ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : ತಾಲೂಕಿನ ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಭೇಟಿ ನೀಡಿ ಅಲ್ಲಿ ಸಾರ್ವಜನಿಕರಿಗೆ ಲಸಿಕಾ ಕೇಂದ್ರದ ವ್ಯವಸ್ಥೆ , ಕೊರೋನ ರೋಗಿಗಳ ಚಿಕಿತ್ಸೆಯ ಸೌಲಭ್ಯಗಳನ್ನು ಪರಿಶೀಲಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸುವುದು ಸರಕಾರದ ಧೈಯವಾಗಿದೆ ಅದನ್ನು ವ್ಯವಸ್ಥಿತವಾಗಿ ಜಾರಿ ಮಾಡುವುದು ಅಧಿಕಾರಿಗಳ ಕೆಲಸವಾಗಿರುತ್ತದೆ ಆಸ್ಪತ್ರೆಯಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಬೇಕು ಇಲ್ಲಿ ಆಸ್ಪತ್ರೆಯಲ್ಲಿ ಔಷಧೀಯಗಳು ಸ್ಟಾಕ್ ಇಲ್ಲವಾದಾಗ ಅವುಗಳನ್ನು ತರಿಸಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾಡಬೇಕು ಅದು ಬಿಟ್ಟು ವಿನಾಕಾರಣ ಆಸ್ಪತ್ರೆಯಲ್ಲಿ ಕೂತು ಮೊಬೈಲ್ ನೋಡಿಕೊಂಡು ಸಮಯ ವ್ಯರ್ಥ ಮಾಡುವುದಲ್ಲ ನಿಮ್ಮ ಕೆಲಸ ಸಾಮಾನ್ಯ ಜನರಿಗೂ ಆಸ್ಪತ್ರೆಯಲ್ಲಿ ಸೇವೆ ಸಿಗುವಂತೆ ಸ್ಪಂದಿಸುವಂತಾಗಬೇಕು.
ಸ್ಥಳೀಯ ಹೋಬಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರೋಗ್ಯ ಉಪಕೇಂದ್ರ , ಪ್ರಾಥಮಿಕ ಆರೋಗ್ಯ ಕೇಂದ್ರ , ಸಮುದಾಯ ಆರೋಗ್ಯ ಕೇಂದ್ರಗಳು ಸುಸಜ್ಜಿತವಾಗಿ ಅಗತ್ಯ ಸೇವೆ ಒದಗಿಸಿದರೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಜನ ಅಲೆದಾಡುವುದು ತಪ್ಪಲಿದೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಜತೆಗೆ ಅತ್ಯಾಧುನಿಕ ಉಪಕರಣ ಸಹಿತ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ನಿಮ್ಮ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ಈಗಾಗಲೇ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಕೊರೋನಾ ಬಂದ ನಂತರ ಜನಪ್ರತಿನಿಧಿಗಳ ಅನುದಾನವನ್ನು ಕೇವಲ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಾ ಇದೆ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರದ ಗಮಗಕ್ಕೆ ತಂದು ಆರೋಗ್ಯ ಕೇಂದ್ರಕ್ಕೆ ಒತ್ತು ನೀಡುವಂತೆ ಮನವಿ ಮಾಡಲಾಗಿದೆ . ಜನರು ದೂರದ ನಗರ ಪ್ರದೇಶಗಳಿಗೆ ಹೋಗದೆ ಕ್ಷೇತ್ರದಲ್ಲಿ ನಿರ್ಮಾಣವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳುವಂತೆ ಮಾಡುವುದು ಎಲ್ಲರ ಉದ್ದೇಶವಾಗಬೇಕು ಎಂದರು
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಚರಣ್ ಮಾತನಾಡಿ ಆಸ್ಪತ್ರೆಯಲ್ಲಿನ ಕುಂದುಕೊರತೆಗಳ ಬಗ್ಗೆ ವಿವರಿಸುವ ಜೊತೆಗೆ ನಮ್ಮ ಆಸ್ಪತ್ರೆ ವ್ಯಾಪ್ತಿಯಲ್ಲಿ ಸುಮಾರು ೪೦ ಹಳ್ಳಿಗಳು ಇದ್ದು ೩೦ ಸಾವಿರ ಜನಸಂಖ್ಯೆ ಹೊಂದಿದೆ ತುಂಬಾ ಹಳೆ ಕಟ್ಟಡ ಇದ್ದು ಆಸ್ಪತ್ರೆಗೆ ಎರಡು ಎಕರೆ ಜಾಗ ಗುರುತಿಸಿದ್ದು ಮುಂದಿನ ದಿನಗಳಲ್ಲಿ ಮಾದರಿ ಪಿಎಲ್ಸಿ ಕೇಂದ್ರವಾಗಿ ಮಾಡಲಾಗುವುದು ಎಂದರು .
ಭೇಟಿಯ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು , ಸಮಾಜ ಸೇವಕ ಸಿಎಂಆರ್ ಶ್ರೀನಾಥ್ , ತಾಪಂ ಸದಸ್ಯ ಎಂ ಪಾಲಾಕ್ಷಿಗೌಡ , ವಕ್ಕಲೇರಿ ಗ್ರಾಪಂ ಉಪಾಧ್ಯಕ್ಷೆ ಚಿನ್ನಮ್ಮ , ಸದಸ್ಯರಾದ ಲೋಕೇಶ್ , ಆನಂದ್ ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.