ಲಕ್ಕೂರು: (ವಿಶ್ವ ಕನ್ನಡಿಗ ನ್ಯೂಸ್): ಕ್ಲೊರೈಡ್ ಮೆಟಲ್ ಕಂಪನಿಯವರ ಸಿ.ಎಸ್.ಆರ್ ಫಂಡ್ ನಿಂದ ಲಕ್ಕೂರು ಹೋಬಳಿ ಚಿಕ್ಕತಿರುಪತಿ ಪಂಚಾಯಿತಿ ವ್ಯಾಪ್ತಿಯ ಜಗದೇನಹಳ್ಳಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಆದ ಹಿನ್ನಲೆಯಲ್ಲಿ ಗ್ರಾಮದ ಪ್ರತಿ ಮನೆಗೂ ನೀರಿನ ಕ್ಯಾನ್ ವಿತರಿಸುವ ಕಾರ್ಯ ಮಾಡಲಾಯಿತು.
ನೀರಿನ ಕ್ಯಾನ್ ನೀಡುತ್ತಾ ಮಾತನಾಡಿದ ಜಗದೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ವಿದ್ಯಾ ಗುರುನಾಥ ರೆಡ್ಡಿ ಮಾತನಾಡುತ್ತಾ “ನಮ್ಮ ಗ್ರಾಮದಲ್ಲಿ ಉದ್ಘಾಟನೆಯಾಗಿರುವ ಶುದ್ದ ಕುಡಿಯುವ ನೀರಿನ ಘಟಕದ ಹಿನ್ನೆಲೆಯಲ್ಲಿ ಪ್ರತಿ ಮನೆ ಮನೆಗೂ ಸಹ ನೀರನ್ನು ಸುಲಭವಾಗಿ ಹಿಡಿದುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಇಂದು ನೀರಿನ ಕ್ಯಾನ್ ನೀಡುವ ಮೂಲಕ ಜನರ ಸೇವೆಗೆ ನಾವು ಹಾಗೂ ಎಲ್ಲಾ ನಮ್ಮೂರಿನ ಗ್ರಾಮಸ್ಥರು ಸದಾ ಸಿದ್ದ” ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೇನಹಳ್ಳಿ ಗುರುನಾಥ ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿದ್ಯಾ, ಲಕ್ಷಮ್ಮ, ಗ್ರಾಮದ ಮುಖಂಡರಾದ ಶ್ರೀಧರ್ ರೆಡ್ಡಿ, ಪ್ರಭಾಕರ್ ರೆಡ್ಡಿ, ಮುನಿಕೃಷ್ಣ, ಅನಂದ್, ಪ್ರವೀಣ್, ಮಿಧುನ್, ಮಂಜುನಾಥ್, ಚೇತನ್, ಲಕ್ಕಸಂದ್ರ ನಾಗೇಶ್ ಹಾಗ್ಯ್ಯ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.