ಕೋಲಾರ(www.vknews.com): – ಪ್ರಥಮ ಪಿಯುಸಿಗೆ ಪರೀಕ್ಷೆ ನಡೆಸುತ್ತಿಲ್ಲ , ಅದು ಅಸೆಸ್ಮೆಂಟ್ ಮಾತ್ರ , ಮಕ್ಕಳ ನಿರಂತರ ಕಲಿಕೆಗೆ ಪ್ರಯತ್ನವಷ್ಟೇ , ಇದು ಫಲಿತಾಂಶಕ್ಕೆ ಮಾನದಂಡವೂ ಅಲ್ಲ ಎಂದು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು .
ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ವಿಧಾನಪರಿಷತ್ ಶಾಸಕರಾದ ಡಾ.ವೈ.ಎ. ನಾರಾಯಣಸ್ವಾಮಿ ಹಾಗ ಚಿದಾನಂದ ಎಂ.ಗೌಡರ ಬಳಗದಿಂದ ಖಾಸಗಿ ಶಾಲೆ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು . ಮಕ್ಕಳು ಮನೆಯಲ್ಲೇ ಇದ್ದು ೧೦ ದಿನ ಪಠ್ಯಪುಸ್ತಕ ನೋಡಿಯೇ ಉತ್ತರ ಬರೆದು ಕಳುಹಿಸ ಬಹುದು , ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೇತನಕ್ಕೆ ಪರಿಗಣನೆಗೆ ಮಾತ್ರ ಎಂದು ತಿಳಿಸಿ , ವಿನಾಕಾರಣ ಗೊಂದಲ ಬೇಡ , ಬಿಡ್ಸ್ ಸೇತುಬಂಧದ ಮಾದರಿಯಲ್ಲಿ ಮನೆಯಲ್ಲೇ ಕುಳಿತು ಕಲಿಕೆ ಮುಂದುವರೆಸಲು ಈ ಪ್ರಯತ್ನ ಅಷ್ಟೇ ಎಂದು ತಿಳಿಸಿದರು .
ದ್ವಿತೀಯ ಪಿಯುಸಿ ಅಂಕಗಳನ್ನು ಈ ಬಾರಿ ಸಿಇಟಿಗೆ ಪರಿಗಣಿಸುವುದಿಲ್ಲ , ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ ಎಂದು ತಿಳಿಸಿದರು . ಕೊರೋನಾಯುದ್ದ ಗೆಲ್ಲೋದು ನಾವೇ ಧೃತಿಗೆಡದಿರಿ ಕೊರೋನಾ ವಿರುದ್ಧದ ಯುದ್ದದಲ್ಲಿ ನಾವೇ ಗೆಲ್ಲುವುದು ಎಂಬ ಆತ್ಮಸ್ಥೆರ್ಯದಿಂದ ಬದುಕು ಸಾಗಿಸೋಣ ಎಂದು ಶಿಕ್ಷಕರಿಗೆ ಕರೆ ನೀಡಿ , ಕೋಲಾರ ಜಿಲ್ಲೆಯಲ್ಲಿ ಲಸಿಕೆಗೆ ಉತ್ತಮ ಸಂದನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು .
ಜೂ .೨೧ ರೊಳಗೆ ಎಲ್ಲಾ ಜಿಲ್ಲೆಗಳಲ್ಲೂ ಸೋಂಕಿನ ಪ್ರಮಾಣ ತಗ್ಗಲಿದೆ ಎಂಬ ವಿಶ್ವಾಸದೊಂದಿಗೆ ಶಾಲೆ ಆರಂಭಿಸುವ ಚಿಂತನೆ ಮಾಡಲಾಗಿದೆ ಎಂದರು . ಲಸಿಕೆ ಕುರಿತ ವದಂತಿಗಳಿಗೆ ಕಿವಿಗೊಡದಿರಿ , ಕೋವಿಡ್ ವಿರುದ್ಧ ಲಸಿಕೆಯೇ ಗುರಾಣಿ ಎಂದ ಅವರು , ಇದೀಗ ಬೆಡ್ , ಆಕ್ಸಿಜನ್ , ಐಸಿಯು ಎಲ್ಲಾ ಕೊರತೆಗಳು ಮಾಯವಾಗಿವೆ ಎಂದು ತಿಳಿಸಿ ,
ದಿನಸಿ ಕಿಟ್ ವಿತರಿಸುತ್ತಿರುವ ಡಾ.ವೈ.ಎ ಎನ್.ಬಳಗದ ಉದಯ ಕುಮಾರ್ ಮತ್ತಿತರರನ್ನು ಅಭಿನಂದಿಸಿದರು . ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ , ಕೋವಿಡ್ ಕಾರ್ಯದಲ್ಲಿರುವ ಶಿಕ್ಷಕರನ್ನು ಕೋವಿಡ್ ವಾರಿಯರ್ ಎಂದು ಪರಿಗಣಿಸಿ , ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು . ಶಾಸಕ ಚಿದಾನಂದ ಎಂ.ಗೌಡ ಮಾತನಾಡಿ , ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ನೀಡಲು ಅನೇಕ ಕಾನೂನು ತೊಡಕುಗಳಿತ್ತು , ಅವುಗಳನ್ನು ಶಿಕ್ಷಣ ಸಚಿವರು , ಮುಖ್ಯಮಂತ್ರಿಗಳು ಪರಿಹರಿಸಿ ಪ್ಯಾಕೇಜ್ ಘೋಷಿಸಿದರು ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಆರ್ಎಸ್ಎಸ್ ತುಮಕೂರು ವಿಭಾಗ ಸಂಘ ಚಾಲಕ್ ಡಾ.ಶಂಕರ್ ನಾಯಕ್ , ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್ , ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ , ಜಿಲ್ಲಾ ಉಸ್ತುವಾರಿ ಪುಷ್ಪ ಶಿವಕುಮಾರ್ , ಡಿಡಿಪಿಐ ಕೃಷ್ಣಮೂರ್ತಿ , ಬಿಇಒ ನಾಗರಾಜಗೌಡ , ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್.ಚೌಡಪ್ಪ ,ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್ , ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ , ಮಾಗೇರಿ ನಾರಾಯಣಸ್ವಾಮಿ , ಶ್ರೀಕೃಷ್ಣ , ಎಸ್.ಮುನಿಯಪ್ಪ , ವಿಜಯಕುಮಾರ್ , ತಿಮ್ಮರಾಯಪ್ಪ , ಉಪನ್ಯಾಸಕರಾದ ಚಂದಪ್ಪಗೋಪಿಕೃಷ್ಣನ್ , ಮತ್ತಿತರರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.