ಕೋಲಾರ(www.vknews.com):– ಕೊರೋನ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುವ ಬಗ್ಗೆ ತಜ್ಞರು ವರದಿಯನ್ನು ನೀಡಿದ್ದು , ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಹಿತದೃಷ್ಟಿಯಿಂದ ಜಾಗೃತರಾಗುವ ಅನಿವಾರ್ಯ ಎದುರಾಗಿದೆ ಎಂದು ನಗರಸಭೆ ಉಪಾಧ್ಯಕ್ಷ ಎನ್.ಎಸ್ ಪ್ರವೀಣ್ ಗೌಡ ಹೇಳಿದರು.
ಇಲ್ಲಿನ ಗಾಂಧಿನಗರದ ವಾರ್ಡ್ನ ನಿವಾಸಿಗಳಿಗೆ ೫೦೦ ಕ್ಕೂ ಹೆಚ್ಚು ಮಕ್ಕಳ ಮಾಸ್ಕಗಳನ್ನು ಇಂಡಿಯನ್ ಇನ್ ಸ್ಪೋರ್ಟ್ಸ್ ಕ್ಲಬ್ಗೆ ಹಸ್ತಾಂತರಿಸಿ ಮಾತನಾಡಿ , ಕೊರೋನ ಮೂರನೇ ಅಲೆ ಮಕ್ಕಳ ಮೇಲೆ ಕರಿನೆರಳು ಬೀಳದಂತೆ ಪೋಷಕರು ಹೆಚ್ಚು ಜಾಗೃತರಾಗಿ , ಮನೆಯಿಂದ ಹೊರಬರದಂತೆ , ನಿತ್ಯ ಮಾಸ್ಕ್ ಧರಿಸಿ ಕೊರೋನ ಸೋಂಕಿನಿಂದ ದೂರ ಉಳಿಯುವಂತೆ ಮೊನ್ನೆಚ್ಚರಿಕೆಯ ಕ್ರಮಗಳ ಪಾಲನೆಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಗಾಂಧಿನಗರದ ವಾರ್ಡ್ನ ಪ್ರತಿ ಮನೆ ಮನೆಗೂ ತೆರಳಿ ಪೋಷಕರಿಗೆ ಮಾಸ್ಟ್ ಗಳನ್ನು ನೀಡಿ ಮಕ್ಕಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು . ವಿಶ್ವದಲ್ಲಿ ಕೊರೋನ ಅಟ್ಟಹಾಸವನ್ನು ಒಂದಲೇ ಮತ್ತು ಎರಡನೇ ಅಲೆಯಲ್ಲಿ ಎಚ್ಚರಿಕೆಯ ಕ್ರಮಗಳನ್ನು ವಹಿಸದ ಕಾರಣ ಸಾವು ನೋವುಗಳನ್ನು ನಮ್ಮ ನಿರ್ಲಕ್ಷ್ಯದಿಂದ ಆಗಿದ್ದು , ಹೀಗಾಗಿ ಯಾವುದೇ ಕಾರಣಕ್ಕೂ ಜನತೆ ಎಚ್ಚರಿಕೆಯಿಂದ ಅಗತ್ಯ ಮಾರ್ಗ ಸೂಚಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಆಗಬೇಕು ಎಂದರು .
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಕೇಶ್ , ಜಗದೀಶ್ , ಗಾಂಧಿನಗರದ ಲಕ್ಷ್ಮಿ ನಾರಾಯಣ್ ನಾಗೇಶ್ , ಮತ್ತಿತರು ಉಪಸ್ಥಿತರಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.