ಸುಳ್ಯ(ವಿಶ್ವಕನ್ನಡಿಗ ನ್ಯೂಸ್): SSF ಬೆಳ್ಳಾರೆ ಸೆಕ್ಟರ್ ಅಧ್ಯಕ್ಷರಾದ ಬಹುಃ ರಫೀಕ್ ಅಂಜದಿ ರವರ ಮನೆಗೆ ಡಿವಿಷನ್ ಸಮಿತಿ ನಾಯಕರು ಇಂದು ಬೆಳಿಗ್ಗೆ ಭೇಟಿ ನೀಡಿದರು. ಡಿವಿಷನ್ ಸಮಿತಿ ಸದಸ್ಯರೂ ಆಗಿರುವ ರಫೀಕ್ ಅಂಜದಿ ಯವರ ತಂದೆ ಆದಂ ಇಂದ್ರಾಜೆ ಯವರು ಮೊನ್ನೆ ವಿಧಿವಶರಾಗಿದ್ದರು.
ಡಿವಿಷನ್ ನಾಯಕರ ನಿಯೋಗವು ಅವರ ಮನೆಗೆ ತೆರಳಿ ಸಾಂತ್ವನ ಹೇಳಿ ತಹ್ಲೀಲ್ ಹಾಗೂ ದುಆಃ ನಡೆಸಿದರು. ಡಿವಿಷನ್ ಅಧ್ಯಕ್ಷರಾದ ಎ.ಎಂ.ಫೈಝಲ್ ಝುಹ್ ರಿ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಸಖಾಫಿ ಟಿ ಎಂ, SჄS ದಕ ಈಸ್ಟ್ ಜಿಲ್ಲಾ ಸದಸ್ಯ ಸಿದ್ದೀಕ್ ಕಟ್ಟೆಕಾರ್ಸ್, ಡಿವಿಷನ್ ಸಮಿತಿ ನಾಯಕರಾದ ಕಲಾಂ ಝುಹ್ ರಿ, ಸಿದ್ದೀಕ್ ಹಿಮಮಿ, ಸಿರಾಜುದ್ದೀನ್ ಸಅದಿ, ಸ್ವಬಾಹುದ್ದೀನ್ ಹಿಮಮಿ, ಖಲೀಲ್ ಝುಹ್ ರಿ, ನೌಶಾದ್ ಕೆರೆಮೂಲೆ, ಯೂನಿಟ್ ಕಾರ್ಯದರ್ಶಿ ಮುಝಮ್ಮಿಲ್ ಹಾಗೂ ಮನೆಯವರ ಸಹಿತ ಹಲವರು ಉಪಸ್ಥಿತರಿದ್ದರು._
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.