(www.vknews.in)
ಕೋವಿಡ್ ಮಹಾ ಮಾರಿಯ ಹೆಸರಿನಲ್ಲಿ ಶಾಲೆಗಳು ಮಕ್ಕಳಿಂದ ದೂರವಾಗಿ 16 ತಿಂಗಳುಗಳಾಗಿದ್ದು, ಮಕ್ಕಳು ಶಿಕ್ಷಣ ವಂಚಿತರು,ಪೌಷ್ಟಿಕತೆ ಕೊರತೆ,ಬಾಲಕಾರ್ಮಿಕ ತೆ,ಬಾಲ್ಯ ವಿವಾಹ ದಂತಹ ಪಿಡುಗುಗಳಿಗೆ ಬಲಿಯಾಗುತ್ತಿದ್ದಾರೆ.
ಸರಕಾರಕ್ಕೆ ಸುಮಾರು 1 ವರ್ಷದಿಂದ ಎಸ್ಡಿಎಂಸಿ ಸಮನ್ವಯ ವೇದಿಕೆ ಹಾಗೂ ಸಮಾನ ಮನಸ್ಕರಿಂದ ಹಲವು ತರದ ಮನವಿಗಳನ್ನು ಕೊಟ್ಟರು ಶಾಲೆ ತೆರೆಯುವ ಬಗ್ಗೆ ಯಾವುದೇ ತೀರ್ಮಾನ ಕೈ ಗೊಳ್ಳುತ್ತಿರಲಿಲ್ಲ. ಅದಲ್ಲದೆ ಸರಕಾರದ ತಾಂತ್ರಿಕ ಸಮಿತಿಯು ಶಾಲೆ ತೆರೆಯಲು ಅನುಮತಿ ಕೊಡುತ್ತಿಲ್ಲ ಎನ್ನುವಂತಹ ಬಾಲಿಷವಾದ ಉತ್ತರವನ್ನು ಕೊಡುತ್ತಾ ನಮ್ಮೆಲ್ಲರ ಮನವಿಗಳನ್ನು ತಿರಸ್ಕರಿಸುವಲ್ಲಿ ಯಶಸ್ವಿ ಯಾಗಿತ್ತು.
ಆದರೆ ಈ ಶೈಕ್ಷಣಿಕ ವರ್ಷದ ಪ್ರಾರಂಭ ದಲ್ಲಿಯೇ ಸರಕಾರದ ತಾಂತ್ರಿಕ ಸಮಿತಿಯು ಶಾಲೆ ತೆರೆಯಲು ಅನುಕೂಲಕರವಾದ ವರದಿಯನ್ನು ನೀಡಿದ್ದು, ಸರಕಾರವು ಇನ್ನೂ ಕೂಡ ಶಾಲೆಯನ್ನು ತೆರೆಯುವ ಬಗ್ಗೆ ತೀರ್ಮಾನವನ್ನು ಕೈ ಗೊಳ್ಳದೆ ಇರುವುದು ಖಂಡನೀಯ ವಾಗಿದೆ.
5 ತಾರಿಕಿಗೆ ಕೋವಿದ್ ಅನ್ಲೋಕ್ ಪ್ರಕ್ರಿಯೆಯಲ್ಲಿ ಭಾಗಶಃ ಎಲ್ಲವನ್ನೂ ತೆರೆದು ಪ್ರವರ್ತಿಸಲು ಅನುಮತಿಯನ್ನು ನೀಡಿದ್ದು ಶಾಲೆಗಳನ್ನು ಮಾತ್ರ ತೆರೆಯದಿರುವುದು ದುರಾದೃಷ್ಟಕರ ವಾಗಿದೆ. ಅದಲ್ಲದೆ ಸರಕಾರದ ತಾಂತ್ರಿಕ ಸಮಿತಿಯು ಕೊಟ್ಟ ವರದಿಯಲ್ಲಿ ಪ್ರಪಂಚದ ಎಲ್ಲೂ ಕೂಡ ಶಾಲೆಗಳಿಂದ ಕೋವಿದ್ ಹರಡುತ್ತದೆ ಎನ್ನುವುದಕ್ಕೆ ದಾಖಲೆಗಳು ಇಲ್ಲ ಎಂದು ಸ್ಪಷ್ಟವಾಗಿ ಕೊಟ್ಟಿರುವಾಗ ನಮ್ಮ ಸರಕಾರ ಮಾತ್ರ ಶಾಲೆಗಳನ್ನು ಕೋವಿದ್ ಹರಡುವ ಕೇಂದ್ರವಾಗಿ ಪರಿಗಣಿಸಿರುವುದು ಯಾವ ಆಧಾರದಲ್ಲಿ ಎಂಬುದರ ಸ್ಪಷ್ಟತೆ ಸರಕಾರವೇ ಕೊಡಬೇಕಿದೆ..
