ವಿದ್ಯುತ್ ಕಡಿತಗೊಳ್ಳುವಿಕೆ ಪ್ರಮುಖ ಕಾರಣಗಳು
1. ಸಮಯ ನಿಗದಿ ಪಡಿಸಿದ(schedule) ವಿದ್ಯುತ್ ಕಡಿತ… 2. ಅನಿಯಮಿತ (unscheduled) 3. ತುರ್ತು ಪರಿಸ್ಥಿತಿಯಲ್ಲಿ (emergency)
1 . ಸಮಯ ನಿಗದಿ ಪಡಿಸಿ(schedule) ವಿದ್ಯುತ್ ಕಡಿತ ಅಂದರೆ ವಿದ್ಯುತ್ ಕಡಿತ ಸಮಯ ಮುಂಚಿತವಾಗಿ ಬಳಕೆ ದಾರರಿಗೆ ಪೇಪರ್ ನಲ್ಲಿ ತಿಳಿಸಿ ವಿದ್ಯುತ್ ಕಡಿತ ಮಾಡಲಾಗುವುದು.ಈ ತರಹದ ವಿದ್ಯುತ್ ಕಡಿತ ವಿದ್ಯುತ್ ಇಲಾಖೆ ಕೈಯಲ್ಲಿರುತ್ತದೆ. ಸಾಮಾನ್ಯ ವಾಗಿ ಲೈನ್ ಗಳ ನಿರ್ವಹಣೆಗೆ ಕಡಿತ ಮಾಡಬೆಕಾಗುತ್ತದೆ.
2.ಅನಿಯಮಿತ (unscheduled)ಹಾಗೂ 3. ತುರ್ತು ಸಂದರ್ಭದಲ್ಲಿ
ಈ ರೀತಿಯ ವಿದ್ಯುತ್ ಕಡಿತವು ವಿದ್ಯುತ್ ಇಲಾಖೆ ಕೈ ಯಲ್ಲಿ ಇರುವುದಿಲ್ಲ
ಅದನ್ನು ಹೀಗೆ ವೀವರಿಸಬಹುದು
ವಿದ್ಯುತ್ ನೀಡುವಾಗ ಒಂದೊಂದು ಪ್ರದೇಶ ಗಳಿಗೆ ಪ್ರತ್ಯೇಕ feeder(ಲೈನ್) ಗಳನ್ನು ಮಾಡಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಒಂದು ಉಪವಿಭಾಗದ ಮಟ್ಟದಲ್ಲಿ ಸುಮಾರು 8 ರಿಂದ 15 feeder(ಲೈನ್)ಗಳಿರುತ್ತವೆ…
ಮತ್ತು ಈ ಲೈನ್ ಗಳು ತುಂಬ sensitive ಆಗಿದ್ದು…. ಮರದ ಕೊಂಬೆ ಬಿದ್ದಲ್ಲಿ, ಗರಿಗಳು ತಾಗಿದಾಗ ಈ ಲೈನ್ ನ ವಿದ್ಯುತ್ ತಕ್ಷಣ ತನ್ನಿಂದ ತಾನೇ ಕಡಿತಗೊಳ್ಳುವ ವ್ಯವಸ್ಥೆ ಇರುತ್ತದೆ.
ಅಂತಃ ಸಂದರ್ಭ ದಲ್ಲಿ ದೋಷ ಗೊಂಡ ಭಾಗಗಳಿಗೆ ವಿದ್ಯುತ್ ಕಡಿತವಾಗುತ್ತದೆ. ಇದನ್ನು ಟ್ರಿಪ್ ಎನ್ನುತ್ತೇವೆ. ವಿದ್ಯುತ್ ಉಪಕೇಂದ್ರದಿಂದ ಆಯಾ ಭಾಗಗಳಿಗೆ ವಿದ್ಯುತ್ ಸರಬರಾಜು ಮಾಡುವ ಫ಼ೀಡರ್ ಗಳು ದೋಷ ಉಂಟಾದಾಗ ತನ್ನಿಂದ ತಾನೇ ಟ್ರಿಪ್ ಆಗುತ್ತವೆ ಅಂದರೆ ವಿದ್ಯುತ್ ಕಡಿತ ಗೊಳಿಸುತ್ತವೆ.
