ಶಿವಮೊಗ್ಗ(ವಿಶ್ವಕನ್ನಡಿಗ ನ್ಯೂಸ್): SSF ಶಿವಮೊಗ್ಗ ಜಿಲ್ಲೆ ಇದರ ಅಧಿಕೃತ ಯೂಟ್ಯೂಬ್ ಚಾನೆಲ್ 2021 ಜೂನ್ 15 ರ ಮಂಗಳವಾರ ರಾತ್ರಿ 08:00 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ನಾಯಕರುಗಳಾದ ಸಯ್ಯಿದ್ ಶಹೀದುದ್ದೀನ್ ಅಲ್ ಬುಖಾರಿ (ಶಿವಮೊಗ್ಗ ತಂಙಳ್) ಹಾಗೂ ಸಯ್ಯಿದ್ ಅಬೂಬಕ್ಕರ್ ಸಿದ್ದೀಖ್ ಅಲ್ ಹಾದಿ (ತೀರ್ಥಹಳ್ಳಿ ತಂಙಳ್) ಇವರ ನೇತೃತ್ವ ಹಾಗೂ ದುಆ ಮೂಲಕ ನಡೆಯಲಿದೆ.
SSF ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ, SSF ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಉಮರುಲ್ ಫಾರೂಖ್ ಝುಹ್ರಿ, SSF ಶಿವಮೊಗ್ಗ ಜಿಲ್ಲಾ ಫೈನಾನ್ಸ್ ಸೆಕ್ರೆಟರಿ ರಶೀದ್ ಮದನಿ ಸಹಿತವಿರುವ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ. ಈ ಚಾನೆಲ್ ಮೂಲಕ ಮುಂಬರುವ ದಿನಗಳಲ್ಲಿ ಹಲವಾರು ಯೋಜನೆಗಳಿಂದ ಕಂಗೊಳಿಸಿ ಜನಮನ ಗೆಲ್ಲಲಿದೆ ಎಂದು SSF ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾದಾತ್ ಶಿವಮೊಗ್ಗ ವರದಿಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.