ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಎಸ್.ಡಿ.ಪಿ.ಐ ಪಕ್ಷದ 12ನೇ ಸಂಸ್ಥಾಪನಾ ದಿನವಾದ ಜೂನ್ 21’ರಂದು ಬೆಳಿಗ್ಗೆ 9’ಘಂಟೆಗೆ ಉಚ್ಚಿಲ ಗುಡ್ಡೆ ಜಂಕ್ಷನ್ನಲ್ಲಿ SDPI ಸೋಮೇಶ್ವರ ಪುರಸಭಾ ಸಮಿತಿ ಅಧ್ಯಕ್ಷರಾದ ಮೊಯ್ದಿನ್ ಕುಟ್ಟಿ ತಲಪ್ಪಾಡಿ ಧ್ವಜಾರೋಹಣ ಕಾರ್ಯವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮುಭಾರಕ್ ವೆಲ್ಫೇರ್ ಅಸೋಸಿಯೇಷನ್ (ರಿ)ಉಚ್ಚಿಲ ಇದರ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಈ ದೇಶದಲ್ಲಿ ಹಿರಿಯರ ತ್ಯಾಗ ಬಲಿದಾನಗಳನ್ನು ನೆನಪಿಸುತ್ತಾ ಭಾರತ ದೇಶವು ಭಾರತದ ಪ್ರತಿಯೊಬ್ಬರಿಗೂ ಸೇರಿದ್ದು ಮಾತ್ರವಲ್ಲದೆ ಯಾವುದೇ ಒಂದು ಧರ್ಮ, ಸಮುದಾಯಕ್ಕೆ ಮೀಸಲಿರಿಸಲಾಗಿಲ್ಲ. ಇಲ್ಲಿರುವ ಪ್ರತಿಯೊಬ್ಬರಿಗೂ ಸಮಬಾಳು, ಸಮಪಾಲು ಹಕ್ಕಿದೆಯೆಂದರು.
ಮಾನವೀಯ ಮೌಲ್ಯಗಳಿಂದ ಕೂಡಿದ ಹೊಸ ಸಮಾಜವನ್ನು ಸೃಷ್ಟಿಸುವುದು ನಮ್ಮೆಲ್ಲರ ಗುರಿಯಾಗಬೇಕೆಂದರು. ಮಹಾಮಾರಿ ಕೋವಿಡ್ ಕಾಲದಲ್ಲಿ ಕೋವಿಡ್ನಿಂದ ಮೃತಪೆಟ್ಟ ರೋಗಿಗಳ ಶವಗಳನ್ನು ವಿಲೇವಾರಿ ಮಾಡುವಲ್ಲಿ,ಅಶಕ್ತ ರೋಗಿಗಳ ಆಸ್ಪತ್ರೆ ಬಿಲ್ಲುಗಳ ಬರಿಸುವಲ್ಲಿ, ಮತ್ತು ರಕ್ತ, ಆಕ್ಸಿಜೆನ್ ಅವಶ್ಯಕತೆ ಇರುವವರಿಗೆ ವ್ಯವಸ್ಥೆ ಮಾಡಿಕೊಡುವುದರ ಮೂಲಕ ಎಸ್ಪಿಪಿಐ ಪಕ್ಷವು ಸಮಾಜಮುಖಿ ಕಾರ್ಯದಲ್ಲಿ ಯಾವುದೇ ತಾರತಮ್ಯವಿಲ್ಲದೆ ಮುತುವರ್ಜಿಯಿಂದ ಕೆಲಸ ಮಾಡುವುದನ್ನು ನಾವುಗಳು ಕಾಣುತ್ತಿದ್ದೇವೆಂದು ಪಕ್ಷದ ಕಾರ್ಯ ಚಟುವಟಿಕೆಗಳ ಮೆಚ್ಚುಗೆ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಎಸ್ಡಿಪಿಐ ಪಕ್ಷವು ಎಲ್ಲ ಜನವರ್ಗಗಳನ್ನು ಒಗ್ಗೂಡಿಸಿಕೊಂಡು ಭಾರತ ದೇಶದಲ್ಲಿ ಫ್ರಭಲ ಪಕ್ಷವಾಗಿ ಬೆಳೆಯಲು ಎಲ್ಲಾ ಅವಕಾಶಗಳು ಇದೆಯೆಂದು ಪ್ರತಿಪಾದಿಸಿದರು.
ಈ ಸಂದರ್ಭ ಕೋಟೆಕಾರ್ ಪಟ್ಟಣ ಸಮಿತಿ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ, ಕೋಟೆಕಾರ್ ಪಟ್ಟಣ ಪಂಚಯತ್ ಕೌನ್ಸಿಲರಾದ ಝುಲೇಖ ಬಶೀರ್, ಹಾಗೂ ಪಕ್ಷದ ಮುಖಂಡರುಗಳಾದ ಅಬ್ದುಲ್ ಅಝೀಝ್ ಉಚ್ಚಿಲ್, ಇಲ್ಯಾಸ್ ತಲಪ್ಪಾಡಿ, ಜಾಫರ್ ಅಜ್ಜಿನಡ್ಕ, ಷರೀಫ್ ತಲಪ್ಪಾಡಿ ಮತ್ತು ಊರಿನ ಹಿರಿಯರಾದ ಎಮ್.ಎಚ್ ಪೋಕರ್ ಕುಞಿ, ಯು.ಪಿ ಮೊಹಮ್ಮದ್ ಮತ್ತು ಪಕ್ಷದ ಹಿತೈಷಿಗಳು ಉಪಸ್ಥಿತರಿದ್ದರು.
ಅಬ್ದುಲ್ ನಝೀರ್ U.G ಸ್ವಾಗತಿಸಿದರು, ಇಬ್ರಾಹಿಂ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.