ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ):– ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 23 ಮಂದಿ ಕೊರೋನ ಸೋಂಕಿತರು ಮೃತಪಟ್ಟರು ಸರ್ಕಾರ ಯಾರ ವಿರುದ್ಧವೂ ಕ್ರಮಕೈಗೊಳ್ಳಲಿಲ್ಲ. ಇನ್ನು ವ್ಯವಸ್ಥೆ ಯಾವ ಕಡೆ ಸಾಗುತ್ತಿದೆ ಎಂದು ಶಾಸಕ ಕೆ.ಆರ್ . ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದರು , ಕೊರೋನ ಸಂದರ್ಭ ದಲ್ಲಿ ರಾಜ್ಯದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದರು. ಇದರ ಗಂಭೀರತೆ ಸಕಾರ ಕ್ಕೆ ಅರ್ಥವಾಗದೆ ಹೋಯಿತು. ವಿರೋಧ ಪಕ್ಷದವರು ಖಂಡಿಸಿದರೆ ವಾಸ್ತವ ಬಿಟ್ಟು , ಮೊದಲ , ಕೊನೇ ಮಾತು ಬಿತ್ತರಿ ಸುತ್ತದೆ ಎಂದು ಮಾಧ್ಯಮಗಳ ವಿರುದ್ಧ ಹರಿಯಾದರು.
ದೇಶದಲ್ಲಿ ರಫೆಲ್ ಮಾಫಿಯ ದಲ್ಲಿ ಆಗಿರುವ ಹಗರಣದ ಬಗ್ಗೆ ಫಾನ್ಸ್ನವರು ತನಿಖೆ ನಡೆಸಲು ಸಿದ್ದರಿದ್ದರು ನಮ್ಮ ದೆಶದವರು ಅವಕಾಶ ನೀಡುತ್ತಿಲ್ಲ. ಇವರು ಹಗರಣದಲ್ಲಿ ಭಾಗಿಯಾಗಿರುವು ದಲೇ ತನಿಖೆ ಬೇಡ ಎನ್ನುತ್ತಿದ್ದಾರೆ. ಯಾಕೆ ಹಗರಣ ಭಯಲಿಗೆ ಬರುತ್ತದೆ ಎಂಬ ಭಯವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ವ್ಯವಸ್ಥೆ ಯಾವ ಕಡೆ ಸಾಗುತ್ತಿದೆ ತಪ್ಪುಗಳನ್ನು ಕಂಡಿ ಸುತ್ತಿದ್ದರೂ ಬೆಂಬಲ ನೀಡಬೇಕಾದ ಮಾದ್ಯಮಗಳು ಇನ್ನು ಎಂತಹ ವಿಚಾರಗಳನ್ನು ಪ್ರಕಟಿಸುತ್ತಿದೆ. ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರೇ ಸರ್ಕಾರಕ್ಕೆ ಉತ್ತರ ಕೊಡತ್ತಾರೆ ಎಂದರು.
ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ದಿಕ್ಕು ಬದಲಾಗುತ್ತಿದೆ . ಜನರ , ರೈತರ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಹೆಚ್ಚು ಗಮನ ಹರಿಸಿದ್ದೇನೆ . ಓಟು ನೀಡಿದವರ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ , ಜನರ ಹಿತ ಕಾಯುವ ಕೆಲಸ ಮಾಡುತ್ತಿದ್ದೇವೆ ಎಂದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.