ಇಷ್ಟೇ ಅಲ್ಲದೆ ಕೆಲವೊಮ್ಮೆ ರಸ್ತೆ ಬದಿಯ ವಿದ್ಯುತ್ ಲೈನ್ ಗಳಿಗೆ ವಾಹನಗಳು ತಾಗಿ / ಅಪಘಾತವಾಗಿ, ಕಂಬಗಳು ಮುರಿದು, ಲೈನ್ ಗಳು ತುಂಡಾಗಿ ವಿದ್ಯುತ್ ಅಡಚಣೆ ಆಗುವ ಸಂಭವವಿರುತ್ತದೆ. ಕೆಲ ತುರ್ತು ಸಂದರ್ಭಗಳಲ್ಲಿ ಉದಾಹರಣೆಗೆ ಲೈನ್ ಗಳು ತುಂಡಾದ ಸಂದರ್ಭಗಳಲ್ಲಿ ಸದರಿ ಲೈನ್ ನಿಂದಾಗುವ ಪ್ರಾಣಾಪಾಯಗಳನ್ನು ಮತ್ತು ತೊಂದರೆಗಳನ್ನು ತಪ್ಪಿಸಲು ವಿದ್ಯುತ್ ನಿಲುಗಡೆ ಗೊಳಿಸುವುದು ಅನಿವಾರ್ಯ ವಾಗುರುತ್ತದೆ. ಇದು ವಿದ್ಯುತ್ ಇಲಾಖೆಯ ಕೈಯಲ್ಲಿದ್ದರೂ ಸಹ ತುಂಡಾದ ಲೈನ್ ಇರುವ ಭಾಗವನ್ನು ಇತರ ಲೈವ್ ವೈರ್ ನಿಂದ ಪ್ರತ್ಯೆಕಿಸುವವರೆಗೂ ವಿದ್ಯುತ್ ಕಡಿತಗೊಳಿಸುವುದು ಅನಿವಾರ್ಯವಾಗಿರುತ್ತದೆ.
ಅದೇ ರೀತಿ ಒಂದೊಂದು ತಾಲ್ಲೂಕು ಗಳಿಗೆ ಒಂದು ಅಥವಾ ಅದಕ್ಕಿಂತ ಹೆಚ್ಚು main line(33kv/110kv/220kv) ಎಂದು ಹೀಗೆ ಯಾವುದಾದರೂ voltage ಸಾಮರ್ಥ್ಯದ ಲೈನ್ ಗಳಿರುತ್ತವೆ. ಮೈನ್ ಲೈನ್ ದೋಷ ಕಂಡು ಬಂದಲ್ಲಿ ಒಂದು ತಾಲ್ಲೂಕು ಸಂಪೂರ್ಣ ವಿದ್ಯುತ್ ಇಲ್ಲದಂತೆ ಆಗುತ್ತದೆ
ಇದು ವಿದ್ಯುತ್ ತೆಗೆಯುವುದು ಅಲ್ಲ… ಲೈನ್ ನಲ್ಲಿ ದೋಷ(fault) ಆದಾಗ ಅದು safety ಸಲುವಾಗಿ ವಿದ್ಯುತ್ ಸ್ವಯಂ ಚಾಲಿತ ವಾಗಿ ವಿದ್ಯುತ್ ಕಡಿತ ಆಗುವುದು..
ಹೀಗೆ ಅನೇಕ ಲೈನ್ ನ ತೊಂದರೆ /ಅಥವಾ ಇತರೆ ಸಮಸ್ಯೆ ಇಂದ ವಿದ್ಯುತ್ ಕಡಿತ ವಾಗುವುದನ್ನು ಕಡಿತ ಮಾಡಲಾಗಿದೆ ಎಂದು ದೂರುವವರಿದ್ದಾರೆ….
