ಮಾಲೂರು (ವಿಶ್ವ ಕನ್ನಡಿಗ ನ್ಯೂಸ್) : ಜೈ ಭುವನೇಶ್ವರಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ಲಕ್ಕೂರು ಗ್ರಾಮದ ಎಲ್ಲಾ ಯುವ ಪದಾಧಿಕಾರಿಗಳು ನಾಡಪ್ರಭು ಕೆಂಪೇಗೌಡ ರವರ 512 ನೇ ಜನ್ಮ ದಿನಾಚರಣೆಯನ್ನು ಲಕ್ಕೂರು ಬಸ್ ನಿಲ್ದಾಣದಲ್ಲಿ ಕೋವಿಡ್ ನಿಯಮದ ಪ್ರಕಾರ ಬಹಳ ವ್ಯವಸ್ಥಿತವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಲೂರಿನ ಶಾಸಕರಾದ ಕೆ.ವೈ.ನಂಜೇಗೌಡ ರವರು ಮಾತನಾಡುತ್ತಾ “ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ, ವ್ಯಾಪಾರ ವಹಿವಾಟಿಗೆ ಅನೇಕ ಪೇಟೆಗಳನ್ನು ಕಟ್ಟಿ, ಬೆಂಗಳೂರು ಎಂಬ ಮಹಾನಗರವನ್ನು ನಿರ್ಮಿಸಿದ ಕೆಂಪೇಗೌಡರ ಸ್ಮರಣೆಯನ್ನು ಬಹಳ ಉತ್ತಮವಾಗಿ ಆಯೋಜಿಸುವ ಮೂಲಕ ಊರಿನ ಯುವ ಉತ್ಸಾಹಿಗಳು ನಮನ ಸಲ್ಲಿಸುತ್ತಿರುವುದು ಶ್ಲಾಘನೀಯ, ಈ ರೀತಿಯ ಮಹನೀಯರ ಜನುಮದಿನಾಚರಣೆಗಳನ್ನು ಉತ್ತಮ ಕಾರ್ಯಗಳನ್ನು ಮಾಡುವುದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಲೂರಿನ ಸಮಾಜ ಸೇವಕರು, ಜೆ.ಡಿ.ಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ರವರು ಮಾತನಾಡುತ್ತಾ “ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರ ದೃಷ್ಟಿಯಲ್ಲಿ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕದ ರಾಜ್ಯದ ರಾಜಧಾನಿಯಾಗಿ ವಿಶ್ವಮಟ್ಟದಲ್ಲಿ ಹೆಸರುಗಳಿಸಿರುವುದು ದೊಡ್ಡ ಸಾಧನೆ. ಇವರು ಮಹಾನ್ ಆದರ್ಶ ಆಡಳಿತಗಾರರು ಆಗಿದ್ದರು. ಇವರ ಹಾದಿಯಲ್ಲಿ ಯುವ ಜನಾಂಗ ಸಾಗುವ ಮೂಲಕ ಸಾಧನೆಯ ಪಥದತ್ತ ಹೆಜ್ಜೆ ಇಡಿ” ಎಂದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಹಿರಿಯರು ಹಾಗೂ ನಿವೃತ್ತ ಶಿಕ್ಷಕರಾದ ಜಗದೇನಹಳ್ಳಿ ಮುನಿಯಪ್ಪ ರವರು, ಸ್ವಾಗತವನ್ನು ಲಕ್ಕೂರು ಎಂ ನಾಗರಾಜ್, ಹಾಗೂ ನಿರೂಪಣೆಯನ್ನು ಪುರುಷೋತ್ತಮ್ ರವರು ಮಾಡಿದರು.
ಕಾರ್ಯಕ್ರಮದಲ್ಲಿ ಲಕ್ಕೂರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಚೇತನ್ ಗೌಡ, ಕೋಲಾರ ಭಾರತೀಯ ಜನತಾ ಪಾರ್ಟಿ ಕಾರ್ಯದರ್ಶಿ ಸಿ.ಜಿ.ಹರೀಶ್ ಗೌಡ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಬಾಳಿಗಾನಹಳ್ಳಿ ಶ್ರೀನಿವಾಸ್, ಮುಖಂಡರಾದ ಕೆ.ವಿ.ನಾರಾಯಣಸ್ವಾಮಿ, ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ವಿ.ನಾಗೇಶ್, ಯುವ ಕಾಂಗ್ರೇಸ್ ಮುಖಂಡರಾದ ಉಮೇಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಚಂದ್ರ, ಹಾಲಿ ಸದಸ್ಯರಾದ ರಮೇಶ್, ನಟೇಶ್, ಸುಬ್ರಮಣಿ, ಉಮೇಶ್ ಗೌಡ ಇತರರು ಹಾಜರಿದ್ದರು.
ಜೈ ಭುವನೇಶ್ವರಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಲಕ್ಕೂರಿನ ಸಮಸ್ತ ಎಲ್ಲಾ ಪದಾಧಿಕಾರಿಗಳು, ಮುಖಂಡರು,ಹಾಗೂ ಗ್ರಾಮಸ್ಥರು ಹಾಜರಿದ್ದು ಎಲ್ಲಾರಿಗೂ ಸಿಹಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ವರದಿ: ಲಕ್ಕೂರು ಎಂ. ನಾಗರಾಜ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.