಾದನ ಶಾಸ್ತ್ರ ಅಪೋಲೊ ಕ್ಲೀನಿಕ್, ಬೆಂಗಳೂರು
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.