ಸಾಕಷ್ಟು ಲೈನ್ ಗಳೂ ಖಾಸಗಿ ತೋಟದಲ್ಲಿ ಹಾದು ಹಾಗುತ್ತದೆ… ಕೆಲವು ಬಳಕೆದಾರರಿಗೆ ತಿಳಿಸಿದರೂ ಲೈನ್ ನ ಅಕ್ಕ ಪಕ್ಕ ತೆಂಗು… ಇತರೆ ಮರಗಳ ನ್ನು ನೆಟ್ಟು ಇದರಿಂದ ವಿದ್ಯುತ್ ಲೈನ್ ನಲ್ಲಿ ದೋಷ ಗಳು ಬಂದು ವಿದ್ಯುತ್ ಕಡಿತ ಉಂಟಾಗುತ್ತದೆ.
ಮಳೆ ತುಂಬ ಬಂದಾಗ ಮಣ್ಣು ತುಂಬ ಸಡಿಲ ಗೊಂಡ್ದು ಮರಗಳು ಬಿದ್ದು ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ಕಡಿತ ಉಂಟಾಗುತ್ತದೆ…
ಮಳೆ ತುಂಬ ಜಾಸ್ತಿ ಇದ್ದಾಗ ಉಪಕರಣಗಳಲ್ಲಿ ದೋಷ ಕಂಡು ಬರುವುದು ಸಹಜ… ಅಂಥಹ ಸಂದರ್ಭದಲ್ಲಿ ಸುರಕ್ಷತೆಯ ಸಲುವಾಗಿ ದೋಷ ಕಂಡುಬಂದಾಗ ಸ್ವಯಂ ವಿದ್ಯುತ್ ಕಡಿತ ಉಂಟಾಗುತ್ತದೆ…
ಕೆಲವು ಸಾರ್ವ ಜನಿಕರು ಸ್ವಯಂ ಚಾಲಿತವಾಗಿ ಕಡಿತ ಗೂಳ್ಳುವುದನ್ನು ಇಲಾಖೆ ಯವರು ಕಡಿತ ಮಾಡಿದ್ದಾರೆ ಎಂದು ಮನ ಬಂದಂತೆ ಮಾತಾಡುತ್ತಾರೆ….ಇಂತಹ ಮಾತುಗಳು ಸರ್ವೇ ಸಾಮಾನ್ಯವಾಗಿವೆ. ವಿದ್ಯುತ್ ಕಡಿತವಾದ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳಿಗೆ ಮನಬಂದಂತೆ ಬಯ್ಯುವವರಿದ್ದಾರೆ. ಇದರಿಂದ ಇಕಾಖೆಯ ನೌಕರರ/ಅಧಿಕಾರಿಗಳ ಮಾನಸಿಕ ಒತ್ತಡ ಹೆಚ್ಚಾಗಿ ಅಪಾಯಗಳು ಹಾಗೂ ಅಪಘಾತಗಳು ಆಗುವ ಸಂಭವ ಹೆಚ್ಚಾರಗಿರುತ್ತದೆ. ಇಲಾಖೆಯಲ್ಲಿ ದುಡಿಯುವವರೂ ನಮ್ಮಂತೆಯೇ ಮನುಷ್ಯರು ಎಂದಬುದನ್ನು ತಿಳಿದುಕೊಳ್ಳೋಣ ಸ್ನೇಹಿತರೇ.
ಕೊನೆಯದಾಗಿ…. ಎಷ್ಟು ನಿರ್ವಹಣೆ ಮಾಡಿದರೂ ಲೈನ್ ನಲ್ಲಿ ದೋಷ ಬಂದೇ ಬರುತ್ತದೆ. ಎಷ್ಟು ಬೇಗ ದೋಷ ವನ್ನು ಸರಿ ಪಡಿಸಬಹುದು ಎಂಬುದು ಸ್ಥಳಿಯ ವಿದ್ಯುತ್ ಇಲಾಖೆ ಕೈ ಯಲ್ಲಿ ಇರುತ್ತದೆ. ಅದೂ ಕೂಡ ಪರಿಸ್ಥಿತಿಗೆ ಅನುಗುಣವಾಗಿತರುತ್ತವೆ. ಇದಕ್ಕೆ ಸಾರ್ವಜನಿಕರ ಸಹಕಾರ ಖಂಡಿತ ಅಗತ್ಯ.
