ಉಸಿರು ತಂಡದ ಆದಿವಾಸಿಗಳಿಗಾಗಿ ಅನ್ನಯಾನ ಅಭಿಯಾನದಲ್ಲಿ ಕೈ ಜೋಡಿಸಿದ ದುಬೈ ಹೆಮ್ಮೆಯ ಕನ್ನಡಿಗರು, ಯುಎಇ
ಅಬುಧಾಬಿ (www.vknews.com) : ಸಪ್ತ ಸಾಗರ ದಾಟಿ ಅರಬರ ಮರುಭೂಮಿ ಮಾಯಾನಗರಿ ದುಬೈಯಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲುಸುತ್ತಿರುವ ಹಲವು ಕನ್ನಡ ವೈದ್ಯರು ತಾಯಿನಾಡಿನಲ್ಲಿ ಕೋವಿಡ್ ಲಾಕ್ಡೌನ್ ನಿಂದಾಗಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಕಾಡುಪ್ರದೇಶಗಳಲ್ಲಿ ಜೀವಿಸತ್ತಿರುವ ಬುಡಕಟ್ಟು ಆದಿವಾಸಿ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಆಹಾರ ಕಿಟ್ ನೀಡಲು ಆರ್ಥಿಕ ಸಹಾಯ ನೀಡಿ ಸಹಕರಿಸಿದ್ದಾರೆ,
ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಕಳೆದ ಹಲವು ದಿನಗಳಿಂದ ನಡೆಸುತ್ತಿರುವ ತಾಯಿನಾಡಲ್ಲಿ ಆಹಾರ ವಿತರಣಾ ಅಭಿಯಾನ ದಲ್ಲಿ ಕೈ ಜೋಡಿಸಿದ ಸಂಯುಕ್ತ ಅರಬ್ ಸಂಸ್ತಾನದ ಕನ್ನಡ ಡಾಕ್ಟರುಗಳು 100ಕ್ಕಿಂತಲೂ ಹೆಚ್ಚು ಕುಟುಂಬಕ್ಕೆ ಬೆಂಗಳೂರಿನ ಉಸಿರು ತಂಡದ ಸಹಾಯದೊಂದಿಗೆ ಚಾಮರಾಜನಗರ ನಾಗರಹೊಳೆ ಮತ್ತು ಎಚ್ ಡಿ ಕೋಟೆಯಲ್ಲಿರುವ ಬುಡಕಟ್ಟು ಪ್ರದೇಶಗಳಲ್ಲಿ ಆಹಾರ ಕಿಟ್ ವಿತರಿಸಿದರು, 1000ಕ್ಕಿಂತಲೂ ಹೆಚ್ಚು ಆದಿವಾಸಿ ಕುಟುಂಬಳಿಗೆ ಉಸಿರು ತಂಡದ ಮುಂದಾಳತ್ವದಲ್ಲಿ ಇನ್ನಿತರ ಸಾಮಾಜಿಕ ಕನ್ನಡ ಪರ ಸಂಘಟನೆಗಳು ಕೈಜೋಡಿಸಿ ದಿನಸಿ ಕಿಟ್ ತಲುಪಿಸಲಾಗಿದೆ,
ಸಂಯುಕ್ತ ಅರಬ್ ಸಂಸ್ತಾನದಲ್ಲಿರುವ ಸ್ವದೇಶೀ ನಾಗರಿಕರ ಸಹಿತ 198 ರಾಷ್ಟ್ರಗಳ ವಿದೇಶಿ ಪ್ರಜೆಗಳ ಅರೋಗ್ಯ ಕಾಪಾಡುದರ ಜೊತೆಗೆ ತಾಯಿನಾಡ ಬಡವರ ಬಗ್ಗೆ ಕಾಳಜಿ ವಹಿಸಿದ ಅನಿವಾಸಿ ಕನ್ನಡ ವೈದ್ಯರು ಮಾನವೀಯತೆಯನ್ನು ದ್ವಿಗಣಗೊಳಿಸಿದ್ದಾರೆ.
ಆಹಾರ ಪದಾರ್ಥ, ಮನೆಗೆ ಹಾಸಲು ಟಾರ್ಫಾಲ್ ಮತ್ತು ದಿನಸಿ ಕಿಟ್ ವಿತರಿಸುವ ಉಸಿರು ತಂಡದಲ್ಲಿ ಪವನ್ ದರೆಗುಂಡಿ, ಮಾದೇಶ ಗೌಡ, ಚಂದನ್ ಗೌಡ, ಚಿನ್ಮಯ್, ಪ್ರಜ್ವಲ್, ನವೀನ್, ಶಿವರಾಜ್, ಶ್ರೀಹರ್ಷ ಇದ್ದರು ಹಾಗೂ ಹೆಮ್ಮೆಯ ದುಬೈ ಕನ್ನಡ ಸಂಘದ ರಫೀಕಲಿ ಕೊಡಗು, ಡಾ.ಸವಿತಾ ಮೈಸೂರು ಮತ್ತು ಹಾದಿಯ ಮಂಡ್ಯ ಉಸಿರು ತಂಡದ ಜೊತೆಗೂಡಿ ದೂರದ ದುಬೈಯಿಂದ ಬೇಕಾದ ವ್ಯಸ್ಥೆಗಳನ್ನು ನೆರವೇರಿಸಿದರು.
ಹೆಮ್ಮೆಯ ಕನ್ನಡಿಗರು ತಂಡದ ಕೈಲಾದ ಸಹಾಯವನ್ನು ದೂರದ ಕಾಡುಪ್ರದೇಶಗಳಿಗೆ ಹೋಗಿ ಬುಡಕಟ್ಟು ಜನಾಂಗದ ಬಡವರಿಗೆ ತಲುಪಿಸಿದ ಉಸಿರು ತಂಡಕ್ಕೆ ಹೆಮ್ಮೆಯ ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು ಅವರು ಧನ್ಯವಾದಗಳನ್ನು ತಿಳಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.