ಜೆದ್ದಾ(www.vknews.in): ಎರಡೂ ಡೋಸ್ ಕೊವಿಡ್ ವ್ಯಾಕ್ಸಿನ್ ಸ್ವೀಕರಿಸಿದವರಲ್ಲಿ ಯಾರೊಬ್ಬರೂ ಕೊವಿಡ್ ನಿಂದ ಮರಣ ಹೊಂದಿಲ್ಲ ಎಂದು ಸೌದಿ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಕೊವಿಡ್ ಗಿರುವ ಏಕೈಕ ಪರಿಹಾರ ಮಾರ್ಗವೆಂದರೆ ವ್ಯಾಕ್ಸಿನ್ ಮಾತ್ರವಾಗಿದೆ. ವ್ಯಾಕ್ಸಿನ್ ಸ್ವೀಕರಿಸುವುದರಿಂದ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗುವುದಲ್ಲದೇ ವೈರಸ್ ವಿರುದ್ಧ ಪ್ರತಿರೋಧ ಶಕ್ತಿಯು ಅಧಿಕವಾಗುತ್ತದೆ. ವ್ಯಾಕ್ಸಿನ್ ಸ್ವೀಕರಿಸಿದವರಲ್ಲಿ ಕರೋನಾ ವೈರಸ್ ಸೋಂಕು ಕಂಡುಬಂದರೂ ಕೂಡ ಅದು ಉಲ್ಬಣಗೊಳ್ಳುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ ಎಂದೂ ಆರೋಗ್ಯ ಸಚಿವಾಲಯವು ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.