ಕರ್ನಾಟಕದಲ್ಲಿರುವ 43000 ದಷ್ಟು ಪ್ರಾಥಮಿಕ ಶಾಲೆಗಳಲ್ಲಿ 25000 ದಷ್ಟು ಗ್ರಾಮೀಣ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 50 ಕ್ಕಿಂತ ಕಡಿಮೆ ಇರುವಾಗ ,ಮಾಲ್ ,ಮದುವೆಗೆ ಅನುಮತಿ ಕೊಟ್ಟು ಇಂತಹ ಶಾಲೆಗಳನ್ನು ಕೂಡ ತೆರೆಯಲು ಅನುಮತಿಸದೆ ಇರುವುದು ಸರಕಾರವು ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯಾವುದೇ ರೀತಿಯ ಪರಿಗಣನೆ ಕೊಡುವುದಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಯಾಗಿದೆ.
ಸರಕಾರಿ ಶಾಲೆಗಳ ಪೋಷಕರ ಪ್ರತಿನಿಧಿಗಳಾದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಗಳು ಶಾಲೆ ತೆರೆಯುವ ಬಗ್ಗೆ ಉತ್ಸಾಹವನ್ನು ಹೊಂದಿದ್ದು,ತಮ್ಮ ಮಕ್ಕಳು ವಿದ್ಯಾಭ್ಯಾಸ ರಹಿತರಾಗಿ ಇರುವುದನ್ನು ಸಹಿಸುವ ಮಾನಸಿಕ ಸ್ಥಿತಿಯಲ್ಲಿ ಈಗ ಇರುವುದಿಲ್ಲ. ಆದಷ್ಟು ಬೇಗ ಸರಕಾರವು ಶಾಲೆ ತೆರೆಯದೆ ಇದ್ದರೆ ಮಕ್ಕಳು ಮತ್ತು ಪೋಷಕರು ಬೀದಿಗೆ ಬಂದು ಪ್ರತಿಭಟಿಸುವ ದಿನಗಳು ದೂರವಿಲ್ಲ.
