ಶ್ರೀನಿವಾಸಪುರ(www.vknews.com):- ಕೋವಿಡ್ 2 ನೇ ಆಲೆಯಿಂದ ಪಾರಾಗಲು ಸ್ವಯಂ ಪ್ರೇರಿತವಾಗಿ ಪ್ರತಿ ಯೊಬ್ಬರೂ ಕೋವಿಡ್ ಲಸಿಕೆ ಯನ್ನು ಹಾಕಿಸಿಕೊಳ್ಳಲು ಮುಂದಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಕಾಳಜಿ ವಹಿಸಬೇಕು ಎಂದು ಪುರಸಭಾ ಅಧ್ಯಕ್ಷಿಣಿ ಎಂ.ಎನ್.ಲಲಿತಾ ಶ್ರೀನಿವಾಸ್ ತಿಳಿಸಿದರು . ಪಟ್ಟಣದ ವಾರ್ಡ್ ಸಂಖ್ಯೆ 11 ಅಂಬೇಡ್ಕರ್ ಪಾಳ್ಯ ಯಲ್ಲಿ ಕೋವಿಡ್ ಲಸಿಕೆಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪುರಸಭಾ ಅಧ್ಯಕ್ಷಿಣಿ ಎಂ.ಎನ್.ಲಲಿತಾ ಶ್ರೀನಿವಾಸ್ ಪುರಸಭೆ 23 ವಾರ್ಡುಗಳಲ್ಲಿ ಪುರಸಭೆ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು , ಹಂತ ಹಂತವಾಗಿ ಎಲ್ಲಾ ವಾರ್ಡುಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಮಾಡಲಾಗುವುದು , ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಿ ಸ್ವಯಂ ಪ್ರೇರಿತರಾಗಿ ಮುಂದಾಗಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರೀಕರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು , ಬಯ ಪಡುವ ಆತಂಕವಿಲ್ಲ. ಆರೋಗ್ಯ ಇಲಾಖೆ ಯವರು ಎಲ್ಲಾ ಸಿದ್ಧತೆಗಳನ್ನು ಮಾಡಿ ದೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ , ಪಟ್ಟಣಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ನಾವಿದ್ದೇವೆ ಎಂದು ತಿಳಿಸಿದರು. ನೂತನ ಮುಖ್ಯಾಧಿಕಾರಿ ವೈ.ಎನ್ . ಸತ್ಯನಾರಾಯಣ ಮಾತನಾಡಿ , ಕೋವಿಡ್ ಯಾರೂ ಹೆದರಬೇಕಾಗಿಲ್ಲ , ಮುಂಜಾಗ್ರತೆಯಾಗಿ ಯಾವುದೆ ಭಯ ಆತಂಕ ಪಡದೆ ಲಸಿಕೆಯನ್ನು ಹಾಕಿಸಿಕೊಳ್ಳಿ , ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ತಿಳಿಸಿದರು . ಟಿ.ಹೆಚ್.ಒ. ಡಾ , ವಿಜಯ ಮಾತನಾಡಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಸ್ಯಾನಿಟೈಸರ್ ಉಪಯೋಗಿಸಿ ಎಂದು ತಿಳಿಸಿದರು. ವ್ಯಾಕ್ಸಿನ್ ಪಡೆದ ಸಾರ್ವಜನಿಕರಿಗೆ ಅಧ್ಯಕ್ಷೆಣಿ ಲಲಿತಾ ಶ್ರೀನಿವಾಸ್ ಕಡೆಯಿಂದ ಹಣ್ಣು ಹಂಪಲುಗಳನ್ನು ನೀಡಲಾಯಿತು . ಈ ಸಂದರ್ಭದಲ್ಲಿ ಮೊಹಲ್ಲಾ ಆಸ್ಪತ್ರೆಯ ಡಾ ಅಮ್ರೀನ್ ಫಾತಿಮಾ , ಪುರಸಭಾ ಸದಸ್ಯರು , ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ , ಸಮುದಾಯ ಸಂಘಟನಾಧಿಕಾರಿ ಕೆ.ಎನ್.ರಾಜೇಶ್ವರಿ , ನಾಗೇಶ್ , ಕಂದಾಯ ನಿರೀಕ್ಷಕ ಎನ್. ಶಂಕರ್ ಮುಖಂಡರಾದ ಸಿ.ರವಿ ಮುಂತಾದವರು ಹಾಜರಿದ್ದರು. ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.