(www.vknews.com) : ಕೋರೋನಾ ಸಂಕಟದಿಂದ ರಾಜ್ಯ ಮತ್ತು ದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಕ್ಷೇತ್ರಗಳು ಕಂಗೆಟ್ಟು ಹೋಗಿದ್ದು, ಈ ಬಗ್ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ಆನ್ಲೈನ್ ವೇಬಿನರ್ ವಿಚಾರಗೋಷ್ಠಿ ಆಯೋಜಿಸಲಾಗಿದೆ.
ಈ ಅಭಿಯಾನದಲ್ಲಿ ಕೋರೋಣ ದಿಂದ ಶಿಕ್ಷಣ ವ್ಯವಸ್ಥೆಯ ಮೇಲೆ ಆಗಿರುವ ಪರಿಣಾಮಗಳ ಕುರಿತು ಶಿಕ್ಷಣ ತಜ್ಞ ಡಾ. ರಜಾಕ್ ಉಸ್ತಾದ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಉಸ್ತಾದ್ ಅವರು ಮಾತನಾಡಿದ ಪ್ರಮುಖ ಅಂಶಗಳು,ಕೊರೊನದಿಂದ 2 ವಷ೯ ಶಿಕ್ಷಣ ಸಂಸ್ಥೆಗಳು ಆಘಾತಕ್ಕೆ ಒಳಗಾಗಿ ವಿದ್ಯಾರ್ಥಿಗಳು ಮೊದಲನೆಯ ಲಯಕ್ಕೆ ಬರಬೇಕಾದರೆ 4 ವಷ೯ ಬೇಕಾಗುತ್ತೆ.ಆನ್ ಲೈನ್ ಶಿಕ್ಷಣ ತಂದೆ ತಾಯಿಯ ಆಥಿ೯ಕ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ.ಶಾಲೆಗಳಲ್ಲಿ ದಾಖಲಾತಿ ಮಾಡಿಸಿ ಪಾಸ ಮಾಡುತ್ತೆವೆ ಎನ್ನವದು ಸರಕಾರದ ಹೇಳಿಕೆ ಖಂಡನಿಯ.ರಾಜ್ಯದಲ್ಲಿ ಶೇಕಡಾ 60% ವಿದ್ಯಾರ್ಥಿಗಳ ತಂದೆ ತಾಯಿ ಅನ್ ಎಜುಕೆಟೆಡ್ ಆಗಿದ್ದು ಆನ್ ಲೈನ್ ಶಿಕ್ಷಣ ಇಂತವರ ಮೇಲೆ ದುಷ್ಪರಿಣಾಮ ಬಿರುತ್ತವೆ.ಸರಕಾರ ಎಲ್ಲ ಸಡಿಲಿಕೆ ಮಾಡಿದರು ಶಿಕ್ಷಣ ಬಗ್ಗೆ ಗಮನ ಹರಿಸದಿರುವದು ಮೂಖ೯ತನ.ಯಾವ ಕಾರಣಕ್ಕೂ ಪರಿಕ್ಷೆಗಳು ನಡೆಯದೆ ಪಾಸಾಗುವದು ಸರಕಾರದ ಮೂಖ೯ತನ ಹೇಳಿಕೆ.ಸರಕಾರಿ ಶಾಲೆಗಳಲ್ಲಿ ಇದುವರೆಗೆ ಯಾವದೆ ಆನ್ ಲೈನ್ ಕ್ಲಾಸ್ ವ್ಯವಸ್ಥೆ ಇಲ್ಲಾ ಮತ್ತು ನಡೆದಿರುವದಿಲ್ಲ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಇಲ್ಲದೆ ಪಾಸ ಮಾಡುವದು ಸರಕಾರದ ಅಪ್ರಭುತ್ವ ನಡುವಳಿಕೆ ಮತ್ತು ನಿರ್ಣಯ.ಸರಕಾರ ಸರಕಾರಿ ಶಾಲೆಗಳ ಬಗ್ಗೆ ಹೆಚ್ಚು ಗಮನ ಕೊಡುವಂತೆ ಒತ್ತಾಯಿಸುವದು.
ಫೀ ದ ಹಣವನ್ನು ಶೇಕಡ 50% ಹಣ ವನ್ನು ಶಿಕ್ಷಕರಿಗೆ ಸಂಬಳ ನಿಡುವದು.ಹೊದ ವಷ೯ ದ ಅಭ್ಯಾಸವನ್ನು ಈ ವಷ೯ದಲ್ಲಿ ವಿದ್ಯಾರ್ಥಿಗಳ ಗಮನಕ್ಕೆ ಸ್ವಲ್ಪವಾದರು ಮನವರಿಕೆ ಮಾಡುವದು.
ಪ್ರಾಸ್ತಾವಿಕವಾಗಿ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ,ಕೊರೊನ್ ಕಾಲದಲ್ಲಿ ಸರಕಾರ ಶಿಕ್ಷಣ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಏಕೆಂದರೆ ಆನ್ ಲೈನ್ ಕ್ಲಾಸ್ ನಿಂದ ಬಡವರ ಗ್ರಾಮೀಣ ವಿದ್ಯಾರ್ಥಿಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಹಳ್ಳಿಗಳಲ್ಲಿ ಸರಿಯಾಗಿ ವಿದ್ಯುತ್ ಇರುವದಿಲ್ಲ ಮತ್ತು ಮಕ್ಕಳ ಪೊಷಕರು ಅವಿದ್ಯಾವಂತರಾಗಿ ಆಥಿ೯ಕ ಪರಿಸ್ಥಿತಿ ಸರಿ ಇಲ್ಲದಿರುವದರಿಂದ ಹೆಚ್ಚಿನ ಹಣ ಕೊಟ್ಟು ಮೊಬೈಲ್ ಖರಿದಿಸಲು ಆಗದಿರುವದು ಮಕ್ಕಳ ಹಿನ್ನಡೆಗೆ ಕಾರಣ ಎನ್ನಬಹುದು. ಮತ್ತು ಆನ್ ಲೈನ್ ನಲ್ಲಿ ಮಕ್ಕಳಿಗೆ ಅಭ್ಯಾಸ ಸಂಪೂರ್ಣವಾಗಿ ತಿಳಿಯುವದಿಲ್ಲ.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ತಾಜುದ್ದೀನ್ ಶರೀಫ್ ಹಾಗೂ ಜಾಗಿರ್ದಾರ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.