ಸೋಮವಾರಪೇಟೆ(www.vknews.com): ಜೂನ್ 26 ಸಮಸ್ತ ಸ್ಥಾಪನಾ ದಿನದ ಅಂಗವಾಗಿ SKSSF ಕೊಡಗು ಜಿಲ್ಲಾ ಸಮಿತಿಯ ನಿರ್ದೇಶನದಂತೆ, SKSSF ಸೋಮವಾರಪೇಟೆ ಶಾಖೆ ಹಾಗೂ SKSSF ಕುಶಾಲನಗರ ವಲಯದ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲಾ ಒಳ ರೋಗಿಗಳಿಗೆ ಹಾಗೂ ಕೊರೋನ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಣ್ಣು ಹಂಪಲು ಗಳನ್ನು ವಿತರಿಸಲಾಯಿತು.
ಉಸ್ತಾದ್ ನಾಸಿರ್ ದಾರಿಮಿ ಕೂಡಿಗೆರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ತಾಲ್ಲೂಕು ಆಸ್ಪತ್ರೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಸತೀಶ್ ಕುಮಾರ್ ರವರ ಸಮ್ಮುಖದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಸೋಮವಾರಪೇಟೆ ಶಾಖಾಧ್ಯಕ್ಷರಾದ ರಾಹಿಲ್ ಬಶೀರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ SKSSF ಸೋಮವಾರಪೇಟೆ ಶಾಖೆ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ನೌಶಾದ್, ಕೋಶಾಧಿಕಾರಿ ಅಬ್ದುಲ್ ರಝಾಕ್ ಬಜೆಗುಂಡಿ, ಅಶ್ರಫ್ ಮುಸ್ಲಿಯಾರ್ ಕೂಡಿಗೆ ಹಾಗೂ ಸದಸ್ಯರುಗಳಾದ ಅಶ್ರಫ್ ಬಜೆಗುಂಡಿ, ಫಾರೂಖ್ ಸೋಮವಾರಪೇಟೆ, ಇರ್ಫಾನ್ ಬಜೆಗುಂಡಿ, ಫಾಝಿಲ್ ಬಜೆಗುಂಡಿ, ಅರ್ಶಾದ್ ಬಜೆಗುಂಡಿ ಮತ್ತು ಇನ್ನಿತರ ಸದಸ್ಯರುಗಳು ಭಾಗವಹಿಸಿದ್ದರು. ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆ ಸಿಬ್ಬಂದಿಗಳು ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.