ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ವತಿಯಿಂದ ಇಂದು ನಡೆದ “ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಜೂಮ್ ತಂತ್ರಜ್ಞಾನದ ವೇಬಿನರ್ ಮೂಲಕ ರಕ್ತದಾನದ ಜಾಗೃತಿ ಉಪನ್ಯಾಸ ಹಾಗೂ ರಕ್ತದಾನಿ ನಾಯಕರಿಗೆ ಗೌರವ ಅಭಿನಂದನಾ ನುಡಿಗಳನ್ನು” ಸಲ್ಲಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಹಾಗೂ ದೇಹದಾನವನ್ನು ಮಾಡಿರುವ, ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಕೊಡಕ್ಕಲ್ ಶಿವಪ್ರಸಾದ್ ರವರು ಮಾತನಾಡುತ್ತಾ”ವಾಸ್ತವವಾಗಿ ರಕ್ತ ದಾನ ಮಾಡುವುದರಿಂದ ನಮ್ಮ ದೇಹವು ಇನ್ನಷ್ಟು ಬಲಿಷ್ಠ ಗೊಳ್ಳುವುದಲ್ಲದೆ, ಹಳೆಯ ರಕ್ತವು ಹೋಗಿ ಹೊಸ ರಕ್ತವು ದೇಹದಲ್ಲಿ ತುಂಬಿಕೊಂಡು ಮನಸ್ಸು ಧನ್ಯತೆಯ ಭಾವವನ್ನು ಹೊಂದುತ್ತದೆ, ಎಂದು ಬಹಳಷ್ಟು ಜನರು ಅರ್ಥ ಮಾಡಿಕೊಳ್ಳಬೇಕು.ಅಂತಹ ಅರ್ಥವಂತಿಕೆಗೆ ನಮ್ಮ “ವಿಶ್ವ ಮಾನವ ಕುವೆಂಪು ಫೌಂಡೇಶನ್ ” ಒಂದು ಒಳ್ಳೆಯ ಅವಕಾಶಗಳ ವೇದಿಕೆಯಗಬಲ್ಲುದು ಎಂದು ಖಂಡಿತವಾಗಿ ಹೇಳಬಹುದು” ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ರಕ್ತದಾನಿ ದಿನಾಚರಣೆಯ ಜಾಗೃತಿ ಉಪನ್ಯಾಸವನ್ನು ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಹಾಗೂ VKF ರಾಜ್ಯ ಗೌರವ ಸಲಹೆಗಾರರಾದ ಜೆ.ಜಿ.ನಾಗರಾಜ್ ರವರು ಮಾತನಾಡುತ್ತಾ “ರಕ್ತದಾನದ ಮಹತ್ವ, ರಕ್ತದಾನದಿಂದ ಆಗುವ ಪ್ರಯೋಜನಗಳು, ರಕ್ತ ನೀಡಿದ ಮಹಾನ್ ರಕ್ತದಾನಿ ಹಾಗೂ ರಕ್ತ ಪ್ರಯೋಜನ ಪಡೆದ ವ್ಯಕ್ತಿಯ ನಡುವಿನ ಸಂಬಂಧಗಳು, ವಿಶ್ವಮಾನವ ಕುವೆಂಪು ಫೌಂಡೇಶನ್ ಮೂರು ವರ್ಷಗಳಿಂದ ನಡೆದು ಬಂದ ರಕ್ತದಾನದ ಹಾದಿಯ ಬಗ್ಗೆ ಮಾತನಾಡುತ್ತಾ ” ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ನಾವು ಕೈ ಜೋಡಿಸಬೇಕು, ಆಪತ್ತಿನಲ್ಲಿರುವವರಿಗೆ ರಕ್ತವೆಂಬ ಜೀವದ್ರವ್ಯ ಒದಗಿಸುವ ಮೂಲಕ ಸಹಕಾರ ಮಾಡಬೇಕು, ಆ ಹಾದಿಯಲ್ಲಿ ಸಾಗುತ್ತಿರುವ ವಿ.ಕೆ.ಎಫ್ ಗೆ ನಾವು ಸಹ ಬೆಂಬಲಿಸೋಣಾ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡಿ “ತುರ್ತು ರಕ್ತದ ಅಗತ್ಯತೆ ಇರುವವರಿಗೆ ನೇರ ರಕ್ತದಾನಿಯನ್ನು, ಹಾಗೂ ರಕ್ತನಿಧಿ ಕೇಂದ್ರದಿಂದ ರಕ್ತವನ್ನು ಒದಗಿಸಿ ಜೀವ ಉಳಿಸುವ ಕಾರ್ಯವನ್ನು ವಿ.ಕೆ.ಎಫ್ ಮಾಡುತ್ತಿದೆ. ಮುಂದೆಯೂ ಸಹ ಕರ್ನಾಟಕ, ತಮಿಳು ನಾಡು ಹಾಗೂ ಆಂದ್ರಪ್ರದೇಶ ರಾಜ್ಯಗಳಲ್ಲಿ ರಕ್ತದ ಪೂರೈಕೆ ಮಾಡಿ ಜೀವ ಉಳಿಸುವ ಕೆಲಸವನ್ನು ನಿತ್ಯ ನಿರಂತರವಾಗಿ ಉಚಿತವಾಗಿ ಕೆಲಸ ಮಾಡಲಿದೆ” ಎಂದರು.
ವಿಶ್ವ ರಕ್ತದಾನಿ ದಿನಾಚರಣೆಯಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ವಿ.ಕೆ.ಎಫ್ ನ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಸುನೀಲ್ ಕುಮಾರ್, ಹಾವೇರಿ ನಾಗಪ್ಪ ಅಂಗಡಿ, ಹುಬ್ಬಳ್ಳಿ ಮಂಜುನಾಥ್ ರಾಮ್, ಉಪ್ಪರಪ್ಪಲ್ಲಿ ಹರೀಶ್, ದೊಡ್ಡಿ ಪ್ರವೀಣ್, ನೀತಿನ್ ಕುಮಾರ್, ಚಂದ್ರಶೇಖರ್, ಮಹಿಳಾ ಘಟಕದ ಆಶಾ, ಶಿವಕುಮಾರ್, ಬೈರಕೂರು ತುಳಸೀರಾಮ್, ವೇಣುಗೋಪಾಲ್, ಹಾಗೂ ಇತರೆ ರಕ್ತದಾನಿಗಳು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.