ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) :-ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಟ್ಟಿಗೆ ಪ್ರಯತ್ನಿಸೋಣ . 2 ನೇ ಹಂತದ ಕೆ.ಸಿ ವ್ಯಾಲಿ ನೀರನ್ನು , ಎತ್ತಿನಹೊಳೆ ಯೋಜನೆ ಮತ್ತು ಯರಗೋಳ್ ಜಲಾಶಯದ ಸಮಸ್ಯೆಗಳನ್ನು ಶೀಘ್ರವಾಗಿ ಸಣ್ಣ ನೀರಾವರಿ ಸಚಿವರು ಮತ್ತು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೋಲಾರ ಅಮಾನಿಕೆರೆಯ ಅಂಗಳದಲ್ಲಿ ಹಮ್ಮಿಕೊಂಡಿದ್ದ , ಕೋಲಾರ ಅಮಾನಿಕೆರೆ ಅಭಿವೃದ್ಧಿ ಹಾಗೂ ಸುಂದರೀಕರಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈ ಕೆರೆಯ ಅಭಿವೃದ್ಧಿ ಮತ್ತು ಜಿಲ್ಲೆಗೆ ಬೇಕಾಗುವ ನೀರನ್ನು ಪೂರೈಸಲಾಗುವುದು . ಜಿಲ್ಲೆಯು ಹಸಿರೀಕರಣವಾಗಬೇಕು ಎಂದು ತಿಳಿಸಿದರು . ಸಂಪೂರ್ಣ ದಿನಗಳ ಕನಸು ನನಸಾಗುವ ಸಂದಲ್ಲ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ , ತುಂಬಾ ಬಂದಿದೆ.
ಕೋಲಾರ ಅಮಾನಿಕೆರೆಯು 800 ಎಕರೆ ವಿಸ್ತೀಣಾ ಹೊಂದಿದ್ದು , 18 ದಿನಗಳ ಕಾಲ ಸ್ವಚ್ಛತಾ ಕಾರ್ಯವನ್ನು ಮಾಡಲಾಗಿದೆ . 27 ಎಕರೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ . ಅಟಲ್ ಭೂಜಲ್ ಯೋಜನೆಯಲ್ಲಿ ಅಂತರ್ಜಲ ವೃದ್ಧಿಸಲು ಚೆಕ್ ಡ್ಯಾಮ್ಗಳನ್ನು ನಿರ್ಮಿಸಲಾಗುವುದು . ಕೆ.ಸಿ.ವ್ಯಾಲಿ ನೀರಿನಿಂದ ಜಿಲ್ಲೆಯಲ್ಲಿ 85 ಕೆರೆಗಳು ಮತ್ತು 113 ಚೆಕ್ ಡ್ಯಾಮ್ಗಳು ತುಂಬಿದೆ ಎಂದರು. ಜಿಲ್ಲೆಯಲ್ಲಿ ಅತಿ ಹೆಚ್ಚು ಕೆರೆಗಳು ಇದ್ದು , ಕೆರೆಗಳ ಒತ್ತುವರಿ , ರಾಜಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು ಹಾಗೂ 2 ನೇ ಹಂತದ ಕೆ.ಸಿ.ವ್ಯಾಲಿ ನೀರನ್ನು ಹರಿಸಬೇಕು . ಎತ್ತಿನಹೊಳೆ ಯೋಜನೆಯ ಅಡೆತಡೆಗಳನ್ನು ಶೀಘ್ರವಾಗಿ ನಿರ್ಮೂಲನೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಮೇಶ್ ಕುಮಾರ್ ಅವರು ಮಾತನಾಡಿ , ಕೋಲಾರ ಅಮಾನಿಕೆರೆಯ ಅಭಿವೃದ್ಧಿ ಮತ್ತು ಸುಂದರೀಕರಣದಿಂದ ಇದೊಂದು ಜನರಿಗೆ . ಪ್ರವಾಸಿತಾಣವಾಗಲಿದೆ. ಜಿಲ್ಲೆಯ ರೈತರ ಪರಿಸ್ಥಿತಿಯನ್ನು ಅರ್ಥೈಸಿ 2 ನೇ ಹಂತದ ಕೆ.ಸಿ.ವ್ಯಾಲಿ ನೀರನ್ನು 400 ಎಂ.ಎಲ್.