(ವಿಶ್ವ ಕನ್ನಡಿಗ ನ್ಯೂಸ್) ಡಾ.ಸಿದ್ದಲಿಗಯ್ಯ ರವರ ಅಕಾಲಿಕ ನಿಧನದಿಂದ ದಲಿತ ಸಾಹಿತ್ಯ ಲೋಕ. ದಲಿತ ಹೋರಾಟಗಳು ಹಾಗೂ ಬಂಡಾಯ ಸಾಹಿತ್ಯವು ಒಬ್ಬ ಮೇರು ವ್ಯಕ್ತಿಯನ್ನು ಕಳೆದುಕೊಂಡು ಅನಾಥ ಭಾವವನ್ನು ಹೊಂದಿದೆ. ರಾಜ್ಯಕ್ಕೆ ಹಾಗೂ ಸಾಹಿತ್ಯ ಲೋಕಕ್ಕೆ ಇದರಿಂದ ತುಂಬಲಾರದ ನಷ್ಟವಾಗಿದೆ ಇವರು ಇಂದು ದೈಹಿಕವಾಗಿ ಎಲ್ಲರನ್ನೂ ಅಗಲಿದ್ದರೂ ಸಹ ಇವರ ಬರಹಗಳ ಮೂಲಕ ಸದಾ ಎಲ್ಲರ ಮನಸ್ಸಿನಲ್ಲೂ ಜಿವಂತವಾಗಿ ಉಳಿಯುತ್ತಾರೆ ಎಂದು ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ರವರು ತಿಳಿಸಿದರು.
ದಲಿತ ಕವಿ ಸಾಹಿತಿ ಹೋರಾಟಗಾರ ಡಾ.ಸಿಧ್ಧಲಿಂಗಯ್ಯ ರವರಿಗೆ ಕೋಲಾರ ಜಿಲ್ಲೆಯ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಡಾ.ರಾಜ್ಕುಮಾರ್ ಜೋಡಿರಸ್ತೆಯ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಇವರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.ಡಾ.ಸಿದ್ದಲಿಂಗಯ್ಯ ರವರು ಶೋಷಿತ ಮತ್ತು ದಲಿತ ಸಮುದಾಯದ ಧ್ವನಿಯಾಗಿ ತಮ್ಮ ಬರಹಗಳ ಮೂಲಕ ಚೈತನ್ಯವನ್ನು ತುಂಬಿ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಹೋರಾಡುವಂತೆ ಮಾಡುವಲ್ಲಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿರುತ್ತಾರೆ ಇವರು ಕನ್ನಡ ಪುಸ್ತಕ ಪ್ರಾಧಿಕಾರದ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ಆರ್. ತ್ಯಾಗರಾಜ್ ಮಾತನಾಡಿ “ಕೋಲಾರ ಜಿಲ್ಲೆಗೆ ಮತ್ತು ಇವರಿಗೆ ತುಂಬಾ ಅವಿನಾಭಾವ ಸಂಬಂಧವಿದ್ದು ಅನೇಕ ಹೋರಾಟಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದು ಅವರು ಅಂದು ಮಾಡಿದಂತಹ ಕ್ರಾಂತಿಕಾರಿ ಮೈ ನೆವರೇಳಿಸುವಂತಹ ಭಾಷಣಗಳು ಮನೆ ಮಾತಾಗಿ ಇಂದಿಗೂ ಉಳಿದಿವೆ. ಜಾತಿ ವ್ಯವಸ್ಥೆಯನ್ನು ತೊಲಗಿಸಬೇಕಾದರೆ ಅಂತರ ಜಾತಿ ವಿವಾಹಗಳು ಹೆಚ್ಚಾಗಿ ಪ್ರೋತ್ಸಾಹಿಸಬೇಕೆಂದು ಒತ್ತಾಯಿಸುತ್ತಾ ಇದನ್ನೇ ತಮ್ಮ ಜೀವನದಲ್ಲೂ ಪಾಲಿಸಿದ್ದರು. ಇವರಿಗೆ ನಮನಗಳು ಎಂದು ಹೇಳುವ ಮೂಲಕ ಗೌರವ ಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಡಿಸಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ವೆಂಕಟಪತೆಪ್ಪ ಮಾತನಾಡಿ “ಇಡೀ ವಿಶ್ವಕ್ಕೆ ಒಬ್ಬ ಅಂಬೇಡ್ಕರ್ ಇದ್ದರು ಕರ್ನಾಟಕದಲ್ಕಿ ಸಿದ್ದಲಿಂಗಯ್ಯ ಇದ್ದರು. ಅವರನ್ನು ಇಂದು ಕಳೆದುಕೊಂಡಿದ್ದೇವೆ. ಅವರು ಜಾತಿ ಮತ ಧರ್ಮ ಭೇದವಿಲ್ಲದೆ ದಲಿತರ ಬಗ್ಗೆ ಅವರ ನೋವು ನಲಿವುಗಳನ್ನು ಕಣ್ಣಾರೆ ಕಂಡು ಅನುಭವಿಸಿ ತಮ್ಮ ಲೇಖನಿಯನ್ನು ಖಡ್ಗವನ್ನಾಗಿ ಮಾಡಿಕೊಂಡು ಕಾವ್ಯದ ರೂಪದಲ್ಲಿ ಜನತೆಗೆ ತಿಳಿಸಿದ ಜೀವಂತ ಕವಿ ಎಂದು ಸ್ಮರಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ಮಾತನಾಡಿ ಡಾ.ಸಿದ್ದಲಿಗಯ್ಯ ರವರು ಕರ್ನಾಟಕ ರಾಜ್ಯವು ಕಂಡಂತಹ ದಲಿತ ಕವಿ ಮತ್ತು ಸಾಹಿತಿಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ದಸಂಸ ಸಂಘಟನೆಯನ್ನು ಪ್ರಾರಂಭಿಸುವಲ್ಲಿ, ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುತ್ತಾರೆ ಎಂದರು.
ಸಾಂಸ್ಕೃತಿಕ ಘಟಕದ ಮಂಜುಳ ರವರು ಮಾತನಾಡಿ ಖ್ಯಾತ ಸಾಹಿತಿಗಳು, ವಿಚಾರವಾದಿಗಳು, ದಲಿತ ಕವಿಗಳು ಆದ ನಾಡೋಜ ಡಾ. ಸಿದ್ದಲಿಂಗಯ್ಯ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಠವಾಗಿದೆ. ಅವರ ಕನವ ಮತ್ತು ಸಾಹಿತ್ಯ ಕನ್ನಡ ಅಷ್ಟೇ ಅಲ್ಲದೆ ಬೇರೆ ಭಾಷೆಗಳಲ್ಲಿ ಪ್ರಕಟವಾಗಿದೆ. ಮತ್ತು ಅವರು ಹಾಡುಗಳ ಮುಖಾಂತರ ಹೋರಾಟಕ್ಕೆ ಕಿಚ್ಚನ್ನು ಹಚ್ಚಿದವರು. ಅವರ ನಗುವಿನ ಮಾತುಗಳಿಂದಲೇ ಜನರಿಗೆ ವಿಚಾರಗಳನ್ನು ತಲುಪಿಸುತ್ತಿದ್ದರು. ಇಂದು ಅವರ ಅಗಲಿಕೆಯಿಂದ ನಾಡು ಬಡವಾಗಿದೆ ಎಂದು ಅವರ ರಚನೆಯ ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ ಹಾಡನ್ನು ಹಾಡುವ ಮೂಲಕ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಸುಧಾಕರ್. ಜಿಲ್ಲಾ ಸಂಚಾಲಕರಾದ ವಿ.ಜಗದೀಶ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮರನಾಥ್ ಸ್ವಾಮಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಟೈಗರ್ ವೆಂಕಟೇಶ್. ನಾಗರಾಜ್.ಎಸ್.ಎಲ್.ವಿ ಹರೀಶ್ ಡಿ.ವೈ.ಸಿ.ಸಿ ಅಬ್ದುಲ್ ಲತೀಫ್. ಇನ್ನಿತರರು ಉಪಸ್ಥಿತರಿದ್ದರು
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.