ಮಂಜೇಶ್ವರ(ವಿಶ್ವಕನ್ನಡಿಗ ನ್ಯೂಸ್): ಲಾಕ್ಡೌನ್ ಮತ್ತು ಅತಿವೃಷ್ಠಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಶಂಸನಾರ್ಹವಾದ ಹಾಗೂ ಮಾದರೀ ಸಮಾಜ ಸೇವೆಗಳಿಗೆ ಮುಂದಾಳುತ್ವ ವಹಿಸುತ್ತಿರುವ ಮಂಜೇಶ್ವರ ಎಸ್.ಡಿ.ಪಿ.ಐ ವಲಂಟಿಯರ್ಸ್ ತಂಡಕ್ಕೆ ಮಂಜೇಶ್ವರ ಪ್ರವಾಸ ಲೋಕ – ವಾಟ್ಸಪ್ ತಂಡವು ವಾತ್ಸಲ್ಯದ ಕೊಡುಗೆಯಾಗಿ ನೀಡಿದ ಹುಲ್ಲು ಕತ್ತರಿಸುವ ಯಂತ್ರ ಮತ್ತು ಹೊಗೆ ಯಂತ್ರ ಗಳನ್ನು ಎಸ್ಡಿಪಿಐ ಜಿಲ್ಲಾಧ್ಯಕ್ಷ ಇಕ್ಬಾಲ್ ಹೊಸಂಗಡಿ ಹಾಗೂ ಎಸ್ಡಿಪಿಐ ಮಂಡಲ ಅಧ್ಯಕ್ಷ ಅನ್ಸಾರ್ ಹೊಸಂಗಡಿಯವರಿಗೆ ಹಸ್ತಾಂತರಿಸಿದರು.
ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಚೆಯರ್ಮೆನ್ ಹಮೀದ್ ಹೊಸಂಗಡಿ, ಪಾಪ್ಯುಲರ್ ಫ್ರಂಟ್ ಮಂಜೇಶ್ವರ ಡಿವಿಷನ್ ಅಧ್ಯಕ್ಷರಾದ ಶಬೀರ್ ಪೊಸೋಟ್ಟು, ಎಸ್ಡಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಮುಬಾರಕ್ ಕಡಂಬಾರ್, ಎಸ್ಡಿಪಿಐ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಅಶ್ರಫ್ ಬಡಾಜೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.