ಸ್ನೇಹಿತರೆ ಸೂರ್ಯನಿಗೆ 12 ಗಂಟೆ ರೆಸ್ಟ್ ಇದೆ, ಆದ್ರೆ ವಿದ್ಯುತ್ ಇಲಾಖೆಗೆ ದೋಷ ಸರಿ ಪಡಿಸಲು ಕನಿಷ್ಟ ಸ್ವಲ್ಪ ಕಾಲಾವಕಾಶ ನಾದ್ರೂ ಬೆಡವೇ? ಇಲಾಖೆ ಎಲ್ಲ ಜಾತಿ ಯವರು ಇದ್ದಾರೆ. ತಮ್ಮ ಮನೆಯವರೂ ಇರಬಹುದು ಅವರಿಗೂ ತಮ್ಮಂತೆಯೇ ಸಂಸಾರವಿರುತ್ತದೆ…ಅಲ್ವ…. ಆದ್ದರಿಂದ ವಿದ್ಯುತ್ ಕಡಿತವಾಸ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾಗದೇ ಶಾಂತ ಚಿತ್ತರಾಗಿ ವರ್ತಿಸೋಣ.
*ದೋಷ ಬರುವಾಗ ನಿಗದಿತ ಸಮಯ ತಿಳಿಸಿ ಬರುವುದಿಲ್ಲ ಎಂಬುದನ್ನು ತಾವೆಲ್ಲರೂ ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ.
ದೋಷಗಳು (FAULT) 1.ಮೈನ್ ಲೈನ್ ನಿಂದ ಆಗಬಹುದು.. 2.ಸ್ಥಳಿಯ 11 kv feeder ಗಳಿಂದ ಆಗಬಹುದು 3.ತಮ್ಮ ಸುತ್ತ ಮುತ್ತಲಿನಲ್ಲಿರುವ transformer ಅಥವಾ ಅದಕ್ಕೆ ಹೊಂದಿ ಕೊಂಡ ಲೈನ್ ಗಲ್ಲಿ ಇರಬಹುದು.
ಯಾವುದೇ ದೋಷ ಆದಲ್ಲಿ ತಕ್ಷಣ ಗ್ರಾಹಕರು ವಿದ್ಯುತ್ ಇಲಾಖೆಗೆ ಕರೆ ಮಾಡಿ ವಿದ್ಯುತ್ ಕಡಿತ ಸಮಯವನ್ನು ಕೇಳುವುದು ಸಹಜ,ಆದರೆ ದೋಷದ ಸ್ವರೂಪ ವನ್ನು ತಿಳಿದ ಮೇಲಷ್ಟೇ..ಕಡಿತವಾದ ಸಮಯ ಹೇಳಬಹುದು… ದೋಷದ ಸ್ವರೂಪ ತಿಳಿಯಲು ಕನಿಷ್ಟ 1 ಗಂಟೆ ಕಾಲಾವಕಾಶ ಬೇಕಾಗುತ್ತದೆ. ನಂತರ ದೋಷದ ಸ್ವರೂಪ ನೋಡಿಕೊಂಡು ವಿದ್ಯುತ್ ದುರಸ್ಥಿ ಸಮಯವನ್ನು ಹೇಳಬಹುದು….
ದೋಷ ಗಳು ಬಂದಾಗ ಕಾಲ್ನಡಿಗೆ ಯಲ್ಲಿ ಹೋಗಿ ಪರಿಶೀಲಿಸಿದ ನಂತರವೇ ನಿಗದಿತ ಸಮಯ ಹೇಳಬಹುದು….. ಯಾವುದನ್ನೇ ಬಳಸುವ ಮುನ್ನ ಅದರ ಮಾಹಿತಿ ತಿಳಿದು ಕೊಳ್ಳುವುದು ಒಳ್ಳೆಯದು ಎಂದು ನಾವು ಅಭಿಪ್ರಾಯ ಪಡುತ್ತೇವೆ. ಜನಕ
*ಇದು ವಿದ್ಯುತ್ ಮತ್ತು ವಿದ್ಯುತ್ ಇಲಾಖೆಗೆ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸುವ ನಮ್ಮ ಸಣ್ಣ ಪ್ರಯತ್ನ..*
ಲೇಖಕರು : ಖಲೀದ್ ಕೊಲ್ನಾಡ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.