ಡಿ ಗಿಂತ ಹೆಚ್ಚಾಗಿ ಪೂರೈಸಿ , ನೀರನ್ನು ಅನಧಿಕೃತವಾಗಿ ಬಳಸಿಕೊಳ್ಳತ್ತಿರುವರ ಬಗ್ಗೆ ಪರಿಶೀಲನೆ ನಡೆಸಿ ಎಲ್ಲಿ ನೀರನ್ನು ಶೇಖರಣೆ ಮಾಡುವುದಕ್ಕೆ ಸಾಧ್ಯವೋ ಅಲ್ಲಿ ನೀರನ್ನು ತುಂಬಿಸಿ , ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಕೆರೆಗಳನ್ನು ಉಳಿಸಿ , ಎತ್ತಿನಹೊಳೆ ಯೋಜನೆ ಮತ್ತು ಯರಗೋಳ್ ಡ್ಯಾಮ್ ಶೀಘ್ರವಾಗಿ ಪೂರ್ಣಗೊಳಿಸಿ , ಜಿಲ್ಲೆಯ ಜನರ ಬದುಕನ್ನು ಬದಲಾಯಿಸಿ ಎಂದು ಸಚಿವರಿಗೆ ತಿಳಿಸಿದರು , ಕಾರ್ಯ ಮಾಡಿ ವಿಧಾನ ಪರಿಷತ್ ಸದಸ್ಯರಾದ ಡಾ || ಕೆ.ವೈ. ನಾರಾಯಣಸ್ವಾಮಿ ಅವರು ಮಾತನಾಡಿ , ಕೋಲಾರ ಜಿಲ್ಲೆಯಲ್ಲಿ 4240 ಕೆರೆಗಳು ಇವೆ , ನಾವು ಕೆರೆಗಳನ್ನು ಕಟ್ಟಕ್ಕೆ ಸಾಧ್ಯವಾಗಲ್ಲ ಆದರೆ ಕೆರೆಗಳನ್ನು ರಕ್ಷಣೆ ಮಾಡುವ ಅಂತರ್ಜಲ ಮಟ್ಟವನ್ನು ವೃದ್ಧಿಸಬೇಕು ಎಂದರು. ಕೆ.ಸಿ.ವ್ಯಾಲಿ , ಎತ್ತಿನಹೊಳೆ ಮತ್ತು ಯರಗೋಳ್ ಯೋಜನೆಗಳು ಜಿಲ್ಲೆಯ ಜನರ ಜೀವನಾಡಿಯಾಗಿದೆ ಶೀಘ್ರವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು ,
ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ . ಶ್ರೀನಿವಾಸಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೋಲಾರ ಅಮಾನಿಕೆರೆಯು ಒಂದು ಕಾಲದಲ್ಲಿ ವಿಜೃಂಭಿಸುತ್ತಿತ್ತು . ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಬಂದಿರುವುದರಿಂದ ಜಿಲ್ಲೆಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ || ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್ , ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್ , ಗೋವಿಂದರಾಜು , ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣಬೈರೇಗೌಡ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಓಂಶಕ್ತಿ ಚಲಪತಿ , ನಗರಸಭೆ ಅಧ್ಯಕ್ಷರಾದ ಶ್ವೇತಾ ಶಬರೀಶ್ , ಉಪಾಧ್ಯಕ್ಷರಾದ ಪ್ರವೀಣ್ , ಸದಸ್ಯರಾದ ಬಿ.ಎಂ. ಮುಬಾರಕ್ , ಜಿಲ್ಲಾಧಿಕಾರಿಗಳಾದ ಡಾ | ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು , ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಕುಮಾರ್ , ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ , ತಹಶೀಲ್ದಾರರಾದ ಶೋಭಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.