ಜೆದ್ದಾ(www.Vknews.in): ಕಳೆದ ವರ್ಷದಂತೆಯೇ ಈ ಬಾರಿಯೂ ಕೂಡ ಹಜ್ ಗೆ ವಿದೇಶಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ಸೌದಿ ಅರೇಬಿಯಾ ಹಜ್ ಸಚಿವಾಲಯವು ಹೇಳಿದೆ. ಸೌದಿ ಅರೇಬಿಯಾದ ನಾಗರೀಕರು ಹಾಗೂ ಸೌದಿ ಅರೇಬಿಯಾದಲ್ಲಿರುವ ವಿದೇಶಿಗಳೂ ಸೇರಿದಂತೆ ಒಟ್ಟು 60,000 ಮಂದಿಗೆ ಈ ಬಾರಿಯ ಹಜ್ ಗೆ ಅವಕಾಶ ನೀಡಲಾಗುವುದು. ಈ ಬಾರಿಯ ಹಜ್ ಗೆ ವಿದೇಶಿಗಳಿಗೆ ನಿಗದಿತವಾಗಿ ಅನುಮತಿ ನೀಡಲಾಗುವುದೆಂದು ಈ ಮೊದಲು ಘೋಷಿಸಲಾಗಿತ್ತಾದರೂ, ಕೊವಿಡ್ ಸಾಂಕ್ರಾಮಿಕ ಭೀತಿಯಿಂದಾಗಿ ಇದೀಗ ವಿದೇಶಿಗಳಿಂದ ಬರುವ ಹಜ್ಜಾಜ್ ಗಳಿಗೆ ಅನುಮತಿ ನಿರಾಕರಿಸಲಾಗಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.