ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ವಿಶ್ವಮಾನವ ಕುವೆಂಪು ಕುವೆಂಪು ಫೌಂಡೇಶನ್ (ರಿ.) VKF ನ ರಕ್ತದಾನ ಸೇವೆ ಮಾಡಿ ಜೀವ ಉಳಿಸುವ ಮಹತ್ತರ ಸೇವೆಯ ಕರೆಗೆ ಓಗೂಟ್ಟು, ಕರೋನಾ ಲೆಕ್ಕಿಸದೇ, ಇಲ್ಲೋಬ್ಬ ಅಪರೂಪದ ರಕ್ತದಾನಿ ಮಾಲೂರಿನಿಂದ ಯಲಹಂಕದ ಲಯನ್ಸ್ ರಕ್ತನಿಧಿ ಕೇಂದ್ರಕ್ಕೆ ತೆರಳಿ ರಕ್ತದಾನ ಮಾಡಿ ಜೀವ ಉಳಿಸಿರುವ ಘಟನೆ ನಡೆದಿದೆ.
ಮಾಲೂರಿನ ಚೊಕ್ಕಂಡಹಳ್ಳಿ ಮಡಿವಾಳ ಗ್ರಾಮದ 32 ವರ್ಷದ ಶ್ರೀಮತಿ ಅರುಣಾ ಎಂಬುವವರಿಗೆ ತೀವ್ರ ತರಹದ ರಕ್ತಹೀನತೆ ಆದ ಕಾರಣ ತುರ್ತು ರಕ್ತದ ಅವಶ್ಯಕತೆ ಇದೆ ಎಂಬ ಮನವಿಯನ್ನು ಅರುಣಾ ರವರ ಸಂಬಂಧಿ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್ ಕುಮಾರ್ ರವರನ್ನು ಸಂಪರ್ಕಿಸಿ ಕರೆಮಾಡಿ ಮಾಹಿತಿ ಪಡೆದು ನಂತರ VKF ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ರವರಿಗೆ ತಿಳಿಸುವ ಮೂಲಕ ಕೈ ಜೋಡಿಸಿದ್ದಾರೆ. ಇದಾದ ನಂತರ VKF ನ 228 ರಕ್ತದಾನದ ಗುಂಪುಗಳಿಗೆ ಮಾಹಿತಿ ರವಾನೆ ಮಾಡಿದ ಕೇವಲ 5 ನಿಮಿಷದ ಒಳಗಾಗಿ ಅಪರೂಪದ ರಕ್ತದ ಗುಂಪಿನ ರಕ್ತದಾನಿ ರಕ್ತ ನೀಡಲು ಒಪ್ಪಿದ್ದಾರೆ.
ಮಾಲೂರು ತಾಲ್ಲೂಕಿನ ಲಿಂಗಾಪುರ ಗ್ರಾಮದ ಯುವ ಉತ್ಸಾಹಿ ಎ.ನೆಗೆಟಿವ್ ರಕ್ತದ ಗುಂಪಿನವನಾದ ಇತ ಹೆಣ್ಣಿಗೆ ರಕ್ತ ನೀಡಿ ಜೀವ ಉಳಿಸಲು ಲಿಂಗಾಪುರದಿಂದ 49 ಕಿ.ಮೀ ಪ್ರಯಾಣ ಮಾಡಿ ರಕ್ತ ನೀಡಿ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದ ಇತನಿಗೆ ಎಲ್ಲಾರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ನಿಜಕ್ಕೂ ಕರೋನಾ ಸಂಕಷ್ಟ, ವ್ಯಾಕ್ಸಿನ್ ಹಾಕಿಸಿಕೋಂಡು ಜನ ರಕ್ತದಾನ ಮಾಡಲು ಹಿಂದೆಟು ಹಾಕುತ್ತಿರುವಾಗ ದೂರದ ಪ್ರಯಾಣ ಮಾಡಿದ ಈ ಯುವಕನಿಗೆ VKF ಹೃದಯಪೂರ್ವಕ ಅಭಿನಂದನೆ ಅರ್ಪಿಸುತ್ತದೆ.
ಈ ರಕ್ತದಾನಿ ನಾಯಕರಿಗೆ ತಾವು ಶುಭಾಶಯ ಅರ್ಪಿಸುವುದಾದರೆ ಕರೆಮಾಡಿ ಶುಭಾಶಯ ಅರ್ಪಿಸಿ. ಪ್ರೇಮ್ ಕುಮಾರ್ : 9108217511.
ರಕ್ತದಾನ ಸಹಾಯವಾಣಿ 24×7 ಕರೆಮಾಡಿ VKF. 9900538954 / 8277094649.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.