(www.vknews.com) : ಉಡುಪಿ ಜಿಲ್ಲೆಯ ಹಿರಿಯಡ್ಕ,ಕುಕ್ಕಿಹಳ್ಳಿ,ಕುರುಪಾಡಿ,ಎಣ್ಣೆಹೊಳೆ,ಅಂಡಾರ್ ನಲ್ಲಿ ಅರ್ಹ ಫಲಾನುಭವಿ 121 ಕುಟುಂಬಕ್ಕೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಲಾಕ್ಡೌನ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕುಕ್ಕೆಹಳ್ಳಿ ಗ್ರಾಪಂ ವ್ಯಾಫ್ತಿಯಲ್ಲಿ ಗ್ರಾಮದ ತೀರ ಬಡ ಕುಟುಂಬಗಳಿಗೆ ಉಡುಪಿ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಪ್ರಮುಖರಾದ ಹಬೀಬ್ ಉಡುಪಿ ಮನವಿ ಮೇರೆಗೆ ಬೆಳ್ಳಂಪಳ್ಳಿ ಭೂತರಾಜ ದೈವಸ್ಥಾನದ ವಠಾರದಲ್ಲಿ ದೇವಾಸ್ಥನದ ಮೋಕ್ತೆಸರು,ಮಾಜಿ ಪಂಚಾಯತ್ ಸದಸ್ಯರು ಪೆರ್ಡೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು ಆಗಿರುವ ಪ್ರವೀಣ್ ಶೆಟ್ಟಿ ಇವರಿಗೆ ರೇಷನ್ ಕಿಟ್ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಅಜಯ್ ಕುಮಾರ್ ಕಪ್ಪೆಟ್ಟು, ಸದಸ್ಯರಾದ ಸುಕೇಶ್ ಶೆಟ್ಟಿ , ಸಾತ್ವಿಕ್ ಉಪಸ್ಥಿತರಿದ್ದರು.
ಹಿರಿಯಡ್ಕದಲ್ಲಿ ನವ್ಯ ಫ್ರೆಂಡ್ಸ್ ಶರತ್ ರವರ ಮನವಿ ಮೇರೆಗೆ ರೇಷನ್ ಕಿಟ್ ಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಶೋಕ್ ಪಪೂಜೆ,ಸುಹಾಸ್,ಸುದರ್ಶನ್ ಪೂಜಾರಿ,ರವೀಂದ್ರ ಪ್ರಭು ಉಪಸ್ಥಿತರಿದ್ದರು.
ಕುರುಪಾಡಿ ಯಲ್ಲಿ ಮಹಿಳಾ ಮೋರ್ಚಾ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಜಯಶ್ರೀ ವಿಜಯ ಕುಮಾರ್ ಇವರ ಮನವಿ ಮೇರೆಗೆ,ಎಣ್ಣೆಹೊಳೆಯಲ್ಲಿ ಆಶಾ ಕಾರ್ಯಕರ್ತೆ ಸುನಿತಾ ನಾಯಕ್ ಮನವಿ ಮೇರೆಗೆ,ಅಂಡಾರ್ ನಲ್ಲಿ ಆಶಾ ಕಾರ್ಯಕರ್ತೆ ಉಷಾ ರವರ ಮನವಿ ಮೇರೆಗೆ ರೇಷನ್ ಕಿಟ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ, ಜಿ.ಆರ್.ಎಂ ರಾಘವೇಂದ್ರ ನಾಯಕ್,ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ,ಇರ್ಷಾದ್,ನಿತಿನ್ ಶೇಟ್,ನಿತ್ಯಾನಂದ ನಾಯಕ್,ವಿಘ್ನೇಶ್ ಹಿರಿಯಡ್ಕ ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.