ಜೆದ್ದಾ(www.Vknews.in): ಕೊವಿಡ್ ಸಾಂಕ್ರಾಮಿಕದ ಕಾರಣದಿಂದ ಸುಮಾರು ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿರುವ ಸೌದಿ ಅರೇಬಿಯಾ ಹಾಗೂ ಭಾರತದ ನಡುವಿನ ನೇರ ವಿಮಾನ ಹಾರಾಟವನ್ನು ಶೀಘ್ರವೇ ಪುನರಾರಂಭಿಸುವ ಕುರಿತು ಉಭಯ ದೇಶಗಳ ವಿದೇಶಾಂಗ ಸಚಿವರು ಮಾತುಕತೆ ನಡೆಸಿದರು. ಜಿ20 ಶೃಂಗಸಭೆಗೆ ಮುನ್ನ ವಿದೇಶಾಂಗ ಸಚಿವರ ಸಭೆಯಲ್ಲಿ ಈ ಮಾತುಕತೆ ಇಟಲಿಯಲ್ಲಿ ನಡೆಯಿತು. ಸೌದಿ ವಿದೇಶಾಂಗ ಸಚಿವರಾದ ಫೈಸಲ್ ಬಿನ್ ಫರ್ಹಾನ್ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್.ಜಯಶಂಕರ್ ಈ ಕುರಿತು ಪರಸ್ಪರ ಚರ್ಚಿಸಿದರು. ಭಾರತದಲ್ಲಿ ದೈನಂದಿನ ಕೊವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಉಭಯ ದೇಶಗಳ ನಡುವೆ ನೇರ ವಿಮಾನಯಾನ ಶೀಘ್ರವೇ ಪುನರಾರಂಭಿಸಲು ಇದು ಸಕಾಲ ಎಂದು ಎಸ್.ಜಯಶಂಕರ್ ಸೌದಿ ವಿದೇಶಾಂಗ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಸೌದಿ ವಿದೇಶಾಂಗ ಸಚಿವರಿಂದ ಈ ಕುರಿತು ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.