ದುಬೈ (ವಿಶ್ವಕನ್ನಡಿಗ ನ್ಯೂಸ್): ಪ್ರವಾಸಿ ಇಂಡಿಯಾ ( ಟೀಮ್ ವೆಲ್ಫೇರ್) ಮತ್ತು ಶಾಂತಿ ಪ್ರಕಾಶನ ಯುಎಇ ಯ ಸಹಯೋಗದಲ್ಲಿ ದುಬೈಯ ಅಲ್ ಖುಸೈಸ್ ನಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಶಾಂತಿ ಪ್ರಕಾಶನ ತಂಡದ ಅಬ್ದುಲ್ ಸಲಾಮ್ ದೇರಳಕಟ್ಟೆ, ಔಸಫ್, ಅಫಾಮ್ ಮತ್ತು ಅಕ್ಬರ್ ನೀರ್ಕಜೆ ಯವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಮಾಜ ಸೇವೆಯಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿರುವ ಟೀಮ್ ವೆಲ್ಫೇರ್ ಮತ್ತು ಶಾಂತಿ ಪ್ರಕಾಶನ ಯುಎಇ ತಂಡವು ಅನಿವಾಸಿಗಳಿಗೆ ಸಾಂತ್ವನದ ಹಸ್ತವನ್ನು ಚಾಚುತ್ತಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.