ಜೆದ್ದಾ(www.Vknews.in): ಎರಡು ಬೇರೆ ಬೇರೆ ಕೊವಿಡ್ ವ್ಯಾಕ್ಸಿನ್ ಗಳ ಎರಡು ಡೋಸ್ ಗಳನ್ನು ಪಡೆಯಲು ತನ್ನ ನಾಗರೀಕರಿಗೆ ಹಾಗೂ ವಿದೇಶಿಗಳಿಗೆ ಸೌದಿ ಅರೇಬಿಯಾ ಬುಧವಾರ ಅನುಮತಿ ನೀಡಿದೆ. ಸಾಂಕ್ರಾಮಿಕ ರೋಗಗಳ ಸೌದಿ ರಾಷ್ಟ್ರೀಯ ವೈಜ್ಞಾನಿಕ ಸಮಿತಿಯ ಅನುಮೋದನೆಯ ನಂತರ ಈ ಕ್ರಮ ಅನುಸರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬುಧವಾರ ತಿಳಿಸಿದೆ.
ಈ ಅನುಮೋದನೆಯು ಅಂತರರಾಷ್ಟ್ರೀಯ ವೈಜ್ಞಾನಿಕ ಅಧ್ಯಯನಗಳಿಗೆ ಅನುಗುಣವಾಗಿದ್ದು,ಎರಡು ವಿಭಿನ್ನ ಕರೋನವೈರಸ್ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ತೋರಿಸಿದೆ ‘ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಹೊಸ ನಿರ್ಧಾರದ ಪ್ರಕಾರ, ಜನರು ಸೌದಿಯಲ್ಲಿ ಲಭ್ಯವಿರುವ ಲಸಿಕೆಗಳಲ್ಲಿ ಎರಡು ವಿಭಿನ್ನ ಲಸಿಕೆಗಳ ಮೊದಲ ಮತ್ತು ಎರಡನೆಯ ಡೋಸನ್ನು ಪಡೆಯಬಹುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.