ಮಾಲೂರು:(ವಿಶ್ವ ಕನ್ನಡಿಗ ನ್ಯೂಸ್): ಇಂದು ನಾಡಪ್ರಭು ಕೆಂಪೇಗೌಡರ 512 ನೆಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷದ ಮಾಲೂರು ಮಂಡಲದ ವತಿಯಿಂದ ಪಕ್ಷದ ಕಛೇರಿ (ನಂಜುಂಡಪ್ಪ ಕಾಂಪ್ಲೆಕ್ಸ್) ಯಲ್ಲಿ ಪಕ್ಷದ ಅಧ್ಯಕ್ಷರಾದ ಪುರ ನಾರಾಯಣ ಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರು, ಬಿ.ಜೆ.ಪಿ ಪಕ್ಷದ ಪ್ರಮುಖರಾದ ಹನುಮಂತಪ್ಪ ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ “ನಾಡ ಪ್ರಭು ಕೆಂಪೇಗೌಡರು ಅಂದಿನ ಕಾಲದ ವೈಭವೋಪೇತ ಹಂಪಿಯ ವಿಜಯನಗರದ ರೀತಿಯಲ್ಲಿ ವಿಶ್ವ ಪ್ರಸಿದ್ದವಾದ ಬೆಂಗಳೂರು ನಗರವನ್ನು ಸುಂದರವಾಗಿ. ವ್ಯವಸ್ಥಿತವಾಗಿ ನಿರ್ಮಾಣ ಮಾಡಿದ ಅವರ ಕಾರ್ಯ ಶಕ್ತಿ. ದೂರದೃಷ್ಟಿ. ಮುಂದಾಲೋಚನೆ ಸಂಘಟಿತವಾದ ಅವರು ಆದರ್ಶ ವ್ಯಕ್ತಿಯಾಗಿ ಈ ನಾಡನ್ನು ನಿರ್ಮಾಣ ಮಾಡಿದ ರೀತಿಯಲ್ಲಿ ನಮ್ಮ ಪಕ್ಷದ ಪ್ರತಿಯೊಬ್ಬ ಮುಖಂಡರು ಕಾರ್ಯಕರ್ತ ರು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಪಕ್ಷ ಸಂಘಟನೆ ಬಲಪಡಿಸಲು ಶ್ರಮಿಸುವಂತೆ ಹಿತವಚನ” ಹೇಳಿದರು.
ಪುರಸಭಾ ಸದಸ್ಯರಾದ ಎಂ.ರಾಮಮೂರ್ತಿ ಮಾತನಾಡುತ್ತಾ “ವಿಜಯನಗರ ಸಾಮ್ರಾಜ್ಯದ ಸಾಮಂತರಲ್ಲಿ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ರವರ ಕೊಡುಗೆ ಅಪಾರ. ಪ್ರಪಂಚದಲ್ಲಿ ಮುಂಜೂಣಿಯಲ್ಲಿರುವ ಬೆಂಗಳೂರು ಮಹಾನಗರ ಇಂದು ಎತ್ತರಕ್ಕೆ ಬೆಳೆಯುತ್ತಿದೆ ಎಂದರೆ ಮಹಾನ್ ವ್ಯಕ್ತಿ ಕೆಂಪೇಗೌಡ ರವರ ಅಪಾರ ಶ್ರಮದ ಪ್ರತಿಫಲ ಎಂದರೆ ತಪ್ಪಗಲಾರದು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷರಾದ ಪುರ ನಾರಾಯಣಸ್ವಾಮಿ ಮಾತನಾಡಿ “ಇಂದು ಬೆಂಗಳೂರು ನಗರ ಮಹಾನಗರವಾಗಲು ಕಾರಣಿಪೂತರಾದ ಮಹಾನ್ ವ್ಯಕ್ತಿ ಕೆಂಪೇಗೌಡರು, ಇವರು ಯಾವುದೋ ಒಂದು ಜಾತಿಗೆ ಸಿಮೀತವಾದ ವ್ಯಕ್ತಿ ಅಲ್ಲ ಇವರು ಸರ್ವಜನಾಂಗದ ಸ್ಪೂರ್ತಿಯ ಶಕ್ತಿ ಆಗಿದ್ದಾರೆ ಇವರ ಹಾದಿಯಲ್ಲಿ ನಾವು ಸಾಗೋಣಾ” ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರಾದ ಹನುಮಪ್ಪ ರವರು. ಸುಬ್ರಮಣಿರೆಡ್ಡಿರವರು. ದೇವರಾಜ ರೆಡ್ಡಿ ರವರು. ರಾಮಮೂರ್ತಿ ರವರು ನಂಜುಂಡಪ್ಪರವರು. ಪದ್ಮಾವತಿ ಮೇಡಂ ರವರು ಇನ್ನೂ ಮುಂತಾದ ಅನೇಕ ಮುಖಂಡರು ಪಧಾದಿಕಾರಿಗಳು ಕಾರ್ಯಕರ್ತ ಬಂದುಗಳು ಭಾಗವಹಿಸಿದ್ದರು .
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.