ಆದರಿಂದ ಸರಕಾರವು ಆದಷ್ಟು ಬೇಗ ಶಾಲೆ ತೆರೆಯಬೇಕು, ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಕೊಡುತ್ತಿದ್ದ ಬಿಸಿಯೂಟ,ಹಾಲು, ವಿಟಮಿನ್ ಮಾತ್ರೆಗಳನ್ನು ಶಾಲೆಗಳಲ್ಲಿ ಕೂಡಲೇ ದೊರೆಯುವಂತೆ ಮಾಡಬೇಕು. ಸಬಲೀಕರಣ ಸಮಿತಿ ವರದಿಯನ್ನು ಸರಕಾರವು ಕೂಡಲೇ ಜಾರಿಗೊಳಿಸಬೇಕು, ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಂದ ಮಕ್ಕಳು ಬಂದು ದಾಖಲಾತಿ ಯಾಗುವ ,ಹಾಗೂ ಸರಕಾರಿ ಶಾಲೆಗಳು ಮಕ್ಕಳಿಂದ ಕಂಗೊಳಿಸುವ ಸಮಯದಲ್ಲಿ ಬರುವ ಮಕ್ಕಳಿಗೆ ಪಠ್ಯ ಪುಸ್ತಕ, ಬೌತಿಕ ವಾದ ಪೀಠೋಪಕರಣ ಮತ್ತು ಶಿಕ್ಷಕರನ್ನು ಬರ್ತಿಮಾಡಬೇಕು, ಕನಿಷ್ಠ ಪಕ್ಷ ಕೂಡಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಆದೇಶವನ್ನು ಹೊರಡಿಸಬೇಕು. ಎಂಬ ವಿಷಯಗಳನ್ನು ಇಟ್ಟುಕೊಂಡು ಎಸ್ಡಿಎಂಸಿ ಸಮನ್ವಯ ವೇದಿಕೆ, ಗ್ರಾಮೀಣ ಭಾಗದ ಖಾಸಗಿ ಶಾಲೆಗಳ ಸಂಘಟನೆ (ರೂಪ್ಸಾ) , ಅನುದಾನಿತ ಶಾಲೆಗಳ ಸಂಘಟನೆ, ಖಾಸಗಿ ಕನ್ನಡ ಶಾಲೆಗಳ ಸಂಘಟನೆ ಮತ್ತು ಸುವರ್ಣ ಕರ್ನಾಟಕ ಖಾಸಗಿ ಶಾಲೆಗಳ ಸಂಘಟನೆಯು ಬೆಂಗಳೂರಿನಲ್ಲಿ ಜಂಟಿಯಾಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿ, ಮಾನ್ಯ ಶಿಕ್ಷಣ ಆಯುಕ್ತರಾದ ಶ್ರೀ ಅಂಬು ಕುಮಾರ್ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಪತ್ರಿಕಾ ಗೋಷ್ಠಿ ಹಾಗೂ ಮನವಿಯನ್ನು ಕೊಡುವ ನಿಯೋಗದಲ್ಲಿ ಖ್ಯಾತ ಶಿಕ್ಷಣ ತಜ್ಞರು,
ಸರಕಾರಿ ಶಾಲೆಗಳ ಸಬಲೀಕರಣದ ಹರಿಕಾರ, ಎಸ್ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕರು ಆದಂತಹ ಡಾ.ನಿರಂಜನಾರಾಧ್ಯ. ವಿ. ಪಿ, ಎಸ್ಡಿಎಂಸಿ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ರಾದ ಮೊಯಿದಿನ್ ಕುಟ್ಟಿ, ರುಪ್ಸಾ ದ ರಾಜ್ಯಾಧ್ಯಕ್ಷರಾದ ಲೋಕೇಶ್ ತಾಳಿಕಟ್ಟೆ ಎಸ್ಡಿಎಂಸಿ ಸಮನ್ವಯ ವೇದಿಕೆಯ ಪಾರ್ವತಿ ಜಿ ಎಸ್ ನ್ಯಾಮತಿ, ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಸಂಘದ ರಾಜ್ಯಾಧ್ಯಕ್ಷ ರಾದ ಸುನಿಲ್ ಹುಡಗಿ, ಅನುದಾನಿತ ಶಾಲಾ ಕಾಲೇಜು ಗಳ ಸಂಘದ ರಾಜ್ಯಾಧ್ಯಕ್ಷ ರಾದ ಜಿ. ಹನುಮಂತಪ್ಪ , ಅನುದಾನ ರಹಿತ ಕನ್ನಡ ಶಾಲೆಗಳ ಸಂಘದ ರಾಜ್ಯಾಧ್ಯಕ್ಷರಾದ ಶಿವಪ್ಪ, ಐಟಿ ಫಾರ್ ಚೇಂಜ್ ನ ಗುರುಮೂರ್ತಿ ಕಾಶಿನಾಥ್ ,
ಎಸ್ಡಿಎಂಸಿ ಸಮನ್ವಯ ವೇದಿಕೆಯ ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಮಾಥ್ಯು ಮುನಿಯಪ್ಪ , ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಆನಂದ್ ದೇವನಹಳ್ಳಿ ಉಪಸ್ಥಿತ ರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.