ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಬೆಳ್ಳಾರೆಯಲ್ಲಿ ನೂತನವಾಗಿ ಆರಂಭಿಸಿದ ಲೈಫ್ ಕೇರ್ ಕ್ಲೀನಿಕ್ ಗೆ ಎಸ್ಸೆಸ್ಸಫ್ ಸುಳ್ಯ ಡಿವಿಷನ್ ನಾಯಕರು ಶುಕ್ರವಾರ ಬೆಳಿಗ್ಗೆ ಬೇಟಿ ನೀಡಿದರು.
ಬೆಳ್ಳಾರೆ ಮುಖ್ಯ ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮುಂಭಾಗ ಇರುವ ರಾಯಲ್ ಕಾಂಪ್ಲೆಕ್ಸ್ ನಲ್ಲಿ ಲೈಫ್ ಕೇರ್ ಕ್ಲಿನಿಕ್ ಜುಲೈ 8 ರಂದು ನೂತನವಾಗಿ ಶುಭಾರಂಭಿಸಲಾಗಿತ್ತು.
ಜನರಿಗೆ ಆರೋಗ್ಯ ಸೇವೆ ನೀಡಲು ಹೊರಟಿರುವ ಡಾ.ರಿಝ್ವಾನ್ ರವರ ನೇತೃತ್ವದಲ್ಲಿರುವ ಲೈಫ್ ಕೇರ್ ಕ್ಲಿನಿಕ್ ಗೆ ಸುಳ್ಯ ಡಿವಿಷನ್ ನಾಯಕರು ಭೇಟಿ ನೀಡಿ ದುಆಃ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಎ.ಎಂ.ಫೈಝಲ್ ಝುಹ್ ರಿ, SჄS ದಕ ಈಸ್ಟ್ ಜಿಲ್ಲಾ ಸದಸ್ಯ ಸಿದ್ದೀಕ್ ಕಟ್ಟೆಕಾರ್ಸ್, ಡಿವಿಷನ್ ಸಮಿತಿ ನಾಯಕರಾದ ಕಲಾಂ ಝುಹ್ ರಿ, ಸಿದ್ದೀಖ್ ಹಿಮಮಿ, ಸ್ವಬಾಹುದ್ದೀನ್ ಹಿಮಮಿ, ಖಲೀಲ್ ಝುಹ್ ರಿ, ನೌಶಾದ್ ಕೆರೆಮೂಲೆ ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.